ಬಿಗ್‌ಬಾಸ್ ವೇದಿಕೆಯಲ್ಲಿ ಬರಿಗಾಲಲ್ಲಿ ಕಾಣಿಸಿದ ಕಿಚ್ಚ! ಕಾರಣವೂ ಇದೆ, ಅದೆಷ್ಟು ಸಲ ಮನಸ್ಸು ಗೆಲ್ತೀರಾ ಸುದೀಪ್

By Gowthami K  |  First Published Oct 5, 2024, 10:10 PM IST

ಬಿಗ್‌ಬಾಸ್ ಕನ್ನಡದ ಇತ್ತೀಚಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಬರಿಗಾಲಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ. ನವರಾತ್ರಿ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ, ಅವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಮನೆಯ ಸ್ಪರ್ಧಿಗಳ ಕಾರ್ಯವೈಖರಿ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.


ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್‌ ನ ಮೊದಲ ಪಂಚಾಯಿತಿಗೆ  ಕಿಚ್ಚ ಸುದೀಪ್ ಬರಿಗಾಲಲ್ಲಿ ಬಂದು ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಒಂದೂವರೆ ಗಂಟೆ ನಡೆಯಲಿರುವ ಶೋ ಗೆ  ಗಂಟೆಗಟ್ಟಲೆ ನಿಂತೇ ಶೂಟಿಂಗ್ ಮಾಡಬೇಕಿದೆ. ಹೀಗಾಗಿ ನಿಂತೇ ಶೂಟಿಂಗ್ ಮಾಡಿದ್ದಾರೆ. ದಿನಾಲು ಚಪ್ಪಲಿ ಧರಿಸುವವರಿಗೆ ಬರಿಗಾಲಲ್ಲಿ ಇರುವುದು  ಕಷ್ಟವೇ ಆಗುತ್ತದೆ. ಅಂತಹದರಲ್ಲಿ ಗಂಟೆಗಟ್ಟಲೆ ಶೂಟಿಂಗ್‌ ಮಾಡಿರುವುದು ಕಿಚ್ಚನ ಮೇಲೆ ಅಭಿಮಾನ ಹೆಚ್ಚಿಸಿದೆ.

Tap to resize

Latest Videos

undefined

ವಿಜಯ್ ಕೊನೆಯ ಸಿನೆಮಾ ದಳಪತಿ 69 ಮೇಲೆ ಇಷ್ಟೊಂದು ನಿರೀಕ್ಷೆ ಯಾಕೆ? 1000 ಕೋಟಿ ಗಡಿ ದಾಟುತ್ತಾ?

ಇನ್ನು ಕಿಚ್ಚ ಸುದೀಪ್‌ ಅವರ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್‌ ಲುಕ್ ಕೊಡುತ್ತಿತ್ತು. ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್‌ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ ಆರ್ನಮೆಂಟ್ಸ್ ಧರಿಸಿದ್ದರು. ಇದು ಕಿಚ್ಚನ ಕೂಲ್‌ ಲುಕ್‌ ಗೆ ಹೇಳಿ ಮಾಡಿಸಿದಂತಿತ್ತು.

ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಜಗದೀಶ್ ಸ್ಟೈಲ್‌ ನಲ್ಲೇ ಕಿಚ್ಚನ ಖಡಕ್‌ ಎಚ್ಚರಿಕೆ!

ಇನ್ನು ಮನೆಯ ಎಲ್ಲರನ್ನೂ ಮಾತನಾಡಿಸಿದ ಕಿಚ್ಚ , ಮನೆಯಲ್ಲಿ ಕಳೆದ ದಿನಗಳ ಬಗ್ಗೆ ಪ್ರಶ್ನಿಸಿ 1 ನಿಮಿಷದೊಳಗೆ  ಉತ್ತರಿಸುವಂತೆ ಹೇಳಿದರು. ಜೊತೆಗೆ 1 ನಿಮಿಷ ಎಷ್ಟು ಅಮೂಲ್ಯವಾದ ಸಮಯ ಎಂಬುದನ್ನು ಅರ್ಥ ಮಾಡಿಸಿದರು.  ಇದರ ಜೊತೆಗೆ ಮನೆಯ ಕ್ಯಾಪ್ಟನ್‌ ಹಂಸಾ ಅವರ ತಪ್ಪುಗಳನ್ನು ಅವರಿಗೆ ತಿಳಿಸಿ ಹೇಳಿದರು. ಎಲ್ಲೆಲ್ಲಿ ಸ್ಪರ್ಧಿಗಳು ಎಡವಿದ್ದೀರಿ ಎಂಬುದನ್ನು ತಿಳಿಸಿ ಕೊಟ್ಟರು. ನರಕವಾಸಿ ರಂಜಿತ್ ಗೆದ್ದು ಹಂಸ  ಮನೆಯ ಸಾರಥ್ಯ ವಹಿಸಿಕೊಂಡಿದ್ದಾರೆ. 

click me!