Seetha Raama: ಶಾಂತಮ್ಮನ ವಠಾರ ಯಾರಿಗೆ ಸಿಗುತ್ತೆ, ಲಾಯರ್ ರುದ್ರಪ್ರತಾಪ್‌ ಅಥವಾ ಭಾರ್ಗವಿ ದೇಸಾಯಿ?

By Sathish Kumar KH  |  First Published Oct 6, 2023, 9:45 AM IST

ಜೀ ಕನ್ನಡದ ಸೀತಾ ರಾಮ ಧಾರವಾಹಿಯಲ್ಲಿ ಶಾಂತಮ್ಮನ ವಠಾರದ ಸೀತಾಳ ಮನೆ ಈಗ ಯಾರ ಪಾಲಾಗಲಿದೆ ಎನ್ನುವುದು ಅತ್ಯಂತ ಕುತೂಹಲಕಾರಿ ವಿಚಾರವಾಗಿದೆ.


ಬೆಂಗಳೂರು (ಅ.06): ಜೀ ಕನ್ನಡ ವಾಹುನಿಯ ಸೀತಾರಾಮ ಧಾರಾವಾಹಿತ ಸೀತಾ ಒಬ್ಬಂಟಿ ಮಹಿಳೆಯಾಗಿದ್ದು, ತನ್ನ ಪುಟ್ಟ ಮಗಳೊಂದಿಗೆ ಬಸವನಗುಡಿಯ ಶಾಂತಮ್ಮನ ವಠಾರದಲ್ಲಿನ ಸ್ವಂತ ಮನೆಯಲ್ಲಿ ಮಧ್ಯಮ ವರ್ಗದವಳಾಗಿ ಜೀವನ ಮಾಡುತತಿದ್ದಾಳೆ. ಇನ್ನು ಸೀತಾಳ ಕಷ್ಟಕ್ಕೆ ಸ್ಪಂದಿಸುತ್ತರುವ ರಾಮ, ಸೀತಾಳ ಮಗಳು ಸಿಹಿಯ ಗುಡ್‌ ಫ್ರೆಂಡ್‌ ಆಗಿ ಎಲ್ಲ ನೆರವನ್ನೂ ನೀಡುತ್ತಿದ್ದಾನೆ. ಇನ್ನು ಸೀತಾಳ ಸ್ವಂತ ಮನೆಯನ್ನು ಸಾಲಕ್ಕೆ ಅಡಮಾನವಾಗಿ ಇಟ್ಟಿದ್ದು, ಅದನ್ನು ಬಿಡಿಸಿಕೊಳ್ಳು ಕಚೇರಿಯಿಂದ ಮುಂಗಡ ಸಂಬಳ ಪಾವತಿ ಸಿಗದೇ ಸೋತು ಹೋಗಿದ್ದಾಳೆ. ಈಗ ಈ ಮನೆಯ ಮಾರಾಟಕ್ಕೆ ಲಾಯರ್‌ ರುದ್ರಪ್ರತಾಪ್‌ ಹಾಗೂ ಸೀತಾಳ ಅಣ್ಣ-ಅತ್ತಿಗೆಯ ಕಣ್ಣು ಬಿದ್ದಿದೆ. ಜೊತೆಗೆ, ಭಾರ್ಗವಿ ಕೂಡ ಸಿತಾಳನ್ನು ತುಳಿಯಲು ಮುಂದಾಗಿದ್ದು, ಶಾಂತಮ್ಮನ ವಠಾರವನ್ನೇ ತನ್ನ ವಶಕ್ಕೆ ಪಡೆಯುತ್ತಾಳಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಸಾಲ ತೀರಿಸಲಾಗದೇ ಸೋತು ಹೋದ ಸೀತಾ: ಸೀತಾ ತನ್ನ ಮನೆಯನ್ನು ಉಳಿಸಿಕೊಳ್ಳಲು ರಾಮ್‌ ನೆರವಿನಿಂದ ಅಡ್ವಾನ್ಸ್‌ ಸ್ಯಾಲರಿ (ಮುಂಗಡ ಸಂಬಳ) ರೂ. 25 ಲಕ್ಷ ಹಣವನ್ನು ಪಡೆದು ಮನೆಯ ಮೇಲಿದ್ದ ಎಲ್ಲ ಸಾಲವನ್ನು ತೀರಿಸಿ ಮನೆ ಉಳಿಸಿಕೊಳ್ಳಲು ಮುಂದಾಗಿದ್ದಳು. ಆದರೆ, ರಾಮನ ಚಿಕ್ಕಮ್ಮ ಭಾರ್ಗವಿ ಮಾಡಿದ ಕಿತಾಪತಿಯಿಂದಾಗಿ ಸೀತಾಗೆ ಅಡ್ವಾನ್ಸ್‌ ಸಂಬಳ ಸಿಗಲೇ ಇಲ್ಲ. ಈಗ ಸೀತಾ ಮನೆ ಉಳಿಸಿಕೊಳ್ಳುವಲ್ಲಿ ಸೋತು ಹೋಗಿದ್ದು, ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ. ಈಗಾಗಲೇ ಸೀತಾಳ ಮೇಲೆ ಕಣ್ಣು ಹಾಕಿರುವ ಲಾಯರ್‌ ರುದ್ರಪ್ರತಾಪ್‌ ಸೀತಾಳ ಮನೆಯನ್ನು ಮಾರಿಸುವುದಾಗಿ ಬ್ಯಾಂಕ್‌ ನೋಟಿಸ್‌ ಕಳುಹಿಸಿ ಆಟವಾಡುತ್ತಿದ್ದಾನೆ.

Tap to resize

Latest Videos

ಕೆಜಿಎಫ್‌ನಲ್ಲೂ ಅನ್ಯಾಯ, ಈಗ ಸೀತಾರಾಮದಲ್ಲೂ ಅವಮಾನ! ಅಶೋಕ ಶರ್ಮಾ ಬೆಂಬಲಕ್ಕೆ ನಿಂತ ಫ್ಯಾನ್ಸ್‌

ಸೀತಾಳ ಕಚೇರಿಗೆ ಬಂದ ಬ್ಯಾಂಕ್‌ ಸಿಬ್ಬಂದಿ: ಮನೆಯ ಮೇಲಿನ ಸಾಲವನ್ನು ಮರು ಪಾವತಿ ಮಾಡುವುದಾಗಿ ಹೇಳುತ್ತಾ, ಲಾಯರ್‌ ರುದ್ರಪ್ರತಾಪ್‌ ಮೂಲಕ ಸಮಯ ಪಡೆದುಕೊಂಡಿದ್ದ ಸೀತಾಳ ಕಚೇರಿಗೆ ಸಾಲ ವಸೂಲಿಗೆ ಬ್ಯಾಂಕ್‌ ಸಿಬ್ಬಂದಿ ಬಂದು ಗಲಾಟೆ ಆರಂಭಿಸಿದ್ದಾರೆ. ಇನ್ನು ಸಾಲ ಮರುಪಾವತಿ ಮಾಡದೇ ಮನೆ ಮಾರಾಟದ ಚಿಂತನೆಯಲ್ಲಿದ್ದ ಸೀತಾಳ ಕಾರ್ಯವೂ ಅರ್ಧಕ್ಕೆ ಸ್ಥಗಿತಗೊಂಡಿದೆ. ಈಗ ಬ್ಯಾಂಕ್‌ ಸಿಬ್ಬಂದಿ ಸಾಲ ವಸೂಲಿಗೆ ಸೀತಾ ಕೆಲಸ ಮಾಡುವ ಕಚೇರಿಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ಈಗ ಸೀತಾ ಯಾವ ಮೂಲದಿಂದ ಮನೆ ಉಳಿಸಿಕೊಳ್ಳುತ್ತಾಳೆ. ಕಷ್ಟದ ಕಾಲದಲ್ಲಿ ತನ್ನ ಸ್ನೇಹಿತ ರಾಮ ತಾನೇ ಬಾಸ್‌ ಎಂದು ಹೇಳಿಕೊಂಡು ಕಷ್ಟಕಾಲದಲ್ಲಿ ಕೈ ಹಿಡಿಯುವನೇ ಅಥವಾ ಸೀತಾ ಲಾಯರ್‌ ರುದ್ರಪ್ರತಾಪ್‌ ಮೊರೆ ಹೋಗುವಳೇ ಎನ್ನುವುದು ಕುತೂಹಲಕಾರಿ ಆಗಿದೆ.

ಹಿರಿತೆರೆ ರಾಮಾಚಾರಿ, ಕಿರುತೆರೆಯ ರಾಮ ಇಬ್ಬರ ಖಾಸ ದೋಸ್ತ್ ಅಶೋಕ್ ಕಹಾನಿ ಇಲ್ಲಿದೆ…

ಯಾರ ಪಾಲಾಗಲಿದೆ ಶಾಂತಮ್ಮನ ವಠಾರ: ಬ್ಯಾಂಕ್‌ ಸಿಬ್ಬಂದಿ ಸೀತಾಳಿಂದ ಸಾಲ ವಸೂಲಿ ಮಾಡಲು ಮುಂದಾಗಿದ್ದು, ಸಾಲ ಕಟ್ಟದಿದ್ದರೆ ಮನೆ ಜಪ್ತಿ ಮಾಡುವುದು ಖಚಿತವಾಗಿದೆ. ಈ ವೇಳೆ ಯಾರಾದರೂ ಹಣ ಕೊಟ್ಟು ಸೀತಾಳ ಮನೆಯನ್ನು ಖರೀದಿ ಮಾಡುವ ಸಾಧ್ಯತೆಯೂ ಇದೆ. ಬಸವನಗುಡಿಯ ಶಾಂತಮ್ಮನ ವಠಾರದಲ್ಲಿರುವ ಸೀತಾಳ ಮನೆಯನ್ನು ಲಾಯರ್‌ ರುದ್ರಪ್ರತಾಪ್‌ ತಾನೇ ಖರೀದಿ ಮಾಡುವುದಾಗಿ ಹೇಳಿದ್ದಾನೆ. ಇನ್ನು ಲಾಯರ್‌ ಜೊತೆಗಿದ್ದುಕೊಂಡೇ ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿ ಸೀತಾಳಿಂದ ಲಕ್ಷಾಂತರ ರೂ. ಹಣ ದೋಚುವ ಮಸಲತ್ತನ್ನು ಸೀತಾಳ ಅಣ್ಣ ಅತ್ತಿಗೆ ಮಾಡುತ್ತಿದ್ದಾರೆ. ಇನ್ನು ಮುಂಗಡ ಅಡ್ವಾನ್ಸ್‌ ನೀಡದಿದ್ದರೂ ದೇಸಾಯಿ ಕಂಪನಿ ಉದ್ಯೋಗಿ ಸೀತಾಳಿಗೆ ತೊಂದರೆ ಕೊಡಲೆಂದು ಭಾರ್ಗವಿಯೇ ಸ್ವತಃ ಮನೆ ಖರೀದಿ ಮಾಡಲಿದ್ದಾಳೆಯೋ ನೋಡಬೇಕು...

click me!