2014ರ TRP ಕ್ವೀನ್ ಗಳಾದ ಸೂಪರ್ ಹಿಟ್ ಸೀರಿಯಲ್ ನಟಿಯರು… ಇದೀಗ ಮತ್ತೆ ಪೈಪೋಟಿ ಕೊಡಲು ಬಂದ್ರು

Published : Aug 23, 2026, 10:41 PM IST
Kannada serial

ಸಾರಾಂಶ

Kannada Serial: 2014ರಲ್ಲಿ ಒಂದೇ ಸಮಯದಲ್ಲಿ ಎರಡು ವಾಹಿನಿಗಳ ಸೀರಿಯಲ್ TRP ಕ್ವೀನ್ ಗಳಾಗಿದ್ದ, ಇಬ್ಬರು ನಟಿಯರು ಇದೀಗ ಮತ್ತೆ ಒಂದೇ ಸಮಯದಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಾರೆ. ಅದು ಯಾವ ಧಾರಾವಾಹಿ, ಯಾವ ಸಮಯದಲ್ಲಿ ಪ್ರಸಾರವಾಗುತ್ತಿದೆ. ಮೊದಲಾದ ಪ್ರಮುಖ ಮಾಹಿತಿ ಇಲ್ಲಿದೆ.

ವೈಷ್ಣವಿ ಗೌಡ ಮತ್ತು ದಿವ್ಯಾ ಶ್ರೀಧರ್

2014ರಲ್ಲಿ ಅಂದ್ರೆ ಸುಮಾರು 12 ವರ್ಷಗಳ ಹಿಂದೆ ಕಿರುತೆರೆಯಲ್ಲಿ ಯಾವ ಇಬ್ಬರು ಸ್ಟಾರ್ ನಟಿಯರು ಒಂದೇ ಸ್ಲಾಟಲ್ಲಿ ಪೈಪೋಟಿ ನೀಡಿದ್ದರೋ, ಇದೀಗ ಮತ್ತೆ ಅದೇ ನಟಿಯರು ಒಂದೇ ಟೈಮ್ ಸ್ಲಾಟಲ್ಲಿ ಕಾಂಪೀಟಿಶನ್ ಕೊಡಲು ಬಂದೇ ಬಿಟ್ಟಿದ್ದಾರೆ. ಯಾವ ಸೀರಿಯಲ್ ಅದು, ಮತ್ತು ಯಾವ ನಟಿಯರು ಮತ್ತೆ ಕಾಂಪಿಟೀಶನ್ ಕೊಡುತ್ತಿದ್ದಾರೆ ಗೊತ್ತಾ? ಅವರು ಬೇರೆ ಯಾರೂ ಅಲ್ಲ, ವೈಷ್ಣವಿ ಗೌಡ ಮತ್ತು ದಿವ್ಯಾ ಶ್ರೀಧರ್.

ಅಗ್ನಿಸಾಕ್ಷಿ - ಆಕಾಶದೀಪ

ಅಂದು 2014 ರಲ್ಲಿ ರಾತ್ರಿ 8 ಗಂಟೆಯ ಸ್ಲೋಟ್ ನಲ್ಲಿ ದಿವ್ಯಾ ಶ್ರೀಧರ್ ‘ಆಕಾಶದೀಪ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದು ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಹಾಗೂ ಅದೇ ಸ್ಲಾಟಲ್ಲಿ ವೈಷ್ಣವಿ ಗೌಡ ಅವರು ‘ ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿ ಈಟಿವಿ ಅಂದರೆ ಇಂದಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಎರಡು ಧಾರಾವಾಹಿ ಕೂಡ ಸೂಪರ್ ಹಿಟ್ ಆಗಿದ್ದಂತಹ ಧಾರಾವಾಹಿಗಳು. ಇಬ್ಬರು ನಟಿಯರು ಕೂಡ ಟಿಆರ್’ಪಿ ಕ್ವೀನ್ ಗಳಾಗಿದ್ದರು. ಇದೀಗ ಮತ್ತೆ ಹೊಸ ಧಾರಾವಾಹಿಗಳ ಮೂಲಕ ಇಬ್ಬರು ಮತ್ತೆ ಸೇಮ್ ಸ್ಲಾಟಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ.

ಗೆಳತಿ ಗಾಯತ್ರಿ -ಆನಂದನಿಲಯ

ಇದೀಗ ದಿವ್ಯ ಶ್ರೀಧರ್ ಹಾಗೂ ವೈಷ್ಣವಿ ಗೌಡ, ಮತ್ತೆ 12 ವರ್ಷಗಳ ಬಳಿಕ ಒಂದೇ ಸ್ಲಾಟಲ್ಲಿ ಬಂದಿದ್ದಾರೆ. ವೈಷ್ಣವಿ ಗೌಡ ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಗೆಳತಿ ಗಾಯತ್ರಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ತನ್ನ ಬಾಲ್ಯದ ಗೆಳತಿ ಗಾಯತ್ರಿಯನ್ನು ಹುಡುಕಲು ಪರದಾಡುವ ಶ್ರೀಮಂತ ಮನೆಯ ಹುಡುಗಿ ಪಾರ್ವತಿಯ ಕಥೆ. ಇದೀಗ ಗಾಯತ್ರಿ ಸಿಕ್ಕಿದ್ದು, ಕಥೆಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಈ ಧಾರಾವಾಹಿಯಲ್ಲಿ ಉದಯಟಿವಿಯಲ್ಲಿ ಸದ್ಯ 7 ಗಂಟೆಗೆ ಪ್ರಸಾರವಾಗುತ್ತಿದೆ.

ಇನ್ನೊಂದು ಕಡೆ ಅದೇ ಸ್ಲಾಟಲ್ಲಿ ಸ್ಟಾರ್ ಸುವರ್ಣವಾಹಿನಿಯಲ್ಲಿ ‘ಆನಂದನಿಲಯ’ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ಶ್ರೀಧರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕೂಡು ಕುಟುಂಬದ ಕಥೆಯಾಗಿದ್ದು, ತನ್ನ ಗಂಡನ ತಮ್ಮಂದಿರಿಗಾಗಿ ಮಗು ಮಾಡಿಕೊಳ್ಳದೇ, ಮೈದುನರನ್ನೇ ತನ್ನ ಮಕ್ಕಳಾಗಿ ನೋಡುವ ಅತ್ತಿಗೆಯ ಕಥೆ ಇದಾಗಿದೆ. ಇದೀಗ ಮತ್ತೆ ವೈಷ್ಣವಿ ಮತ್ತು ದಿವ್ಯಾ ಪೈಪೋಟಿ ಕೊಡಲು ರೆಡಿಯಾಗಿದ್ದು, ಇಬ್ಬರನ್ನು ಯಾರು ಮತ್ತೆ ಟಿಆರ್ಪಿ ಕ್ವೀನ್ ಆಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ
‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ: ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್