ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಜಗದೀಶ್ ಸ್ಟೈಲ್‌ ನಲ್ಲೇ ಕಿಚ್ಚನ ಖಡಕ್‌ ಎಚ್ಚರಿಕೆ!

By Gowthami K  |  First Published Oct 5, 2024, 6:47 PM IST

ಕನ್ನಡ ಬಿಗ್​ಬಾಸ್ ಸೀಸನ್ 11 ರಲ್ಲಿ ಈ ವಾರ ಜಗದೀಶ್ ಅವರ ನಡವಳಿಕೆ ಬಗ್ಗೆ ಕಿಚ್ಚ ಸುದೀಪ್‌ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್‌ ಶೋ ಹೇಗೆ ನಡೆಸಬೇಕೆಂದು ಜಗದೀಶ್ ಅವರಿಗೆ ಕಿಚ್ಚ ಸುದೀಪ್‌ ಕೇಳಿದ್ದಾರೆ. ಬಿಗ್‌ಬಾಸ್‌ ಅನ್ನೋದು ಅದ್ಭುತವಾದ ಶೋ, ಅದನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಎಚ್ಚರಿಕೆ ನೀಡಿದ್ದಾರೆ.


ಕನ್ನಡ ಬಿಗ್​ಬಾಸ್ ಸೀಸನ್ 11 ಆರಂಭವಾಗಿ ಒಂದುವಾರವಾಗಿದೆ ಇಂದು ವಾರದ ಕಥೆ ಕಿಚ್ಚನ ಜೊತೆ ನಡೆಯುತ್ತಿದೆ. 17 ಜನ ಇರುವ ಮನೆಯಿಂದ ಮೊದಲು ಔಟ್‌ ಆಗೋದು ಯಾರು ಎಂಬ ಕುತೂಹಲ ಕೂಡ ಹೆಚ್ಚಿದೆ. ಸ್ವರ್ಗ-ನರಕದ ಮನೆಯಲ್ಲಿ ಯಾರು ಉಳಿಯುತ್ತಾರೆ. ಯಾರು ಹೋಗುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಈ ನಡುವೆ ಲಾಯರ್ ಜಗದೀಶ್ ಒಂದು ವಾರದಲ್ಲಿ ಸಖತ್ ಸೌಂಡ್ ಮಾಡಿದ ಸ್ಪರ್ಧಿಯಾಗಿದ್ದು, ಅವರಿಗೆ ಕ್ಲಾಸ್‌ ತೆಗೆದುಕೊಳ್ಳಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿ ಬಂದಿತ್ತು.

ರಂಜಿತ್‌ ಟಾಸ್ಕ್ ಗೆದ್ದು ಬಿಗ್‌ಬಾಸ್‌ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆದ ಹಂಸ!

Tap to resize

Latest Videos

undefined

ಈ ವಾರದ ಕಥೆ ಕಿಚ್ಚನ ಜೊತೆಗಲ್ಲ ಬದಲಾಗಿ, ವಾರದ  ಕಿಚ್ಚನ ಕಥೆ ಜಗದೀಶ್ ಜೊತೆಗೆ ಎಂದೆಲ್ಲ ಅಭಿಪ್ರಾಯ ವ್ಯಕ್ತವಾಗಿತ್ತು. ಅದರಂತೆ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡು, ಅವಾಜ್ ಹಾಕಿಕೊಂಡು, ಬಿಗ್‌ಬಾಸ್‌ ಶೋ ಹೇಗೆ ನಡೆಸುತ್ತೀರಿ. ನೆಮ್ಮದಿಯಾಗಿ ಶೋ ನಡೆಯಲು ಬಿಡುವುದಿಲ್ಲ ಎಂದೆಲ್ಲ. ಬಿಗ್‌ಬಾಸ್‌ ಗೆ ಚಾಲೆಂಜ್ ಮಾಡಿದ್ದರು. ಜೊತೆಗೆ ಮನೆಯಿಂದ ಹೊರ ಹೋಗುತ್ತೇನೆಂದು ಹಲವು ಬಾರಿ ಗಂಟು ಮೂಟೆ ಕಟ್ಟಿ ಕುಳಿತಿದ್ದರು. ಬಿಗ್‌ಬಾಸ್ ಅವರನ್ನು ಕರೆದು ಸಮಾಧಾನ ಪಡಿಸಿ ಬುದ್ದಿ ಹೇಳಿದರೂ ಕೇಳಿರಲಿಲ್ಲ. ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಜಗದೀಶ್ ಗಲಾಟೆ ಆಟ ಮುಂದುವರೆದಿತ್ತು.

ಇದೀಗ ಕಿಚ್ಚ ಸುದೀಪ್‌ ಅವರು ಜಗದೀಶ್ ಗೆ ಕ್ಲಾಸ್‌ ತೆಗೆದುಕೊಂಡಿರುವ ಮೊದಲ ಪ್ರೋಮೋ ರಿಲೀಸ್‌ ಆಗಿದೆ. ಅದರಲ್ಲಿ ಕಿಚ್ಚ ಸುದೀಪ್‌ ಅವರು ಜಗದೀಶ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಾನು ನನ್ನ ಅಪ್ಪನ ಮಗನೇ ಅಲ್ಲ, ಲಾಯರ್ ಜಗದೀಶ್ ಶೇ ಅಲ್ಲ, ಉಗ್ರಂ ಮಂಜು ವಿರುದ್ಧ ಕಿರುಚಾಟ!

ಸುದೀಪ್: ಜಗದೀಶ್ ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಅಂತ.
ಜಗದೀಶ್: ನಿಮ್ಮದು ಕರೆಕ್ಟ್ ಇದೆ. ನಿಮ್ಮದೇನು ತಪ್ಪಿಲ್ಲ
ಸುದೀಪ್: ಖಡಾಖಂಡಿತವಾಗಿ ಕರೆಕ್ಟ್‌ ಆಗಿದೆ ಇಲ್ಲಾಂದ್ರೆ ನನ್ ಮಗನ್ 11 ನೇ ಸೀಸನ್ ದಾಟುತ್ತಾನೆ ಇರಲಿಲ್ಲ ಇನ್ನು.
ಸುದೀಪ್: ಕ್ಯಾಮಾರಾ ಮುಂದೆ ಬಿಗ್‌ಬಾಸ್‌ ಗೆ ಚಾಲೆಂಜ್ ಮಾಡಿದ್ರಲ್ಲಾ ಅದು ತಪ್ಪೇ ಅಲ್ಲ ಸಾರ್.. ದೆಡ್‌ ವಾಸ್‌ ಜೋಕ್‌,

ಬಿಗ್‌ಬಾಸ್ ಅನ್ನೋದು ಏನಿದೆ, ಅದು ಅದ್ಭುತವಾದಂತಹ ಶೋ, ಇಂಪ್ರೂವ್ ಮಾಡುವಂತಹ ಸಾಧ್ಯತೆ ಈಗ ಇರೋ ನಿಮ್ಮ ಕೈನಲ್ಲಿದೆ. ಹಾಳು ಮಾಡೋಕೆ ನಿಮ್ಮ ಅಪ್ಪನಾಣೆಗೂ ಸಾಧ್ಯವಿಲ್ಲ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದಾರೆ ಕಿಚ್ಚ ಸುದೀಪ್. 

ಇನ್ನು ಮತ್ತೊಂದು ಪ್ರೋಮೋದಲ್ಲಿ ಉಗ್ರಂ ಮಂಜು ಜೊತೆಗೆ ಸ್ವಾರಸ್ಯವಾಗಿ ಮಾತನಾಡಿದ್ದಾರೆ. ಜಗದೀಶ್ ಅವರ ಬಗ್ಗೆ ಮಾತನಾಡುತ್ತಾ ಬೆಳಗ್ಗೆ ಹಲ್ಲು ಉಜ್ಜೋಕೆ ಮುಂಚೆ ಮೀಟಿಂಗ್ ಅಂತ ಕರೀತಾರೆ. ರಾತ್ರಿ ಒಬ್ಬರು ಬರ್ತಾರೆ ಅಣ್ಣಾ,  ರುದ್ರ ತಾಂಡವ ಆಡುತ್ತಾರೆ. ಬೆಳಗ್ಗೆ ಸಾರಿ ಕೇಳ್ತಾರೆ. ಆಸ್ಕರ್ ಅವಾರ್ಡ್ ಕೊಡಬೇಕು ಎಂದು ಉಗ್ರಂ ಮಂಜು ಹೇಳಿದ್ದಾರೆ.

click me!