Dimpy Ganguly 3ನೇ ಮಗುವಿನ ಮುಖ ರಿವೀಲ್ ಮಾಡಿದ ನಟಿ ಡಿಂಪಿ; ಮಗ ಅಮ್ಮನ ಕಾಪಿ!

Published : Oct 30, 2022, 12:53 PM IST
Dimpy Ganguly 3ನೇ ಮಗುವಿನ ಮುಖ ರಿವೀಲ್ ಮಾಡಿದ ನಟಿ ಡಿಂಪಿ; ಮಗ ಅಮ್ಮನ ಕಾಪಿ!

ಸಾರಾಂಶ

ಮೂರನೇ ಮಗುವಿನ ಹೆಸರು ಮತ್ತು ಫೋಟೋ ರಿವೀಲ್ ಮಾಡಿದ ಬಿಗ್ ಬಾಸ್ ಸ್ಪರ್ಧಿ ಡಿಂಪಿ....

ಹಿಂದಿ ಬಿಗ್ ಬಾಸ್ ಖ್ಯಾತಿಯ ಡಿಂಪಿ ಗಂಗೂಲಿ ಜುಲೈ 27,2022ರಂದು ಮೂರನೇ ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಪದೇ ಪದೇ ಫೋಟೋ ರಿವೀಲ್ ಮಾಡಿ ಎಂದು ಒತ್ತಾಯ ಮಾಡುತ್ತಿರುವುದಕ್ಕೆ ಹೆಸರಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಮಗ ನೊಡಲು ಅಮ್ಮನಂತೆ ಇರುವ ಕಾರಣ ಮಗ ಮಮ್ಮಿ ಕಾಪಿನೇ ಎನ್ನುತ್ತಿದ್ದಾರೆ ನೆಟ್ಟಿಗರು.

'ಒಂದು corrupt ಆಗುತ್ತೆ, ಎರಡು ಡಿವೈಡ್ ಮಾಡುತ್ತೆ ಮೂರು ಬ್ಯಾಲೆನ್ಸ್‌ ಮಾಡುತ್ತೆ. ನಿಮ್ಮೆಲ್ಲರಿಗೂ ನನ್ನ ಮೂರನೇ ಮಗು ಪರಿಚಯಿಸಿಕೊಡುತ್ತಿರುವೆ. ರಿಶಾನ್ ಗಂಗೂಲಿ ರಾಯ್‌ನ ಭೇಟಿ ಮಾಡಿ' ಎಂದು ದಿಂಪಿ ಬರೆದುಕೊಂಡಿದ್ದಾರೆ. ರಶ್ಮಿ ಶೆಟ್ಟಿ ಬೇಬಿ ಫೋಟೋಶೂಟ್ ಮಾಡಿದ್ದಾರೆ. 'ಯಾರು ಹೇಳಿದ್ದು ಭೂಮಿ ಮೇಲೆ ಏಂಜಲ್ಸ್‌ ಇಲ್ಲ ಎಂದು? ಇಷ್ಟೊಂದು ಮುದ್ದಾದ ಮಗು ಇರುವಾಗ? ಮೂರನೇ ಮಗು ನೋಡಲು ಸೇಮ್ ಅಮ್ಮನೇ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಬಿಗ್ ಬಾಸ್ ಖ್ಯಾತಿಯ Dimpy Ganguly ಪ್ರೆಗ್ನೆನ್ಸಿ ಫೋಟೋಶೂಟ್‌ ವೈರಲ್‌

ಮಗ ಎಂದು ಅನೌನ್ಸ್ ಮಾಡಿದ ಕ್ಷಣ:

ಮೂರನೇ ಮಗು ಬರ ಮಾಡಿಕೊಂಡ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ದಿಂಪಿ ಹಂಚಿಕೊಂಡಿದ್ದರು. 'We Did it! ಇದು ಸಂಪೂರ್ಣವಾಗಿ ಮೆಡಿಕೇಷನ್‌ ಇಲ್ಲದೆ ಮಾಡಿರುವ ವಾಟರ್ ಬರ್ತ್‌ (ನೀರಿನಲ್ಲಿ ಮಗುವಿಗೆ ಜನ್ಮ ಕೊಡುವುದು). ಇದು ನನ್ನ ಜೀವನದ ಅತ್ಯಂತ ಜಾಗೃತಿ, ಸಬಲೀಕರಣ ಮತ್ತು ವಿನಮ್ರ ಮತ್ತು ಸವಾಲಿನ ಅನುಭವವಾಗಿತ್ತು.ಕಣ್ಣು ಮುಚ್ಚಿಕೊಂಡು ಒಂದು ಸತ್ಯ ಹೇಳಬೇಕು ಅಂದ್ರೆ ನಮಗೆ ಸಿಕ್ಕಿರುವ ಬೆಸ್ಟ್‌ ಗಿಫ್ಟ್‌ ಅಂದ್ರೆ ನಮ್ಮ ದೇಹ, ಅದನ್ನು ಹೆಚ್ಚಿಗೆ ಗೌರವಿಸಿ ಹಾಗೂ ಆರೋಗ್ಯವಾಗಿ ನೋಡಿಕೊಳ್ಳಿ ಏಕೆಂದರೆ ನಮ್ಮ ದೇಹ ತುಂಬಾ ಮಿರಾಕಲ್ ಮಾಡುತ್ತದೆ. ನನ್ನ ಮೊದಲು ಮತ್ತು ಎರಡನೇ ಪ್ರೆಗ್ನೆನ್ಸಿ ಕೂಡ ನಾರ್ಮಲ್ ಆಗಿತ್ತು ಆದರೆ ಮೂರನೇ ಮಗುವಿಗೂ ಯಾವುದೇ ಮೆಡಿಸನ್‌ ಇಲ್ಲದೆ ಆಗುತ್ತದೆ ಎಂದು ನಂಬಿರಲಿಲ್ಲ. ಒಂದು ಪರ್ವತ ತಳ್ಳುಬೇಕು ಎಂದಾಗ ಮನಸ್ಸು ಮಾಡುವ ಗಟ್ಟಿ ನಿರ್ಧಾರ ಇದೆ ಅಲ್ವಾ ಅಷ್ಟೇ ಗಟ್ಟಿ ಶಕ್ತಿ ಮಗುವಿಗೆ ಜನ್ಮ ನೀಡುವಾಗ ಬರುತ್ತದೆ. ನಮ್ಮ ಕಂದಮ್ಮನನ್ನು ಬರ ಮಾಡಿಕೊಂಡಿದ್ದೀವಿ ಅವನನ್ನು ರಿಶಾನ್ ಎಂದು ಕರೆಯಬಹುದು' ಎಂದು ಡಿಂಪಿ ಬರೆದುಕೊಂಡಿದ್ದರು.

'ನೀವು ದೇವರನ್ನು ನಂಬುತ್ತೀರಾ? ನಾನು ನಂಬುವೆ. ಎಂದೂ ಆ ಶಕ್ತಿಯನ್ನು ನಾನು ನೋಡಿಲ್ಲ ಆದರೆ ನನ್ನನ್ನು ಆ ಶಕ್ತಿ ಕಾಪಾಡುತ್ತಿರುವುದು ಫೀಲ್ ಅಗುತ್ತಿದೆ. ಹೇಗೆ ನನ್ನ ಜರ್ನಿನ ಪದಗಳಲ್ಲಿ ವರ್ಣಿಸಲಿ? ತುಂಬಾ ಕಷ್ಟಕರವಾದ ಈ ಜರ್ನಿಯಲ್ಲಿ ಯಾವುದೇ ಸ್ಕ್ರ್ಯಾಚ್‌ ಇಲ್ಲದೆ ಹೊರ ಬಂದಿರುವೆ ನಾನು. ಒಂದು ನಿಮಿಷವೂ ಯೋಚನೆ ಮಾಡದೆ ನಾನು ನೋ ಹೇಳಿರುವೆ ಅಂದ್ರೆ ಅದು ನನ್ನ ಮನಸ್ಸಿನ ಮಾತು. ತುಂಬಾ ಪ್ರೀತಿ ಕೊಡುವ ಫ್ಯಾಮಿಲಿ, ಸ್ನೇಹಿತರು ಮತ್ತು ಅಭಿಮಾನಿಗಳು ಇರುವಾಗ ಕೆಲವೊಂದು ನೆಗೆಟಿವ್ ಕಾಮೆಂಟ್ ಬೇಸರ ಮಾಡುತ್ತದೆ. ಈ ಜರ್ನಿಯಲ್ಲಿ ನಾನು ಮನೆ ಕಂಡುಕೊಂಡಿಲ್ಲ ಬದಲಿಗೆ ಒಂದು ಹಳ್ಳಿಯನ್ನು ಕಟ್ಟಿರುವೆ. ಈ 9 ತಿಂಗಳ ಜರ್ನಿಯಲ್ಲಿ ನನ್ನನ್ನು ನಾನು ನೋಡಿಕೊಂಡು ರೆಸ್ಟ್‌ ಮಾಡುವಾಗ ನನ್ನ ಇಬ್ಬರು ಮಕ್ಕಳನ್ನು ನೋಡಿಕೊಂಡವರಿಗೆ ಥ್ಯಾಂಕ್ಸ್ ಹೇಳಬೇಕು. ಗರ್ಭಿಣಿ ಬಯಕೆ ಅರ್ಥ ಮಾಡಿಕೊಂಡು ಮನೆ ಕೆಲಸದಲ್ಲಿ ಸಾಹಯ ಮಾಡುತ್ತಾ ಈ ಜರ್ನಿಯನ್ನು ಬ್ಯೂಟಿಫುಲ್ ಮಾಡಿದಕ್ಕೆ ಥ್ಯಾಂಕ್ಸ್‌. ಅನಿರೀಕ್ಷಿತ ಮೆಸೇಜ್ ಮತ್ತು ಕಾಲ್‌ಗಳು ಖುಷಿ ಕೊಟ್ಟಿದೆ . ಮಗು ಹುಟ್ಟುವ ಮುನ್ನವೇ ನೀವು ಗಿಫ್ಟ್‌ ಕೊಡುತ್ತಿರುದು ಮತ್ತೊಂದು ಖುಷಿ ವಿಚಾರ' ಎಂದು ಬೇಬಿ ಬಂಪ್‌ ಫೋಟೋ ಹಂಚಿಕೊಂಡಾಗ ಡಿಂಪಿ ಬರೆದುಕೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?