ನಿನಗಾಗಿ ಶೂಟಿಂಗ್ ಸೆಟ್ನಲ್ಲಿ 55 ಲಕ್ಷದ ಕಾರಿಗೆ ತಮಾಷೆಗೆಂದು ಹೀಗೆ ಕಲ್ಲು ಹೊಡೆಯೋದಾ ದಿವ್ಯಾ ಉರುಡುಗ? ಮುಂದೇನಾಯ್ತು ನೋಡಿ...
ಬಿಗ್ಬಾಸ್ನಿಂದ ಮನೆ ಮಾತಾಗಿರೋ ಬೆಡಗಿ,ನಟಿ ದಿವ್ಯಾ ಉರುಡುಗ ಸದ್ಯ ಕಿರುತೆರೆಯಲ್ಲಿ ಬಿಜಿ ಇದ್ದಾರೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದ ನಟಿ, ಸೀಸನ್ 9ರಲ್ಲೂ ಸಹ ಪ್ರವೇಶ ಮಾಡಿದ್ದರು. ಅದರಲ್ಲಿ 5ನೇ ಸ್ಥಾನ ಪಡೆದಿದ್ದರು. ಚಿಟ್ಟೆ ಹೆಜ್ಜೆ, ಅಂಬಾರಿ, ಓಂ ಶಕ್ತಿ ಓಂ ಶಾಂತಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನಿನಗಾಗಿ ಸೀರಿಯಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ನಟಿ, ಕಿರುತೆರೆ, ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದ 'ಹುಲಿರಾಯ' ಮೂಲಕ ಹಿರಿತೆರೆಯಲ್ಲಿಯೂ ಮಿಂಚಿರೋ ದಿವ್ಯಾ, ಇತ್ತೀಚೆಗೆ ಅರ್ಧಂಬರ್ಧ ಪ್ರೇಮಕತೆ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಆದರೆ ಸದ್ಯ ನಿನಗಾಗಿ ಸೀರಿಯಲ್ನಲ್ಲಿ ಬಿಜಿ ಇದ್ದಾರೆ. ಇದರಲ್ಲಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶಿವರಾಮ್ ಪಾತ್ರಧಾರಿ ಋತ್ವಿಕ್ ಮಠದ್ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಯಲ್ಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ. ಭಾಗ್ಯಲಕ್ಷ್ಮಿ, ನಮ್ಮನೆ ಯುವರಾಣಿ, ಕನ್ನಡತಿಯಂಥ ಸುಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಜೈ ಮಾತಾ ಕಂಬೈನ್ಸ್ ಈ ಸೀರಿಯಲ್ ನಿರ್ಮಾಣ ಮಾಡುತ್ತಿದೆ. ಇದರ ಶೂಟಿಂಗ್ ಸಮಯದಲ್ಲಿ, ನಟಿ ಒಂದು ತಮಾಷೆ ಮಾಡಿದ್ದಾರೆ. ಆದರೆ ಅದೆಷ್ಟು ಸೀರಿಯಲ್ ಆಗಿತ್ತು ಎಂದರೆ, ಒಂದು ಕ್ಷಣ ನೋಡುಗರಿಗೆ ಎದೆ ಝಲ್ ಎನ್ನುವಂತಿತ್ತು.
ಈಕೆ ನಿಜಕ್ಕೂ ಹಿಟ್ಲರ್ ಕಲ್ಯಾಣ ಅಂತರನಾ? ಫ್ರಾಕ್ ಡಾನ್ಸ್ ನೋಡಿ ಭಲೆ ಭಲೆ ಎಂದ ಫ್ಯಾನ್ಸ್
ಅಷ್ಟಕ್ಕೂ ನಟ, ಸುಮಾರು 55 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಕುಳಿತಿದ್ದಾರೆ. ಆಗ ದಿವ್ಯಾ ಭಾರ ಎನ್ನುವ ಕಲ್ಲೊಂದನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಆ ಬಳಿಕ ಇದು ತುಂಬಾ ಭಾರವಿದೆ. ಆ ಕಾರಿನ ಗ್ಲಾಸ್ ಒಡೆಯಲಾ ಕೇಳಿದ್ದಾರೆ. ಹಿಂದಿನಿಂದ ಓಕೆ ಎನ್ನುವ ಶಬ್ದ ಬಂದಿದೆ. ನಟಿ ತಡ ಮಾಡದೇ ಕಾರಿನ ಗ್ಲಾಸ್ಗೆ ಕಲ್ಲಿನಿಂದ ಹೊಡೆದೇ ಬಿಟ್ಟಿದ್ದಾರೆ. ಇಷ್ಟಾಗುತ್ತಿದ್ದಂತೆ ಹೆದರಿದ ನಟ ಕಾರಿನಿಂದ ಇಳಿದು ಬಂದಿದ್ದಾರೆ. ಆಮೇಲೆ ನಟಿ ಜೋರಾಗಿ ನಕ್ಕಿದ್ದಾರೆ. ಇದಕ್ಕೆ ಕಾರಣ, ಅದು ಅಸಲಿ ಕಲ್ಲಲ್ಲ. ಬದಲಿಗೆ ಥರ್ಮಾಕೋಲ್ನಿಂದ ಮಾಡಿದ್ದು. ಹೀಗೆ ನಟಿ ದಿವ್ಯಾ ಎಲ್ಲರನ್ನೂ ಬೆಪ್ಪು ಮಾಡಿದ್ದಾರೆ.
ಇದು ನಿನಗಾಗಿ ಶೂಟಿಂಗ್ ಸೆಟ್ನಲ್ಲಿ ನಡೆದ ಘಟನೆ. ಇನ್ನು ಈ ಸೀರಿಯಲ್ ಕುರಿತು ಹೇಳುವುದಾದರೆ, ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ಇದು. ಇದರಲ್ಲಿ ದಿವ್ಯಾ ರಚನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ನಿನಗಾಗಿ' ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಈ ಹಿಂದೆ ದಿವ್ಯಾ ಇದರ ಬಗ್ಗೆ ಮಾತನಾಡಿದ್ದರು. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ. ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ ಎಂದಿದ್ದರು.
ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...