ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗುರುವಾರ ತಮ್ಮ 41ನೇ ವರ್ಷದ ಜನ್ಮದಿನ ಆಚರಿಸಿಕೊಂಡರು. ಇದಕ್ಕೆ ರಾಜ್ಯದೆಲ್ಲಡೆಯಿಂದ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ. ಆದರೆ, ಡಾ.ಬ್ರೋ ಹಂಚಿಕೊಂಡ ಫೋಟೋ ಸಖತ್ ವೈರಲ್ ಆಗಿದೆ.
ನಟ ರಕ್ಷಿತ್ ಶೆಟ್ಟಿ ತಮ್ಮ 41ನೇ ಜನ್ಮದಿನವನ್ನು ಗುರುವಾರ ಆಚರಿಸಿಕೊಂಡಿದ್ದಾರೆ. ಸಿಂಪಲ್ ಸ್ಟಾರ್ ಜನ್ಮದಿನಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ರಾಜ್ಯದಲ್ಲೂ ಸಾಕಷ್ಟು ಸಿನಿರಂಗದ ಗಣ್ಯರು ರಕ್ಷಿತ್ ಶೆಟ್ಟಿಗೆ ಜನ್ಮದಿನದ ವಿಶ್ ತಿಳಿಸಿದ್ದಾರೆ. ಈ ನಡುವೆ ಡಾ.ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಮಾಡಿರುವ ವಿಶ್ ಎಲ್ಲರ ಗಮನಸೆಳೆದಿದೆ. ಇಂದು ತಮ್ಮ ಯೂಟ್ಯೂಬ್ ವಿಡಿಯೋ ಮೂಲಕವೇ ಕೋಟ್ಯಂತರ ಜನರನ್ನು ತಲುಪಿರುವ ಡಾ.ಬ್ರೋ ರಾಜ್ಯದ ಮನೆಮಾತಾಗಿದ್ದಾರೆ. ಸೋಶಿಯಲ್ ಮೀಡಿಯಾ ಹೊಕ್ಕಿರುವವರಿಗೆ ಡಾ.ಬ್ರೋ ಹೊಸಬರೇನಲ್ಲ. ಕುಳಿತಲ್ಲೇ ರಾಜ್ಯದ ಜನರಿಗೆ ವಿದೇಶದ ಜನರು ಅಲ್ಲಿನ ಪರಿಸ್ಥಿತಿ ಹಾಗೂ ರಾಜಕೀಯವನ್ನು ಅತ್ಯಂತ ಸರಳ ಭಾಷೆಯಲ್ಲಿ ಅವರು ವಿವರಿಸುವ ಶೈಲಿ ಸಖತ್ ಇಷ್ಟವಾಗಿದೆ. ಇಂದು ಯೂಟ್ಯೂಬ್‌ನಿಂದಲೇ ಡಾ.ಬ್ರೋ ಲಕ್ಷಾಂತರ ಹಣದೊಂದಿಗೆ ಅಪಾರ ಅಭಿಮಾನಿಗಳನ್ನೂ ಗಳಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅವರ ಜನ್ಮದಿನದಂದು ಬಾಲ್ಯದಲ್ಲಿ ತಾವು ರಕ್ಷಿತ್ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಡಾ.ಬ್ರೋ ಹಂಚಿಕೊಂಡಿದ್ದಲ್ಲದೆ, ಹ್ಯಾಪಿ ಬರ್ತ್‌ಡೇ ರಕ್ಷಿತ್ ಶೆಟ್ಟಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೀವಿಬ್ಬರೂ ಕರ್ನಾಟಕದ ರತ್ನಗಳು ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ. ನೀವಿಬ್ಬರೂ ಸಖತ್ ಕ್ಯೂಟ್ ಆಗಿ ಕಾಣ್ತಿದ್ದೀರಿ ಎಂದು ಇನ್ನೊಬ್ಬರು ಬರೆದಿದ್ದಾರೆ.
ಬಹುಶಃ ಕರ್ನಾಟಕದಲ್ಲಿ ಹೇಟರ್‌ಗಳೇ ಇಲ್ಲದಿರೋ ಇಬ್ಬರು ವ್ಯಕ್ತಿಗಳೆಂದರೆ, ನೀವಿಬ್ಬರೇ ಇರಬೇಕು ಎಂದು ಕಾಮೆಂಟ್ ಮಾಡಲಾಗಿದೆ. ಅಂದು ನೀವು ರಕ್ಷಿತ್ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಂಡಿದ್ದೀರಿ, ಈಗ ರಕ್ಷಿತ್ ಶೆಟ್ಟಿಯೇ ನಿಮ್ಮ ಜೊತೆ ಫೋಟೋ ತೆಗೆದಕೊಳ್ಳಲು ಮುಂದಾಗುತ್ತಾರೆ ಎಂದು ಬರೆಯುವ ಮೂಲಕ ಡಾ.ಬ್ರೋ ಅವರ ಜನಪ್ರಿಯತೆಯನ್ನು ಪ್ರಶಂಸೆ ಮಾಡಿದ್ದಾರೆ' ಆ ಸಮಯದಲ್ಲಿ ನಮ್ಮ dr bro photo ಗಾಗಿ ಕಾಯುತ್ತ ಇದ್ದರು ಆದರೆ ಈವಾಗ ಅವರ ಜೊತೆ selfhi ತೆಗೆಯಲು ಜನ ಸಾಗರವೇ ಇದೆ..' ಎಂದು ಮತ್ತೊಬ್ಬರು ಬರೆದಿದ್ದಾರೆ.
ಅಂದು ಸ್ವತಃ ರಕ್ಷಿತ್ ಶೆಟ್ಟಿ ಕೂಡ ಈ ಪುಟ್ಟ ಬಾಲಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಆ ದೇವ್ರು ಇಬ್ರಿಗೂ ಒಳ್ಳೇದ್ ಮಾಡ್ಲಿ ಕರ್ನಾಟಕದ ಎರಡು ರತ್ನಗಳು ಎಂದು ಕಾಮೆಂಟ್ ಮಾಡಲಾಗಿದೆ.
ಕನ್ನಡ ಯೂಟ್ಯೂಬರ್ ಡಾ ಬ್ರೋ ಗೆ ಯಾವ ಧರ್ಮದವರು ಹೆಚ್ಚು ಭಿಕ್ಷೆ ಹಾಕಿದರು!
ಅಯ್ಯೋ ದೇವ್ರು ನೀವು ಎಷ್ಟು ಮುದ್ದಾಗಿ ಕಾಣ್ತಿದ್ದೀರಿ.. ಎಂದು ಮಾನಸಾ ಎನ್ನುವವರು ಬರೆದುಕೊಂಡಿದ್ದಾರೆ. ನೀವಂತೂ ಲೆಜೆಂಡ್ ಬಿಡಿ ಬ್ರೋ., ಆವಾಗ್ಲೇ ಹಂಗೆ, ಇನ್ನ ಇವಾಗ ಕೇಳ್ಬೇಕ!, ನಿಮಗೆ ರಕ್ಷಿತ್ ಶೆಟ್ಟಿಗಿಂತ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. ಅಂದಿಗೂ ಇಂದಿಗೂ ಎಷ್ಟು ವ್ಯತ್ಯಾಸ ಅಲ್ಲವೇ ಎಂದು ಡಾ.ಬ್ರೋಗೆ ಪ್ರಶ್ನೆ ಮಾಡಿದ್ದಾರೆ. ಬ್ರ್ಯಾಂಡ್ ಬ್ರೋ ನೀವೇನಿಲ್ಲಿ, ಬೆಳೆದರೆ, ನಿಮ್ಮ ಥರ ಬೆಳೆಯಬೇಕು ಬ್ರೋ ಎಂದು ಮತ್ತೊಬ್ಬರು ಬರೆದಿದ್ದಾರೆ. ನೀವಿಬ್ರೂ ಸ್ವಲ್ಪ ಅಣ್ಣ-ತಮ್ಮ ರೀತಿ ಕಾಣ್ತಿದ್ದೀರಿ. ರಕ್ಷಿತ್ ಶೆಟ್ಟಿ ಸರ್ ನೀವು ಬಹಳಷ್ಟು ಜನಕ್ಕೆ ಥಿಂಕ್ ಮಾಡಲು ಸ್ಫೂರ್ತಿಯಾಗಿದ್ದೀರಿ ಎಂದು ಬರೆದಿದ್ದಾರೆ.
ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...