ಚಹಾಲ್‌ನಿಂದ ದೂರವಾದ ಬಳಿಕ 1 ಕೋಟಿ ರೂ ಕಾರಿನಲ್ಲಿ ಏರ್‌ಪೋರ್ಟ್‌ಗೆ ಬಂದ ಧನಶ್ರಿ

Published : Feb 23, 2025, 05:19 PM ISTUpdated : Feb 23, 2025, 06:41 PM IST
ಚಹಾಲ್‌ನಿಂದ ದೂರವಾದ ಬಳಿಕ 1 ಕೋಟಿ ರೂ ಕಾರಿನಲ್ಲಿ ಏರ್‌ಪೋರ್ಟ್‌ಗೆ ಬಂದ ಧನಶ್ರಿ

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಸಂಬಂಧ ಮುರಿದು ಬಿದ್ದಿದೆ. ಪ್ರಕರಣ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದೆ.  ಇದರ ಬೆನ್ನಲ್ಲೇ ಧನಶ್ರೀ ವರ್ಮಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧನಶ್ರಿಗಿಂತ ಆಕೆಯ ಕಾರಿನ ಮೇಲೆ ಎಲ್ಲರ ಕಣ್ಮು ಬಿದ್ದಿದೆ.

ಮುಂಬೈ(ಫೆ.23) ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧ ಹಳಸಿ ಕೆಲ ತಿಂಗಳುಗಳೇ ಉರುಳಿದೆ. ದೂರವಾಗಲು ಬಯಸಿರುವ ಇವರ ಪ್ರಕರಣ ಕೋರ್ಟ್‌ನಲ್ಲಿದೆ. ಸದ್ಯ ಇಬ್ಬರು ಬೇರೆ ಬೇರೆಯಾಗಿ ನೆಲೆಸಿದ್ದಾರೆ. ಇದರ ನಡುವೆ ವಿಚ್ಚೇದನದ ವೇಳೆ ಚಹಲ್ ತಮ್ಮ ಆಸ್ತಿಯಲ್ಲಿ 60 ಕೋಟಿ ರೂಪಾಯಿ ಮೊತ್ತವನ್ನು ಧನಶ್ರೀಗೆ ನೀಡಬೇಕು ಅನ್ನೋ ಸುದ್ದಿಗಳು ಹರಿದಾಡಿತ್ತು. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಬಳಿಕ ಧನಶ್ರೀ ವರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ದುಬಾರಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದಿಳಿದ ಧನಶ್ರೀ ವರ್ಮಾ ಪಾಪರಾಜಿಗಳ ಕಣ್ಮಿಗೆ ಬಿದ್ದಿದೆ. ಆದರೆ ಎಲ್ಲರ ಕಣ್ಣು ಇದೀಗ ಧನಶ್ರೀ ಗಿಂತ ಆಕೆಯ ಕಾರಿನ ಮೇಲೆ ನೆಟ್ಟಿದೆ.

ಧನಶ್ರೀ ವರ್ಮಾ ಏರ್‌ಪೋರ್ಟ್‌ಗೆ ತಮ್ಮ ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್ ಸೆಡಾನ್ ಕಾರಿನ ಮೂಲಕ ಆಗಮಿಸಿದ್ದರು. ನೀಲಿ ಬಣ್ಣದ ಈ ಸೆಡಾನ್ ಲಕ್ಷುರಿ ಕಾರಿನ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಧನಶ್ರೀ ವರ್ಮಾ ವಿಡಿಯೋ ವೈರಲ್ ಆಗಿದೆ. 2021ರಲ್ಲಿ ಧನಶ್ರೀ ವರ್ಮಾ ಈ ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಟಾಪ್ ಮಾಡೆಲ್ ಎಕ್ಸ್ ಶೋ ರೂಂ ಬೆಲೆ 66.25 ಲಕ್ಷ ರೂಪಾಯಿ. ತೆರಿಗೆ, ವಿಮೆ ಸೇರಿದಂತೆ ಇತರ ಎಲ್ಲಾ ವೆಚ್ಚ ಸೇರಿದರೆ ಆನ್ ರೋಡ್ ಬೆಲೆ 1 ಕೋಟಿ ರೂಪಾಯಿ. 

ಡಿವೋರ್ಸ್‌ ಪಡೆದ ಧನಶ್ರೀ ವರ್ಮಾಗೆ ಚಹಲ್‌ರಿಂದ 60 ಕೋಟಿ ರುಪಾಯಿ ಜೀವನಾಂಶ ಸಿಕ್ಕಿದ್ದು ನಿಜನಾ?

5 ಸೀಟರ್ ಸೆಡಾನ್ ಕಾರು ಮೂರು ಎಂಜಿನ್ ಸಿಸಿ ಆಯ್ಕೆಗಳಲ್ಲಿ ಲಭ್ಯವಿದೆ. 1496ಸಿಸಿ, 1993 ಸಿಸಿ ಹಾಗೂ 1999 ಸಿಸಿ ಆಯ್ಕೆ ಲಭ್ಯವಿದೆ. ವಿಶೇಷ ಅಂದರೆ ಇದು ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿದೆ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಹಾಗೂ ಮೈಲ್ಡ್ ಹೈಬ್ರಿಡ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಹೀಗಾಗಿ ಒಂದು ಲೀಟರ್ ಇಂಧನದಲ್ಲಿ 17.5 ಕೀಲೋಮೀಟರ್ ಮೈಲೇಜ್ ನೀಡುತ್ತದೆ. ಕಾರಿನ ಪವರ್ 197 ರಿಂದ 255 bhp ಪವರ್ ಹಾಗೂ 300 ರಿಂದ 440 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಕಾರು ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಗರಿಷ್ಠ ಸುರಕ್ಷತೆ, ಏರ್‌ಬ್ಯಾಗ್, ಎಬಿಎಸ್, ಇಬಿಡಿ ಸೇರಿದಂತೆ ಹಲವು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. 

 


 
ಇನ್‌ಸ್ಟಾಗ್ರಾಂ, ಯೂಟ್ಯೂಬ್, ಸ್ಮಾಲ್ ಸ್ಕ್ರೀನ್, ಆಲ್ಬಮ್ ಸೇರಿದಂತೆ ಕೆಲ ವೇದಿಕೆಗಳಲ್ಲಿ ಡ್ಯಾನ್ಸ್ ಮೂಲಕ ವೃತ್ತಿ ಬದುಕು ನಡೆಸುತ್ತಿದ್ದ ಧನಶ್ರೀ ವರ್ಮಾ, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮದುವೆಯಾದ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದರು. ಪತಿ ಚಹಲ್ ಜೊತೆ ರೀಲ್ಸ್, ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ರೀಲ್ಸ್ ಮಾಡುವ ಮೂಲಕ ಭಾರಿ ವೈರಲ್ ಆಗಿದ್ದಾರೆ. ಈ ಮೂಲಕ ಧನಶ್ರೀ ವರ್ಮಾ ತಮ್ಮ ಜನಪ್ರಿಯತೆ ಹಾಗೂ ಆದಾಯವನ್ನೂ ಹೆಚ್ಚಿಸಿಕೊಂಡಿದ್ದರು. ಇತ್ತ ಯಜುವೇಂದ್ರ ಚಹಾಲ್ ಟೀಂ ಇಂಡಿಯಾದ ಖಾಯಂ  ಸದಸ್ಯರಾಗಿದ್ದ ಕಾರಣ ಬಿಸಿಸಿಐನಿಂದ ಕೋಟಿ ಕೋಟಿ ರೂಪಾಯಿ ಒಪ್ಪಂದ ರೂಪದಲ್ಲಿ ಪಡೆದಿದ್ದರು. ಇದರ ನಡುವೆ ಧನಶ್ರೀ ವರ್ಮಾ ದುಬಾರಿ ಕಾರು ಖರೀದಿಸಿದ್ದರು. 

 

ಕಳೆದ ಕೆಲ ತಿಂಗಳುಗಳಿಂದ ಚಹಾಲ್ ಹಾಗೂ ಧನಶ್ರೀ ವರ್ಮಾ ವಿಚ್ಚೇದನ ಸುದ್ದಿ ಹರಿಡಾಡುತ್ತಿದೆ. ಹಲವು ಬಾರಿ ಧನಶ್ರೀ ಹಾಗೂ ಚಹಾಲ್ ಸ್ಪಷ್ಟನೆ ನೀಡಿದ್ದರು. ಇಷ್ಟೇ ಅಲ್ಲ ಕಮೆಂಟ್‌ಗಳಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. 

ಧನಶ್ರೀ ವರ್ಮಾ To ಸಮಂತಾ: ವಿಚ್ಛೇದನಕ್ಕೆ ಗುರಿಯಾದ 6 ನಟಿಯರು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!