ಫಿನಾಲೆಯಲ್ಲಿ ಕುಣಿದ ದಿವ್ಯಾ...! ನೆಕ್ಸ್ಟ್ ಒಲಿಂಪಿಕ್ಸ್‌ಗೆ ನೀವೇ ಎಂದ ನೆಟ್ಟಿಗರು

Published : Aug 11, 2021, 09:57 AM ISTUpdated : Aug 11, 2021, 10:50 AM IST
ಫಿನಾಲೆಯಲ್ಲಿ ಕುಣಿದ ದಿವ್ಯಾ...! ನೆಕ್ಸ್ಟ್ ಒಲಿಂಪಿಕ್ಸ್‌ಗೆ ನೀವೇ ಎಂದ ನೆಟ್ಟಿಗರು

ಸಾರಾಂಶ

ಬಿಗ್‌ಬಾಸ್ ಫಿನಾಲೆಯಲ್ಲಿ ಕುಣಿದ ದಿವ್ಯಾ ಸುರೇಶ್ ಮುಂದಿನ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ಗೆ ನೀವೇ ಎಂದ ನೆಟ್ಟಿಗರು

ಬಿಗ್‌ಬಾಸ್ ಕನ್ನಡ ಸೀಸನ್ 8 ಮುಕ್ತಾಯಗೊಂಡಿದೆ. ಮಂಜು ಪಾವಗಡ ಟ್ರೋಫಿ ಗೆದ್ದು ಬೀಗಿದ್ದಾರೆ. ಹಲವು ಗಂಟೆಗಳ ಕಾಲ ನಡೆದ ಫಿನಾಲೆ ಕಾರ್ಯಕ್ರಮ ಇಲ್ಲಿಯ ತನಕ ಸುದೀರ್ಘ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ದೀರ್ಘ ಕಾರ್ಯಕ್ರಮದಲ್ಲಿ ಬಹಳಷ್ಟು ಕಾರ್ಯಕ್ರಮಗಳಾದವು. ಬಹಳಷ್ಟು ಜನರನ್ನು ಮಾತನಾಡಿಸಲಾಯಿತು. ಡ್ಯಾನ್ಸ್, ಫನ್, ಮಸ್ತಿ ಎಲ್ಲವೂ ಇತ್ತು. ಕಂಟೆಸ್ಟೆಂಟ್‌ ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಲ್ಲದೆ ಆಕರ್ಷಕವಾಗಿ ಕಾಣುತ್ತಿದ್ದರು.

ಮಾಡೆಲ್ ದಿವ್ಯಾ ಸುರೇಶ್ ಅಂತೂ ಪಿಸ್ತಾ ಬಣ್ಣದ ಉಡುಗೆಯಲ್ಲಿ ಮಿಂಚುತ್ತಿದ್ದರು. ಫಿನಾಲೆ ಮುಗಿಯುತ್ತಿದ್ದಂತೆ ಕಿಚ್ಚ ಸುದೀಪ್ ಅವರು ವಿನ್ನರ್ ಹೆಸರು ಘೋಷಿಸಿದಾಗ ದಿವ್ಯಾ ಸುರೇಶ್ ಕುಣಿದು ಕುಪ್ಪಳಿಸಿದ್ದಾರೆ. ಫ್ರೆಂಡ್‌ಗೆ ಗೆಲುವು ಸಿಕ್ಕಿದ ಖುಷಿಯನ್ನು ಅವರಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿತ್ತು. ಎಲ್ಲರಿಗಿಂತ ತುಸು ಹೆಚ್ಚೇ ಸಂಭ್ರಮಿಸಿದ ದಿವ್ಯಾ ಸುರೇಶ್ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಮಂಜು ಪಾವಗಡ ಬಿಗ್ ಬಾಸ್.. ಅರವಿಂದ್ ರನ್ನರ್.. ಬಿದ್ದಿದ್ದು ಹತ್ತಿಪ್ಪತ್ತು ಲಕ್ಷ ಮತಗಳಲ್ಲ!

'ಬಿಗ್‌ಬಾಸ್ ಸೀಸನ್ 8ರ ಫಿನಾಲೆಯಲ್ಲಿ ದಿವ್ಯಾ ಸುರೇಶ್ ಅವರ ಸಂಭ್ರಮನಾಚರಣೆಯನ್ನು ನೋಡಿದ ಮೇಲೆ ಅವರನ್ನು ಮುಂದಿನ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ಗೆ ಆಯ್ಕೆ ಮಾಡಲಾಗಿದೆ' ಎಂದು ಬರೆದಿರುವ ಟ್ರೋಲ್‌ಗಳು ಸದ್ದು ಮಾಡುತ್ತಿದೆ. ಕುಳಿತಿದ್ದಲ್ಲಿಂದಲೇ ಕುಣಿದು ಕುಪ್ಪಳಿಸಿದ ದಿವ್ಯಾ ಸುರೇಶ್ ನೋಡಿದರೆ ಇದ್ಯಾಕೋ ಓವರ್ ಆಯ್ತು ಎಂದೆನಿಸಿದರೂ ಅವರ ಗೆಳೆದ ಗೆದ್ದಿರುವ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಬಿಗ್‌ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್‌ಗೆ ಆತ್ಮೀಯವಾಗಿದ್ದದ್ದು ಮಂಜು. ಇಬ್ಬರ ಜೋಡಿ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಬಿಗ್‌ಬಾಸ್‌ ಮನೆಯ ಒಳಗೆ ಮತ್ತು ಹೊರಗೆಯೂ ಕೇಳಿ ಬರುತ್ತಿತ್ತು. ಆತ್ಮೀಯ ಸ್ನೇಹಿತರಾಗಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಜೊತೆಗೇ ಸಮಯ ಕಳೆಯುತ್ತಿದ್ದರು, ಮಾತನಾಡುತ್ತಿದ್ದರು, ವಾಕ್ ಕೂಡಾ ಮಾಡುತ್ತಿದ್ದರು.

ಫಿನಾಲೆಯಲ್ಲಿ ಮಂಜು ಮದುವೆ ವಿಚಾರ ಮಾತನಾಡಿದ್ದಾಗಿ ದಿವ್ಯಾ ಸುರೇಶ್ ಹೇಳಿದ್ದು ಇನ್ನೂ ಸುದ್ದಿಯಾಗಿದೆ. ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮದ ನಂತರ, ಮನೆಯಿಂದ ಹೊರಬಂದ ಮೇಲೂ ಈ ಜೋಡಿ ಈಗ ಸುದ್ದಿಯಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ