
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ವೇದಾಂತ್ ಹಾಗೂ ಅಮ್ಮು ಕಿತ್ತಾಟ, ಸಹೋದರಿಯರ ಪ್ರೀತಿ ಹಾಗೂ ಸ್ಟ್ರಿಕ್ಟ್ ಅಮ್ಮನ ರೂಲ್ಸ್ ಇರುವ ಈ ಕಥೆಯನ್ನು ವೀಕ್ಷಕರು ತಪ್ಪದೇ ಪ್ರತೀ ಸಂಚಿಕೆಯನ್ನೂ ವೀಕ್ಷಿಸುತ್ತಾರೆ.
ಪ್ರಮುಖ ಪಾತ್ರಧಾರಿಗಳಷ್ಟೆ ಗಮನ ಸಳೆದ ವೇದಾಂತ್ ತಾಯಿ ಸುಹಾಸಿನಿ ಉರಫ್ ಅರ್ಚನಾ ಧಾರಾವಾಹಿಯಿಂದ ಹೊರನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಣದ ಮದ, ಗಾಂಭೀರ್ಯತೆಯಿಂದ ಕೂಡಿದ ಪಾತ್ರ ಇದಾಗಿದ್ದು, ಧಾರಾವಾಹಿ ಪ್ರಾರಂಭದಿಂದಲೂ ಅರ್ಚನಾ ಅಭಿನಯಿಸುತ್ತಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಅರ್ಚನಾ ಹೊರ ನಡೆಯುತ್ತಿದ್ದಾರಂತೆ. ಸುಹಾಸಿನ ಪಾತ್ರದಲ್ಲಿ ನಟಿ ಸ್ವಾತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಧಾರಾವಾಹಿ ಪ್ರಸಾರವಾಗಿ ಈಗಾಗಲೇ ವರ್ಷಗಳೇ ಕಳೆದೂ ಯಾವ ಪಾತ್ರಧಾರಿಗಳೂ ರಿಪ್ಲೇಸ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ನಡೆಯುತ್ತಿದೆ.
ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸ್ವಾತಿ ಈ ಹಿಂದೆ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳೇ ಹೆಚ್ಚು. ಇತ್ತೀಚಿಗೆ 'ರಂಗನಾಯಕಿ' ಹಾಗೂ 'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.