ಬಿಗ್​ಬಾಸ್​​ ಸ್ಪರ್ಧಿಯಾಗಿ ಕತ್ತೆ? ಎರಡು ಕಾಲಿಂದಲ್ಲ ಸ್ವಾಮಿ, ನಿಜವಾಗ್ಲೂ ನಾಲ್ಕು ಕಾಲಿಂದೇ...ವಿಡಿಯೋ ರಿಲೀಸ್​!

By Suchethana D  |  First Published Oct 5, 2024, 10:20 PM IST

ಬಿಗ್​ಬಾಸ್​​ ಸ್ಪರ್ಧಿಯಾಗಿ ಕತ್ತೆ ದೊಡ್ಮನೆಯ ಪ್ರವೇಶ ಮಾಡಲಿದೆ. ಇದರ ಹೆಸರು ಮ್ಯಾಕ್ಸ್​. ಹಾಗಿದ್ರೆ ಕತ್ತೆ ಇಲ್ಲಿ ಏನು ಮಾಡಲಿದೆ? ಇಲ್ಲಿದೆ ನೋಡಿ ಡಿಟೇಲ್ಸ್​
 


ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳಾಗಿ ಹೋಗುವವರಲ್ಲಿ ಶೇಕಡಾ 90ರಷ್ಟು ಮಂದಿ ಕಾಂಟ್ರವರ್ಸಿಯವರೇ ಇರ್ತಾರೆ ಎನ್ನೋದು ಹೊಸ ವಿಷಯವೇನಲ್ಲ. ಮೊದಲ 2-3 ವಾರಗಳಲ್ಲಿ ನಾಮಿನೇಟ್​ ಆಗಿ ಮನೆಯಿಂದ ಹೊರಕ್ಕೆ ಕಳುಹಿಸುವ ಸಲುವಾಗಿ ಯಾವುದೇ ವಿವಾದ ಇಲ್ಲದ, ಉತ್ತಮ ನಡೆಯುಳ್ಳವರನ್ನು ಬಿಗ್​ಬಾಸ್​ಗೆ ಆಯ್ಕೆ  ಮಾಡುತ್ತಾರೆ  ಎನ್ನುವ ಆರೋಪ ಆರಂಭದಿಂದಲೂ ಇದ್ದದ್ದೇ. ಎಲ್ಲರೂ ಒಳ್ಳೆಯವರಾಗಿ ಗಲಾಟೆಯೇ ಇಲ್ಲದಿದ್ದರೆ ಬಿಗ್​ಬಾಸ್​ ಅನ್ನು ವಾಚಾಮಗೋಚರವಾಗಿ ಬೈದುಕೊಂಡು ನೋಡಿ ಟಿಆರ್​ಪಿ ಏರಿಸುವ ಪ್ರೇಕ್ಷಕರು ಸಿಗುವುದಾದರೂ ಹೇಗೆ? ಇದು ಎಲ್ಲಾ ಭಾಷೆಗಳ ಬಿಗ್​ಬಾಸ್​ಗೂ ಅನ್ವಯ ಆಗಿರುವುದೇ. ಸೋಷಿಯಲ್​  ಮೀಡಿಯಾಗಳಲ್ಲಿ ಯಾರ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ, ಯಾರನ್ನು ಹೆಚ್ಚು ಜನ ಉಗಿಯುತ್ತಾರೆ ಎಂದು ನೋಡಿದರೆನೇ ಬಿಗ್​ಬಾಸ್​ ನೋಡುವ ವರ್ಗ ಯಾವ ರೀತಿಯದ್ದು, ದಿನವೂ ಬೈಯುತ್ತಲೇ ಇಂಥ ರಿಯಾಲಿಟಿ ಷೋಗಳನ್ನು ನೋಡುವುದು ಎಂದರೆ ಅವರಿಗೆ ಎಷ್ಟು ಇಷ್ಟ ಎನ್ನುವುದು ತಿಳಿಯುತ್ತದೆ. 

ಅದಿರಲಿ ಬಿಡಿ. ಬಿಗ್​ಬಾಸ್​ಗೆ ಹೋಗುವ ಬಹುತೇಕ ಸ್ಪರ್ಧಿಗಳು ಚಿತ್ರ-ವಿಚಿತ್ರ ಸ್ವಭಾವದವರು, ಜಗಳಗಂಟರು ಎಂದೆಲ್ಲಾ ಬಿರುದು ಪಡೆದವರು. ಆದರೆ ಇವರ ಮಧ್ಯೆಯೇ ಈಗ ಕತ್ತೆಯೂ ಬಿಗ್​ಬಾಸ್​ ಪ್ರವೇಶ ಮಾಡುತ್ತಿದೆ! ಹೌದಪ್ಪಾ... ಯಾವ್ಯಾವುದೋ ಸ್ಪರ್ಧಿಗಳನ್ನು ಸ್ಮರಿಸಿಕೊಂಡು ಇವರು ಕತ್ತೆ ಎಂದುಕೊಳ್ಳಬೇಡಿ ಮತ್ತೆ. ನಿಜವಾಗಿಯೂ ನಾಲ್ಕು ಕಾಲಿನ ಕತ್ತೆಯೇ ಸ್ಪರ್ಧಿಯಾಗಿ ಹೋಗುತ್ತಿದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಬಿಗ್​ಬಾಸ್​ ಪ್ರೇಮಿಗಳು ಇದನ್ನು ಕಾತರದಿಂದ ಕಾಯುತ್ತಿದ್ದಾರೆ. ಕತ್ತೆಯೇ ವಿನ್​ ಆಗ್ಲಿ ಎಂದೂ ಹಾರೈಸುತ್ತಿದ್ದಾರೆ. ಅಷ್ಟಕ್ಕೂ ಈ ಕತ್ತೆ ಯಾಕೆ ಹೋಗ್ತಿದೆ? ಯಾವ ಬಿಗ್​ಬಾಸ್ ಮನೆ ಸೇರುತ್ತಿದೆ ಎನ್ನುವ ಕುತೂಹಲವೇ. ಅಂದಹಾಗೆ ಇತ್ತ ಕನ್ನಡದ ಬಿಗ್​ಬಾಸ್​ ಸೀಸನ್​ 11 ಶುರುವಾಗಿದೆ. ಅದೇ ರೀತಿ ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ಗಳೂ ಶುರುವಾಗಿವೆ. ಹಿಂದಿಯ ಬಿಗ್​ಬಾಸ್​ ಸೀಸನ್​ 18 ಇನ್ನೇನು ಆರಂಭವಾಗಲು ಕ್ಷಣಗಣನೆ ಶುರುವಾಗಿದೆ. ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಈ ಬಿಗ್​ಬಾಸ್​​ನಲ್ಲಿಯೇ ಕತ್ತೆಯ ಪ್ರವೇಶ ಆಗಲಿದೆ.  ನಾಳೆಯಿಂದ ಅಂದ್ರೆ ಅಕ್ಟೋಬರ್ 6 ರಂದು 18ನೇ  ಸೀಸನ್​ ಆರಂಭವಾಗಲಿದೆ.  ಇದಕ್ಕೆ ಸಂಬಂಧಿಸಿದ ಪ್ರೊಮೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.

ವಿವಾದಾತ್ಮಕ ಬಿಗ್ ಬಾಸ್ 18 ಆರಂಭಕ್ಕೂ ಮುನ್ನ ಮನೆಯ ಒಳಾಂಗಣದ ಫೋಟೋಗಳು ಲೀಕ್!

Tap to resize

Latest Videos

 ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರಿಗಿಂತಲೂ ಮೊದಲು ಕತ್ತೆ ಕಾಣಿಸಿಕೊಂಡಿದೆ. ಬಿಗ್ ಬಾಸ್ ಹೊಸ ಪ್ರೋಮೋ ಬಿಡುಗಡೆಯಾದಾಗ, ಎಲ್ಲರೂ ಅದರಲ್ಲಿ ಸಲ್ಮಾನ್ ಖಾನ್ ಪ್ರವೇಶಕ್ಕಾಗಿ ಕಾಯುತ್ತಿದ್ದರು, ಆದರೆ ಸಲ್ಮಾನ್ ಖಾನ್ ಬದಲಿಗೆ ಕತ್ತೆಯೊಂದು ವೇದಿಕೆಯನ್ನು ಪ್ರವೇಶಿಸಿತು. ಈ ಪ್ರೋಮೋದಲ್ಲಿ, ಕತ್ತೆಯು ವೇದಿಕೆಯಲ್ಲಿ ಹುಲ್ಲು ತಿನ್ನುತ್ತಿರುವಂತೆ ಕಂಡುಬಂದಿದೆ ಮತ್ತು ಬಿಗ್ ಬಾಸ್ ಧ್ವನಿ ಹಿನ್ನೆಲೆಯಿಂದ ಬಂದಿದೆ. ಕತ್ತೆಯನ್ನು ನೋಡಿದ ನಂತರ, ಪ್ರದರ್ಶನಕ್ಕೂ ಅದಕ್ಕೂ ವಿಶೇಷ ಸಂಬಂಧವಿದೆ ಎಂದು ಊಹಿಸಲಾಗಿದೆ. ಆದರೆ ಕತ್ತೆಯ ಎಂಟ್ರಿ ಯಾಕೆ ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿದೆ. ಇದನ್ನು ತಿಳಿಯಲು  ಅಕ್ಟೋಬರ್ 6 ರಂದು ರಾತ್ರಿ 9 ಗಂಟೆಯವರೆಗೆ ಕಾಯಲೇಬೇಕು. 

ಈ ಪ್ರೋಮೋವನ್ನು ಹಂಚಿಕೊಳ್ಳುವಾಗ, ಕಲರ್ಸ್ ಟಿವಿ ‘, ಬಿಗ್ ಬಾಸ್ 18 ರ ಹೊಸ ಅತಿಥಿಗೆ ನಾಲ್ಕು ಕಾಲುಗಳಿವೆಯೇ ಎಂದುಪ್ರಶ್ನಿಸಿದೆ. ಇದೇ ವೇಳೆ ಜಿಯೋ ಸಿನಿಮಾ ಕೂಡ ಈ ಪ್ರೋಮೋವನ್ನು ಶೇರ್ ಮಾಡಿದ್ದು, ಇದರೊಂದಿಗೆ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಟ್ವಿಸ್ಟ್ ಬಂದಿದೆ ಎಂದು ಬರೆದುಕೊಂಡಿದೆ.  ಕತ್ತೆಯ ಹೆಸರು ಮ್ಯಾಕ್ಸ್ ಎಂದು ತಿಳಿದುಬಂದಿದ್ದು,  ಇದು ಸ್ಪರ್ಧಿ ವಕೀಲ ಗುಣರತ್ನ ಸದಾವರ್ತೆ ಅವರ ಸಾಕುಪ್ರಾಣಿ ಎಂದೂ ಹೇಳಲಾಗುತ್ತಿದೆ. ಆದರೆ ಸತ್ಯ ಇನ್ನಷ್ಟೇ ತಿಳಿಯಬೇಕಿದೆ. ಅಂದಹಾಗೆ ಹಿಂದಿಯ ಬಿಗ್​ಬಾಸ್​ ಕೂಡ ಈ ಬಾರಿ  ಇತರ ಸೀಸನ್‌ಗಳಿಗಿಂತ ವಿಭಿನ್ನ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂದು ಇದಾಗಲೇ ಅನೌನ್ಸ್​  ಮಾಡಲಾಗಿದೆ.  ಈ ಬಾರಿ ಬಿಗ್ ಬಾಸ್ ಮನೆ ಸಂಪೂರ್ಣ ದೇಸಿ ಶೈಲಿಯಲ್ಲಿ ನಿರ್ಮಾಣವಾಗಿದೆ.

ಮೊದ್ಲು ಬರೋದು ಮೂನಾ? ಸನ್ನಾ? ಸೀತಾರಾಮ ಪ್ರಿಯಾಳ ಉತ್ರ ಕೇಳಿ ನಾಚಿಕೊಂಡ ಶಿವಣ್ಣ, ಅನುಶ್ರೀ!

click me!