ಮದುವೆ ಮುನ್ನ ಕುಡ್ದಿದ್ದಕ್ಕೆ ಗಂಡ-ಭಾವ ರೂಮ್‌ಗೆ ಎತ್ಕೊಂಡ್ ಹೋದ್ರು: ದಿಶಾ ಮದನ್ ಶಾಕಿಂಗ್ ಹೇಳಿಕೆ

Published : Aug 04, 2022, 04:49 PM IST
ಮದುವೆ ಮುನ್ನ ಕುಡ್ದಿದ್ದಕ್ಕೆ ಗಂಡ-ಭಾವ ರೂಮ್‌ಗೆ ಎತ್ಕೊಂಡ್ ಹೋದ್ರು: ದಿಶಾ ಮದನ್ ಶಾಕಿಂಗ್ ಹೇಳಿಕೆ

ಸಾರಾಂಶ

 ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಮದುವೆ ದಿನಗಳನ್ನು ನೆನಪಿಸಿಕೊಂಡ ದಿಶಾ ಮದನ್. ಪಾರ್ಟಿ ಮಾಡುವವರಿಗೆ ನಟಿಯಿಂದ ಸಲಹೆ...  

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಸೋಷಿಯಲ್ ಮೀಡಿಯಾ influencer, ನಟಿ ಕಮ್ ಡ್ಯಾನ್ಸರ್ ದಿಶಾ ಮದನ್ ಮತ್ತು ಶಶಾಂಕ್ ಸ್ಪರ್ಧಿಸುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ 5 ವರ್ಷಗಳ ಅವಧಿಯಲ್ಲಿ ಇಬ್ಬರು ಮಕ್ಕಳನ್ನು ಮಾಡಿಕೊಂಡು ಲೈಫ್‌ನ ಕೂಲ್ ಆಗಿ ಎಂಜಾಯ್ ಮಾಡುತ್ತಿರುವುದಾಗಿ ದಿಶಾ ಹೇಳಿದ್ದಾರೆ. ಆದರೆ ಮದುವೆ ದಿನ ಯಾಕೆ ಬ್ಲರ್ ಅಗಿತ್ತು ಎಂಬುದಕ್ಕೆ ಉತ್ತರನೂ ಕೊಟ್ಟಿದ್ದಾರೆ. 

'ನಾವು ಮದುವೆಯಾಗಿ 5 ವರ್ಷ ಆಗಿದೆ. ವಾರ್ಷಿಕೋತ್ಸವಕ್ಕೆ ವಿಶ್ ಮಾಡಬೇಕು ಎಂದು ನಾನು ಒಂದು ವಾರದಿಂದ ನೆನಪು ಮಾಡುವೆ. ಅವರಿಗೆ ನೆನಪಿದೆಯೋ ಇಲ್ವೋ ನನಗೆ ಅದು ಮುಖ್ಯವಲ್ಲ ಆದರೆ ನನಗೆ ಗಿಫ್ಟ್‌ ಬರಬೇಕು ಅದಿಕ್ಕೆ ನೆನಪು ಮಾಡ್ತೀನಿ. ಜೂನ್‌ 4,2017ರಲ್ಲಿ ನಾವು ಮದುವೆ ಆಗಿದ್ದು. ನನ್ನ ಗಂಡ ಮುಖ ಎಕ್ಸಪ್ರೆಶನ್‌ ನೋಡಿ ಏನೂ ಹೇಳುವುದಕ್ಕೆ ಆಗೋಲ್ಲ'ಎಂದು ದಿಶಾ ಮಾತನಾಡಿದ್ದಾರೆ.

'ಮದುವೆ ದಿನ ಯಾಕೆ ಎಲ್ಲಾ ಬ್ಲರ್ ಬ್ಲರ್ ಅಗಿತ್ತು?' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಪ್ರಶ್ನೆ ಮಾಡುತ್ತಾರೆ. 

'ಮದುವೆಯಾದ ಹಿಂದಿನ ದಿನ ಪಾರ್ಟಿ ಸ್ವಲ್ಪ ಜಾಸ್ತಿ ಅಗಿತ್ತು'ಎಂದು ಶಶಾಂಕ್ ಹೇಳಿದ್ದಾರೆ. 'ನಾನು ಮಾತನಾಡುವ ಮೊದಲೇ ಮಾರಲ್ ಆಫ್‌ ದಿ ಸ್ಟೋರಿ ಹೇಳ್ತೀನಿ. ಮದುವೆ ಆಗುವ ಹಿಂದಿನ ದಿನ ಯಾರೂ ಸಂಗೀತ ಮತ್ತು ಪಾರ್ಟಿ ಇಟ್ಟುಕೊಳ್ಳಬೇಡಿ. ಒಂದು ದಿನ ಬ್ರೇಕ್ ಕೊಡ್ಬೇಕು. ತುಂಬಾ ಬಳ್ಳೆ ಪಾರ್ಟಿ ಮಾಡಿದ್ದು ಆದರೆ ಸ್ವಲ್ಪ ಜಾಸ್ತಿ ಆಯ್ತು. ಮದುವೆ ಸಮಯದಲ್ಲಿ ನಾನು 55 ಕೆಜಿ ತೂಕ ಇದ್ದೆ, ನಾನು ಧರಿಸಿದ್ದ ಬಟ್ಟೆ 10 ಕೆಜಿ ಇತ್ತು. ಪಾರ್ಟಿ ಆದ್ಮೇಲೆ ನಾನು ಸ್ವಲ್ಪ ಅಲೇ ಬಿದ್ದು ಹೋಗಿದ್ದೆ. ಶಶಾಂಕ್ ಮತ್ತು ಅವರ ಅಣ್ಣ ನನ್ನನ್ನು ಎತ್ಕೊಂಡು ರೂಮಿಗೆ ಕರೆದುಕೊಂಡು ಹೋದ್ದರು. ಅವರಿಬ್ಬರೂ ಏನೂ ಕಡಿಮೆ ಇರಲಿಲ್ಲ ಆದರೆ ನಡೆಯುತ್ತಿದ್ದರು. ಮದುವೆ ದಿನ ತಲೆ ಮತ್ತು ಕಾಲು ನೋವಿತ್ತು. ಲಿಫ್ಟ್‌ನಲ್ಲಿ ತಲೆ ಕಾಲು ಎಲ್ಲಾ ಚೆನ್ನಾಗಿ ಹೊಡೆಸಿದ್ದಾರೆ' ಎಂದು ದಿಶಾ ಮದನ್ ಹೇಳಿದ್ದಾರೆ.

ನನ್ನ ಗಂಡ ಕೆಲಸ ಮಾಡ್ತಿಲ್ಲ,16 ವರ್ಷದಿಂದ ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ: ಸ್ವಪ್ನಾ ದೀಕ್ಷಿತ್

'ಆಕ್ಸಿಡೆಂಟ್‌ನಲ್ಲಿ ನಾನು ಅಣ್ಣನನ್ನು ಕಳೆದುಕೊಂಡೆ ಹೀಗಾಗಿ ನಾನು ಒಬ್ಬಳೆ ಮಗಳು. ಆ ಘಟನೆ ನಡೆದ ಮೇಲೆ ತಂದೆ ತಾಯಿ ನಾವು  ತುಂಬಾ ಕ್ಲೋಸ್ ಆದ್ವಿ. ಒಬ್ಬಳೆ ಮಗಳಾಗಿ ನಾನು ಮನೆ ಬಿಟ್ಟು ಹೋಗಬೇಕು ಅಂದ್ರೆ ಬೇಸರ ಅಗುತ್ತೆ. ಮೊದಲಿನಿಂದಲೂ ನಾನು ಮನೆಯಲ್ಲಿ ಹೇಳುತ್ತಿದ್ದೆ ನಾನು ಹುಡುಗ ನೋಡಿದ್ದರೂ ಅಥವಾ ನೀವು ಹುಡುಕಿದ್ದರೂ ನನಗೆ ಬೆಂಗಳೂರು ಹುಡುಗನೇ ಬೇಕು ಅಂತ. ಬೆಂಗಳೂರು ಹುಡುಗ ಸಿಕ್ಕಿದ್ದಕ್ಕೆ ಖುಷಿ ಇದೆ. ಮನೆ ಬಿಟ್ಟು ಬೇರೆ ಮನೆ ಸೇರುವುದಕ್ಕೆ ಬೇಸರ ಇತ್ತು ಆದರೆ ಮತ್ತೊಂದು ಖುಷಿ ಏನೆಂದೆ ಅಳಿಯನ ರೀತಿ ಶಶಾಂಕ್ ಇರಲಿಲ್ಲ ಮಗನಂತೆ ಇದ್ದಾರೆ.' ಎಂದಿದ್ದಾರೆ ದಿಶಾ. 

'ಮದುವೆ ಆದ್ಮೇಲೆ ನಾನು ತಾಯಿನ ತುಂಬಾನೇ ಮಿಸ್ ಮಾಡಿಕೊಂಡೆ. ತಂದೆ ಜೊತೆ ಸ್ಪೆಷಲ್ ಬಾಂಡ್ ಇದೆ ಆದರೆ ಎಲ್ಲಾದಕ್ಕೂ ತಾಯಿನೇ ನನಗೆ ಎಲ್ಲಾ. ನಾನು 3 ವಯಸ್ಸಿನಲ್ಲಿದ್ದಾಗ ಡ್ಯಾನ್ಸ್‌ಗೆ ಹಾಕಿದ್ದರೂ ಈಗ ಜೀವನದಲ್ಲಿ ನಾನು ಏನೇ ಸಾಧನೆ ಮಾಡಿದ್ದರೂ ತಾಯಿಯಿಂದಲೇ. ನಾನು ಅವರನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನಾನು ಮಾತ್ರವಲ್ಲ ಅವರ ಮೊಮ್ಮಕ್ಕಳನ್ನು ಕರೆದುಕೊಂಡು ಹೋಗ್ತೀನಿ. ಶಶಾಂತ್‌ನ ಮದುವೆ ಆದ್ಮೇಲೆ ಜೀವನ ಚೆನ್ನಾಗಿದೆ' ಎಂದು ದಿಶಾ ಮಾತನಾಡಿದ್ದಾರೆ

'ದಿಶಾನ ಮದುವೆ ಆದ್ಮೇಲೆ ಜೀವನ ಆಟೋಮ್ಯಾಟಿಕ್ ಮೋಡ್‌ಗೆ ಹೋಗಿದೆ. ನಾನು ಯಾವುದನ್ನೂ ಯೋಚನೆ ಮಾಡೋದೆ ಬೇಡ. ಸುಮ್ಮನೆ ಮನೆಗೆ ಬಂದ್ರೆ ಏನಾದರೂ ಬೇಕು ಅನಿಸಿದ್ದರೆ ಅವಳು ತಂದು ಕೊಡುತ್ತಾರೆ.' ಎಂದು ಪತ್ನಿಗೆ ಬಗ್ಗೆ ಶಶಾಂತ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?