ಕನ್ನಡ ZEE5ನಿಂದ ಮನರಂಜನೆ ಹೊಸ ಪರ್ವ; ಸಿನಿಮಾ-ಒರಿಜಿನಲ್ಸ್-ಲೈವ್ ಸ್ಪೋರ್ಟ್ಸ್.. ಬೃಹತ್ ಕಂಟೆಂಟ್ ಲಾಂಚ್!

Published : Aug 23, 2026, 05:41 PM IST
Kannada ZEE5

ಸಾರಾಂಶ

"ಕಳೆದ ವರ್ಷ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ನಮಗೆ ಹೊಸ ಉತ್ಸಾಹ ತುಂಬಿದೆ. 'ಕಾರ್ಪೊರೇಟ್ ಲವ್ ಸ್ಟೋರಿ'ಯಂತಹ ಲಾಂಗ್-ಫಾರ್ಮ್ಯಾಟ್ ಸರಣಿ ಹಾಗೂ 'ಕರಾವಳಿ'ಯಂತಹ ಮಹತ್ವದ ಸಿನಿಮಾಗಳ ಮೂಲಕ ಕನ್ನಡದಲ್ಲೇ ಅತ್ಯಂತ ವೈವಿಧ್ಯಮಯ ಮನರಂಜನೆ ನೀಡುವ ಮುಂಚೂಣಿ ಒಟಿಟಿ ತಾಣವಾಗಿ Zee5 ಬೆಳೆಯುತ್ತಿದೆ"

ZEE5 new content slate-Kannada entertainment news-ZEE5 Kannada originals-ZEE5 Kannada movies-Live sports on ZEE5-ZEE5 Kannada announcement. ಕನ್ನಡ ZEE5ನಿಂದ ಮನರಂಜನೆಯ ಹೊಸ ಪರ್ವ; ಬಹುನಿರೀಕ್ಷಿತ ಸಿನಿಮಾ, ಹೊಸ ರೀತಿಯ ಒರಿಜಿನಲ್ಸ್ ಹಾಗೂ ಲೈವ್ ಸ್ಪೋರ್ಟ್ಸ್ ಒಳಗೊಂಡ ಬೃಹತ್ ಕಂಟೆಂಟ್ ಪಟ್ಟಿ ಪ್ರಕಟ!

ಬೆಂಗಳೂರು: ಕನ್ನಡ ಒಟಿಟಿ ಲೋಕದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು 'ಕನ್ನಡ ZEE5' ಬಹುನಿರೀಕ್ಷಿತ ಸಿನಿಮಾಗಳು, ವಿಭಿನ್ನ ಒರಿಜಿನಲ್ ವೆಬ್ ಸರಣಿಗಳು, ರಿಯಾಲಿಟಿ ಶೋಗಳು ಮತ್ತು ಲೈವ್ ಸ್ಪೋರ್ಟ್ಸ್ ಒಳಗೊಂಡ ಬೃಹತ್ ಕಂಟೆಂಟ್ ಪಟ್ಟಿಯನ್ನು ಅನಾವರಣಗೊಳಿಸಿದೆ. ಸ್ಥಳೀಯ ಕಥೆಗಳಿಗೆ ಜಾಗತಿಕ ಸ್ಪರ್ಶ ನೀಡುವ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಲು ವೇದಿಕೆ ಸಜ್ಜಾಗಿದೆ. ಓಟಿಟಿ ವೇದಿಕೆಗಳಲ್ಲಿ ಕನ್ನಡ ಕಂಟೆಂಟ್ಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರುವುದು zee5 ಮಾತ್ರ ಎಂಬುದು ವಿಶೇಷ. ಜೊತೆಗೆ ಅನೇಕ ಮೊದಲುಗಳಿಗೆ Zee5 ನಾಂದಿ ಹಾಡುತ್ತಿದೆ.

ಪ್ರಮುಖ ಸಿನಿಮಾಗಳು ಮತ್ತು ವೆಬ್ ಸರಣಿಗಳು

ಕರಾವಳಿ: ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ತ ಗಾಣಿಗ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಈ ಪಟ್ಟಿಯ ಪ್ರಮುಖ ಆಕರ್ಷಣೆಯಾಗಿದೆ.

ಕಾರ್ಪೊರೇಟ್ ಲವ್ ಸ್ಟೋರಿ: ಕನ್ನಡದ ಮೊದಲ ಲಾಂಗ್-ಫಾರ್ಮ್ಯಾಟ್ ಒರಿಜಿನಲ್ ವೆಬ್ ಸರಣಿ ಇದಾಗಿದ್ದು, ಪನ್ನಗಾಭರಣ ನಿರ್ದೇಶನದಲ್ಲಿ ಪ್ರಿಯಾಂಕಾ ಉಪೇಂದ್ರ, ಸಂಜನಾ ದಾಸ್ ಹಾಗೂ ಪ್ರಣವ್ ಶ್ರೀಧರ್ ನಟಿಸಿದ್ದಾರೆ.

ಮಲ್ಲಿಕಾ: ಭಾರತದ ಮೊದಲ ಅಪರಾಧಿ ಮಹಿಳಾ ಸೀರಿಯಲ್ ಕಿಲ್ಲರ್ ಮಲ್ಲಿಕಾ.. ಈಕೆಯ ಕಥೆಯಿಂದ ಪ್ರೇರಿತವಾದ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ರೋಶನಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕುಡ್ಲ ಕಪ್: ಕರಾವಳಿ ಹಿನ್ನೆಲೆಯ ಕ್ರೀಡಾ ಲೋಕವನ್ನು ತೆರೆದಿಡುವ ಸ್ಪೋರ್ಟ್ಸ್ ಡ್ರಾಮಾದಲ್ಲಿ ಪೃಥ್ವಿ ಅಂಬಾರ್ ಮತ್ತು ಅರ್ಜುನ್ ಕಾಪಿಕಾಡ್ ನಟಿಸಿದ್ದಾರೆ.

ಅಯ್ಯನ ಮನೆ 2: ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸರಣಿಯ ಮುಂದುವರಿದ ಭಾಗವನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದು, ಖುಷಿ ರವಿ ಮತ್ತು ಅಕ್ಷಯ್ ನಾಯಕ್ ನಟಿಸಿದ್ದಾರೆ.

ಇತರ ಪ್ರಮುಖ ಶೋಗಳು: ನಿಶ್ವಿಕಾ ನಾಯ್ಡು ನಟನೆಯ 'ಆಪರೇಷನ್ ಬಂಗಾರ', ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಾಣದ 'ಕೂಲ್ ಮಾಮ್ಸ್' ಮತ್ತು ಕೋರ್ಟ್‌ರೂಮ್ ಡ್ರಾಮಾ 'ವಕಾಲತ್'.

ರಿಯಾಲಿಟಿ ಶೋಗಳು ಮತ್ತು ಎಐ-ಚಾಲಿತ ಕಂಟೆಂಟ್

ನಾನ್-ಫಿಕ್ಷನ್ ವಿಭಾಗದಲ್ಲಿ ಅಕುಲ್ ಬಾಲಾಜಿ ನಿರೂಪಣೆಯ 'ವೆಲ್ಕಮ್ ಟು ದ ಜಂಗಲ್' ಮತ್ತು 'ಹಳ್ಳಿ ಪವರ್' ಶೋಗಳಿವೆ. ಇದರೊಂದಿಗೆ ಗರುಡ, ವಿಕ್ರಮ್ ವೇತಾಳ, ಶಿವ ಸತಿ, ಚಂದ್ರಕಾಂತ, ತಿರುಪತಿ ಬಾಲಾಜಿ, ಬರ್ಬರಿಕ್ ನರ್ಮದಾ ಹಾಗೂ ರಾಮ್ ಆಂಜನೇಯ ಯುದ್ಧ ಮುಂತಾದ ಕಥೆಗಳನ್ನು ಎಐ-ತಂತ್ರಜ್ಞಾನದ (AI-powered) ಮೂಲಕ ಪ್ರಸ್ತುತಪಡಿಸಲಾಗುತ್ತಿದೆ. ಮಕ್ಕಳಿಗಾಗಿ 'ಕುಂದಕ ಮಂದಕ್ಕ' ಅನಿಮೇಷನ್ ಕೂಡ ಲಭ್ಯವಿದೆ.

ಕ್ರೀಡಾ ಪ್ರೇಮಿಗಳಿಗೆ ನೇರ ಪ್ರಸಾರ

2034ರ ವರೆಗೆ ಫಿಫಾ (FIFA) ಜೊತೆಗಿನ ಪಾಲುದಾರಿಕೆಯ ಭಾಗವಾಗಿ 'FIFA World Cup 2026' ಮತ್ತು 2030ರ ವಿಶ್ವಕಪ್ ಪಂದ್ಯಾವಳಿಗಳು ಕನ್ನಡದಲ್ಲೂ ಲಭ್ಯವಾಗಲಿವೆ. ಇದರ ಜೊತೆಗೆ ಬುಂಡೆಸ್‌ಲಿಗಾ, ಕೊಪ್ಪಾ ಇಟಾಲಿಯಾ ಮತ್ತು ಸೂಪರ್‌ಕೊಪ್ಪಾ ಇಟಾಲಿಯಾನಾ ಪಂದ್ಯಗಳ ನೇರ ಪ್ರಸಾರವನ್ನು ಕ್ರೀಡಾಭಿಮಾನಿಗಳು ವೀಕ್ಷಿಸಬಹುದಾಗಿದೆ.

ದೊಡ್ಡ ಮಟ್ಟದ ಕ್ರಿಯೇಟಿವ್ ಸಹಯೋಗ

ಕೆವಿಎನ್ ಪ್ರೊಡಕ್ಷನ್ಸ್ , ಡಾಲಿ ಪಿಕ್ಚರ್ಸ್, ಶ್ರುತಿ ನಾಯ್ಡು ಪ್ರೊಡಕ್ಷನ್ಸ್, ಸ್ಟ್ರೀಟ್‌ಲ್ಯಾಂಪ್ ಮೀಡಿಯಾ, ದೇವರಾಜ್ ಪೂಜಾರಿ ಪ್ರೊಡಕ್ಷನ್ಸ್, ಫಿಲ್ಮಿ ಫೆಲೋ ಸ್ಟುಡಿಯೋಸ್ ಮತ್ತು ಶೈವ್ ಸ್ಟುಡಿಯೋಸ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ zee5 ಕೈಜೋಡಿಸಿದೆ.

ಝೀ ಕನ್ನಡದ ಚೀಫ್ ಚಾನೆಲ್ ಆಫೀಸರ್ ಹಾಗೂ ಕನ್ನಡ Zee5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, "ಕಳೆದ ವರ್ಷ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ನಮಗೆ ಹೊಸ ಉತ್ಸಾಹ ತುಂಬಿದೆ. 'ಕಾರ್ಪೊರೇಟ್ ಲವ್ ಸ್ಟೋರಿ'ಯಂತಹ ಲಾಂಗ್-ಫಾರ್ಮ್ಯಾಟ್ ಸರಣಿ ಹಾಗೂ 'ಕರಾವಳಿ'ಯಂತಹ ಮಹತ್ವದ ಸಿನಿಮಾಗಳ ಮೂಲಕ ಕನ್ನಡದಲ್ಲೇ ಅತ್ಯಂತ ವೈವಿಧ್ಯಮಯ ಮನರಂಜನೆ ನೀಡುವ ಮುಂಚೂಣಿ ಒಟಿಟಿ ತಾಣವಾಗಿ Zee5 ಬೆಳೆಯುತ್ತಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Entertainment: ₹2,000 ಸಂಬಳದಿಂದ ಸೂಪರ್‌ಸ್ಟಾರ್ ಪಟ್ಟಕ್ಕೆ! ಟಾಕ್ಸಿಕ್ ಚಿತ್ರದಲ್ಲೂ ಕಮಾಲ್ ಮಾಡಲಿದ್ದಾರೆ ಈ ಬಾಕ್ಸ್ ಆಫೀಸ್ ಕ್ವೀನ್!
ಸಂಗೀತ ಸಮರದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಯಾರು? ಕೊನೆಗೂ ಹೊರಬಿತ್ತು ಉತ್ತರ!