ನನ್ನ ಹೀರೋ ಎಂದು ಅಪ್ಪನನ್ನು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೊಗಳಿದ್ದಾರೆ. ಟ್ರಬಲ್ ಶೂಟರ್ ಎಪಿಸೋಡ್‌ನೊಂದಿಗೆ ಮುಕ್ತಾಯವಾಗ್ತಿದೆ ವೀಕೆಂಡ್ ವಿತ್ ರಮೇಶ್.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ಈ ವಾರದ ಅತಿಥಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೆಂಪು ಏರಿರುವ ಡಿಕೆ ಶಿವಕುಮಾರ್ ಅವರ ಎಪಿಸೋಡ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ವೀಕೆಂಡ್ ವಿತ್ ರಮೇಶ್ ಕುರ್ಚಿ ಮೇಲೆ 99 ಸಾಧಕರು ಕುಳಿತಿದ್ದಾರೆ. ಇದೀಗ 100ನೇ ಸಾಧಕರ ಸೀಟಿನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂರುತ್ತಿದ್ದಾರೆ.
ಪ್ರತಿಬಾರಿಯೂ ಸಿನಿಮಾದವವರನ್ನು ಮಾತ್ರ ಕರೆಸುತ್ತಿದ್ದೀರಿ, ಸಾಧಕರು ಅಂದರೆ ಸಿನಿಮಾದವರು ಮಾತ್ರನಾ ಎಂದು ಪ್ರೇಕ್ಷಕರು ಅಸಮಧಾನ ಹೊರ ಹಾಕುತ್ತಿದ್ದರು. ಈ ಬಾರಿ ರಾಜಕೀಯ ವ್ಯಕ್ತಿ ವೀಕೆಂಡ್ ಖುರ್ಚಿ ಏರುತ್ತಿರುವುದು ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಸದ್ಯ ಡಿಕೆ ಶಿವಕುಮಾರ್ ಎಪಿಸೋಡ್‌ನ ಪ್ರೋಮೋ ರಿಲೀಸ್ ಆಗಿದೆ. 'ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ'ಎಂದು ಕ್ಯಾಪ್ಷನ್ ಬರೆದು ಪ್ರೋಮೋ ಹಂಚಿಕೊಂಡಿದೆ ಜೀ ವಾಹಿನಿ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಡಿಕೆಶಿ ಎಂಟ್ರಿ ಹಾಗೂ ಕುಟುಂಬದವರು ಕಾಣಿಸಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ಬಗ್ಗೆ ಒಲವಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. '6-7ನೇ ಕ್ಲಾಸ್‌ನಲ್ಲೇ ಪೊಲಿಟಿಷಿಯನ್ ಆಗಲೇಬೇಕೆಂದು ತೀರ್ಮಾನಿಸಿದ್ದೆ. ನಾನು ಹುಟ್ಟುತ್ತಾ ಕೃಷಿಕ, ನನ್ನ ಪ್ಯಾಷನ್ ಪೊಲಿಟೀಶಿಯನ್ ' ಎಂದು ಡಿಕೆಶಿ ಬಹಿರಂಗ ಪಡಿಸಿದ್ದಾರೆ. ಇನ್ನು ಡಿಕೆಶಿ ಪುತ್ರಿ ಐಶ್ವರ್ಯಾ ಮಾತನಾಡಿ, 'ಹೊರಗೆ ತುಂಬಾ ಟಫ್ ಮ್ಯಾನ್ ಆದರೆ ಮನೆಯಲ್ಲಿ ತುಂಬಾ ಭಾವನಾತ್ಮಕ ವ್ಯಕ್ತಿ, ಇವರೇ ನನ್ನ ಹೀರೋ' ಎಂದು ಹೇಳಿದ್ದಾರೆ.
Weekend With Ramesh: ಈ ವಾರ ಸಾಧಕರ ಖುರ್ಚಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸದ್ಯ ಡಿಕೆಶಿ ಪ್ರೋಮೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಡಿಕೆಶಿ ಜೀವನದ ಪಯಣ ನೋಡಲು ಕಾರರಾಗಿದ್ದಾರೆ ಇನ್ನೂ ಕೆಲವರು ಏನ್ ಸಾಧನೆ ಮಾಡಿದ್ದಾರೆ ಅಂತ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.
Weekend With Ramesh: ವರಮಹಾಲಕ್ಷ್ಮಿ ಹಬ್ಬದಂದೇ ಪತ್ನಿಯ ತಾಳಿ ಮಾರಿದ್ದ ಪ್ರೇಮ್! ಕಣ್ಣೀರಾದ ನಟ
ಡಿಕೆಶಿ ಎಪಿಸೋಡನೊಂದಿಗೆ ವೀಕೆಂಡ್ ವಿತ್ ರಮೇಶ್ ಮುಕ್ತಾಯ?
ಡಿಕೆಸಿ ಎಪಿಸೋಡ್ ಮೂಲಕ ಡಿಕೆಶಿ ಎಪಿಸೋಡ್ ಮುಕ್ತಾಯವಾಗಲಿದೆ ಎನ್ನಲಾಗಿದೆ. ಸದ್ಯ 99 ಸಾಧಕರು ವೀಕೆಂಡ್ ಕುರ್ಚಿ ಏರಿದ್ದು 100ನೇ ಸಾಧಕರಾಗಿ ಡಿಕೆಶಿ ಕಾಣಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಎಪಿಸೋಡ್ ಮೂಲಕ ವೀಕೆಂಡ್ ವಿತ್ ರಮೇಶ್ ಮುಕ್ತಾಯವಾಗಲಿದೆ. 100ನೇ ಅತಿಥಿ ತುಂಬಾ ವಿಶೇಷವಾದ ವ್ಯಕ್ತಿ ಆಗಿರುತ್ತಾರೆ ಎಂದು ಈ ಮೊದಲೇ ವೀಕೆಂಡ್ ವಿತ್ ಕಾರ್ಯಕ್ರಮದ ಆಯೋಜಕರು ಬಹಿರಂಗ ಪಡಿಸಿದ್ದರು. ಅದರಂತೆ 100ನೇ ಎಪಿಸೋಡ್‌ಗೆ ಡಿಕೆಶಿಯನ್ನು ಕೂರಿಸುವ ಮೂಲಕ ವೀಕೆಂಡ್ ವಿತ್ ರಮೇಶ್ ಸೀಸನ್ 5ಕ್ಕೆ ಅಂತ್ಯ ಹಾಡುತ್ತಿದೆ ಜೀ ವಾಹಿನಿ. ಈ ಸೀಸನ್‌ನ ಮೊದಲ ಅತಿಥಿಯಾಗಿ ರಮ್ಯಾ ಕಾಣಿಸಿಕೊಂಡಿದ್ದರು. ಕೊನೆಯ ಎಪಿಸೋಡ್‌ನಲ್ಲಿ ಡಿಕೆಶಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿರುವ ಈ ಎಪಿಸೋಡ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.