ನನ್ನ ಗಂಡ ಕೆಲಸ ಮಾಡ್ತಿಲ್ಲ,16 ವರ್ಷದಿಂದ ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ: ಸ್ವಪ್ನಾ ದೀಕ್ಷಿತ್

By Vaishnavi Chandrashekar  |  First Published Aug 4, 2022, 3:32 PM IST

ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ತಮ್ಮ ಜೀವನ ಕಹಿ ಘಟನೆಯನ್ನು ಹಂಚಿಕೊಂಡು ಕಿರುತೆರೆ ನಟಿ ಸ್ವಪ್ನಾ ದೀಕ್ಷಿತ್.....
 

I worked 16 years to run my family says swapna dixit in ismart jodi vcs

ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಿಯಲ್‌ ಜೋಡಿಗಳಿಗೆಂದು ರಿಯಾಲಿಟಿ ಶೋ ನಡೆಯುತ್ತಿದೆ ಅದೇ ಇಸ್ಮಾರ್ಟ್‌ ಜೋಡಿ. ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಸೆಲೆಬ್ರಿಟಿಗಳು ಈ ಶೋನಲ್ಲಿ ಸ್ಪರ್ಧಿಸುವ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತರವಾಗುತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಇಸ್ಮಾರ್ಟ್‌ ಜೋಡಿ ನೋಡಲು ಜನರು ಕಾದಿರುತ್ತಾರೆ. ಆಗಸ್ಟ್‌ 6ರಂದು ಪ್ರಸಾರವಾಗಲಿರುವ ಎಪಿಸೋಡ್‌ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಿರುತೆರೆ ನಟಿ ಕಣ್ಣೀರಿಟ್ಟಿದ್ದಾರೆ...

ಹೌದು! ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸ್ವಪ್ನಾ ದೀಕ್ಷಿತ್ ಅಭಿನಯಿಸುತ್ತಿದ್ದಾರೆ. ಟಾಪ್ ನಟಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಮತ್ತು ವಿಲನ್ ಆಗಿ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ.  ಇಸ್ಮಾರ್ಟ್‌ ಜೋಡಿ ಮೂಲಕ ಸ್ವಪ್ನಾ ದೀಕ್ಷಿತ್ ತಮ್ಮ ಲೈಫ್‌ ಪಾರ್ಟನರ್‌ನ ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ. ಒಂದು ಎಪಿಸೋಡ್‌ನಲ್ಲಿ ನಮ್ಮ ಜೀವನದಲ್ಲಿ ನಮಗೆ ಯಾವುದು ಮುಖ್ಯ ಎಂಬುದನ್ನು ಆರ್ಡರ್‌ನಲ್ಲಿ ಒಂದು ಸ್ಟ್ಯಾಂಡ್‌ ಮೇಲೆ ಅಂಟಿಸಬೇಕು. 

Tap to resize

Latest Videos

ಪಾಕೆಟ್ ಮನಿ ತಗೊಳೋ ಟೈಮಲ್ಲಿ ಗಂಡ ಬ್ಯುಸಿನೆಸ್‌ ಮ್ಯಾನ್: ಇಸ್ಮಾರ್ಟ್ ಜೋಡಿಗೆ ದಿಶಾ ಮದನ್ ಎಂಟ್ರಿ

ಸ್ವಪ್ನಾ ಆಯ್ಕೆ ಮಾಡಿಕೊಂಡಿದ್ದು ಹೀಗಿದೆ:

1) ವೃತ್ತಿ ಜೀವನ
2) ಗಂಡ
3) ಮಕ್ಕಳು
4) ಅಪ್ಪ- ಅಮ್ಮ
5) ಹಣ
6) ಸ್ನೇಹಿತರು
7) ಫೋನ್
8)ಪ್ರವಾಸ
9) ಅತ್ತೆ-ಮಾವ

ಈ ಆರ್ಡರ್‌ನಲ್ಲಿ ಸ್ವಪ್ನಾ ಆಯ್ಕೆ ಮಾಡಿಕೊಂಡಿದ್ದಾರೆ. 'ಸ್ವಪ್ನಾ ಅವರೇ ಪ್ರಯಾರಿಟಿ ಬೋರ್ಡ್‌ನಲ್ಲಿ ನೀವು ವೃತ್ತಿ ಜೀವನನ್ನು ಮೊದಲು ಆಯ್ಕೆ ಮಾಡಿಕೊಂಡಿರುವುದು ಯಾಕೆ? ಆನಂತರ ಗಂಡ ತಂದೆ ತಾಯಿ ಹೇಳಿದ್ದೀರಿ. ಯಾಕೆ?' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಪ್ರಶ್ನೆ ಮಾಡುತ್ತಾರೆ. 

5 ಎಪಿಸೋಡ್‌ ಆದ್ಮೇಲೆ ಎಲಿಮಿನೇಷನ್ ಶುರುವಾಗುತ್ತೆ; ಇಸ್ಮಾರ್ಟ್‌ ಜೋಡಿ ಶೋ ಬಗ್ಗೆ ಗಣೇಶ್!

'16 ವರ್ಷಗಳಿಂದ ನನ್ನ ಇಡೀ ಮನೆ ಜವಾಬ್ದಾರಿನ ನಾನೇ ನೋಡ್ಕೊಳ್ಳುತ್ತಿರುವುದು' ಎಂದು ಸ್ವಪ್ನಾ ಹೇಳುತ್ತಾರೆ. 'ನೀವು ಸರಿಯಾಗಿ ಹೇಳುತ್ತಿದ್ದೀರಾ? ನೀವು ಹೇಳುತ್ತಿರುವುದು ನೋಡಿದರೆ ನಿಮ್ಮ ಪತಿ ಅಶ್ವಿನ್ ಮನೆಯಲ್ಲಿಯೇ ಇದ್ದಾರಾ' ಎಂದು ಗಣೇಶ್ ಮರು ಪ್ರಶ್ನೆ ಮಾಡುತ್ತಾರೆ. 

'ಹೌದು ನನ್ನ ಗಂಡ ಮನೆಯಲ್ಲಿದ್ದಾರೆ. ನನಗೆ ನನ್ನ ಗಂಡ ಹೀರೋನೇ ಸರ್ ಆದರೆ ಸಮಾಜದಲ್ಲಿ ಅವರಿಗೊಂದು ಗೌರವ ಬೇಕು. ನಮ್ಮ ಅಮ್ಮನಿಗೆ ತುಂಬಾ ಕೊರಗಿದೆ ನನ್ನ ಮಗಳು ಒಬ್ಬಳೆ ದುಡಿಯುತ್ತಿದ್ದಾಳೆ ಇವನು ಸುಮ್ಮನೆ ಕೂತ್ಕೊಂಡು ತಿನ್ನುತ್ತಿದ್ದಾನೆ' ಎಂದು ಸ್ವಪ್ನಾ ಉತ್ತರ ಕೊಡುತ್ತಾರೆ. ಸೀಕ್ರೆಟ್‌ ರೂಮ್‌ನಲ್ಲಿ ಅಶ್ವಿನಿ ಕುಳಿತುಕೊಂಡಿದ್ದರು 'ದಯವಿಟ್ಟು ನಿನ್ನ ಮಾತುಗಳನ್ನು ನಿಲ್ಲಿಸು. ಕೊಡಲಿ ಹಾಕಿದಳು ನನ್ನ ಕಾಲಿಗಳ ಮೇಲೆ' ಎಂದು ಹೇಳುತ್ತ ಸೀಕ್ರೆಟ್‌ ರೂಮಿನಿಂದ ಹೊರ ನಡೆಯುತ್ತಾರೆ.

ನಟಿ ಸ್ವಪ್ನಾ ಮತ್ತು ಅಶ್ವಿನ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟು 19 ವರ್ಷ ಕಳೆದಿದೆ.. ಪಿಯುಸಿಯಲ್ಲಿ ಇಬ್ಬರೂ ಭೇಟಿಯಾಗಿ ಪ್ರೀತಿಸಲು ಆರಂಭಿಸಿದ್ದರು ಈ ಲೆಕ್ಕ ನೋಡಿದರೆ ಸುಮಾರು 22 ವರ್ಷಗಳ ಕಾಲ ಒಟ್ಟಿಗೆ ಜೀವನ ಮಾಡುತ್ತಿದ್ದಾರೆ.

ಕನ್ನಡ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ರತ್ನ, ಭರಾಟೆ, ರಂಗಿತರಂಗ, ರಾಜು ಕನ್ನಡ ಮೀಡಿಯಂ, ಮುಕುಂದ ಮುರಾರಿ, ಕೃಷ್ಣ ರುಕ್ಕು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸ್ವಪ್ನಾ ಅಭಿನಯಿಸಿದ್ದಾರೆ.

 

vuukle one pixel image
click me!
vuukle one pixel image vuukle one pixel image