ಎಲಿಮಿನೇಷನ್‌ನಿಂದ ಪಾರಾದ ಧನರಾಜ್; ಮೋಸ ಮಾಡಿದ್ರೂ ಬಿಗ್ ಬಾಸ್ ಸುಮ್ಮನಿರುವುದು ಯಾಕೆ?

By Vaishnavi Chandrashekar  |  First Published Jan 15, 2025, 2:59 PM IST

ಕಣ್ಣು ಮುಂದೆ ಮೋಸ ನಡೆಯುತ್ತಿದ್ದರು ಬಿಗ್ ಬಾಸ್ ಸುಮ್ಮನಿರುವುದು ಯಾಕೆ? ಧನರಾಜ್ ಮಾಡಿದ್ದು ಮೋಸ ಅಲ್ವಾ?


ಬಿಗ್ ಬಾಸ್ ಸೀಸನ್ 11 ಮುಗಿಯುವ ಹಂತಕ್ಕೆ ಬಂದಿದೆ. ಟಿಕೆಟ್‌ ಟು ಫಿನಾಲೆ ಮುಗಿಸಿಕೊಂಡ ಸ್ಪರ್ಧಿಗಳು ಈಗ ಮಿಡ್ ವೀಕ್ ಎಲಿಮಿನೇಷನ್ ಹಾಗೂ ವೀಕೆಂಡ್‌ ಎಲಿಮಿನೇಷನ್‌ನಿಂದ ಪಾರು ಮಾಡಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಟಿಕೆಟ್ ಟು ಫಿನಾಲೆಯನ್ನು ಹಳ್ಳಿ ಹೈದಾ ಹನುಮಂತು ಬಾಚಿಕೊಂಡಿದ್ದಾನೆ ಈಗ ಮಿಡ್ ವೀಕ್‌ ಎಲಿಮಿನೇಷನ್‌ನಿಂದ ಸೇಫ್‌ ಆಗುವ ಟಿಕೆಟ್ ಧನರಾಜ್ ಗಿಟ್ಟಿಸಿಕೊಂಡಿದ್ದಾರೆ. ಧನರಾಜ್ ಗೆದ್ದಿರುವುದು ಎಲ್ಲರಿಗೂ ಖುಷಿನೇ ಆಗಿರಬಹುದು ಆದರೆ ಇಲ್ಲಿ ಮೋಸ ಮಾಡಿದ್ದಾರೆ ಎಂಬ ಬೇಸರ ವೀಕ್ಷಕರಿಗೆ ಇದೆ. 

ಹಂತ ಹಂತವಾಗಿ ನಡೆಯುವ ಗೇಮ್‌ಗೆ ಪಾಯಿಂಟ್ ನೀಡಲಾಗುತ್ತದೆ. ಕೊನೆ ಹಂತದಲ್ಲಿ ನಡೆದ ಟಾಸ್ಕ್‌ನಲ್ಲಿ ತ್ರಿವಿಕ್ರಮ್, ರಜತ್ ಮತ್ತು ಮೋಕ್ಷಿತಾಗೆ ಧನರಾಜ್ ಸವಾಲ್ ಹಾಕುತ್ತಾರೆ. ಆಶ್ಚರ್ಯ ಏನೆಂದರೆ ಧನರಾಜ್ ಸ್ಮಾರ್ಟ್‌ನೆಸ್‌ನಿಂದ ಕೀ ಪಡೆದು ಪಸಲ್‌ ಬಾಕ್ಸ್ ಓಪನ್ ಮಾಡಿ ಜೋಡಿಸುತ್ತಾರೆ. ಪಟಾ ಪಟಾ ಅಂತ ಜೋಡಿಸಿದ ಮೇಲೆ ಹನುಮಂತು ಚೆಕ್ ಮಾಡಿದ ಮೇಲೆ ಬೆಲ್ ಹೊಡೆಯುತ್ತಾರೆ. ಅಲ್ಲಿದೆ ಧನರಾಜ್‌ ಗೆದ್ದಿರುವ ಪಾಯಿಂಟ್ ಹಾಗೂ ಮತ್ತೊಬ್ಬರ ಪಾಯಿಂಟ್ ಕತ್ತಿಕೊಳ್ಳುವ ಅವಕಾಶ ಪಡೆಯುತ್ತಾರೆ. ಗೆದ್ದಿರುವ ಪಾಯಿಂಟ್ ಜೊತೆ ಭವ್ಯಾ ಗೌಡ ಪಾಯಿಂಟ್ ಹೊಡೆದು ಅತಿ ಹೆಚ್ಚು ಅಂಕದಿಂದ ಈ ವಾರ ನಾಮಿನೇಷನ್‌ನಿಂದ ಸೇಫ್ ಆಗುತ್ತಾರೆ. ಧನರಾಜ್‌ ಗೆದ್ದಿದ್ದು ಎಲ್ಲರಿಗೂ ಖುಷಿ ಆಗುತ್ತದೆ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ. 

Tap to resize

Latest Videos

ಹಸಿರು ಸೀರೆಯಲ್ಲಿ ಮಿಂಚಿದ ಶ್ವೇತಾ ಚಂಗಪ್ಪ; ಕತ್ತಲ್ಲಿರೋ ಚಿನ್ನದ ಮೇಲೆ ನೆಟ್ಟಿಗರ ಕಣ್ಣು

ಧನರಾಜ್‌ ಆಟ ಮುಗಿಸಿದ ಮೇಲೆ ಕುಳಿತುಕೊಳ್ಳಲು ಹೋಗುತ್ತಾರೆ ಅಲ್ಲಿ ಉಗ್ರಂ ಮಂಜು ಗೇಮ್ ಹೇಗಿತ್ತು ಎಂದು ಪ್ರಶ್ನೆ ಮಾಡುತ್ತಾರೆ. ಅಯ್ಯೋ ತುಂಬಾ ಸುಲಭವಾಗಿತ್ತು ಎನ್ನುತ್ತಾರೆ. ಬೋರ್ಡ್ ಕಾಣಿಸುತ್ತಿತ್ತಾ ಎಂದು ಕೇಳುತ್ತಾರೆ ಹೌದು ಸ್ವಲ್ಪ ಸ್ವಲ್ಪ ಮೇಲೆ ಭಾಗ ಮಾತ್ರ ಕಾಣಿಸುತ್ತಿತ್ತು ಎನ್ನುತ್ತಾರೆ. ಅಲ್ಲಿಗೆ ಧನರಾಜ್ ಸೇಫ್ ಗೇಮ್ ಆಡಿರುವುದು ಬೆಳಕಿಗೆ ಬರುತ್ತದೆ. ಧನರಾಜ್ ಈಗ ಗ್ರೇ ಏರಿಯಾ ಹುಡುಕಿಕೊಂಡಿದ್ದಾನೆ ಎಂದು ಮಂಜು ಕಾಮೆಂಟ್ ಮಾಡುತ್ತಾರೆ. ಧನರಾಜ್ ಆದ್ಮೇಲೆ ತ್ರಿವಿಕ್ರಮ್‌ನ ಕೇಳುತ್ತಾರೆ ನನಗೆ ಏನೂ ಕಾಣಿಸಿಲ್ಲ ನಾನು ಎಲ್ಲಿನೂ ನೋಡಿಲ್ಲ ಎಂದು ತ್ರಿವಿಕ್ರಮ್ ಹೇಳುತ್ತಾರೆ. ಧನರಾಜ್ ಮುಖ್ಯವಾದ ಟಾಸ್ಕ್‌ನಲ್ಲಿ ಮಾಡಿದ್ದು ಮೋಸ ಅಂದ್ಮೇಲೆ ಯಾಕೆ ಬಿಗ್ ಬಾಸ್ ಸುಮ್ಮನಿದ್ದರು? ಹುನುಮಂತು ಪರ ನಡೆಯುತ್ತಿದೆ ಎನ್ನುತ್ತಿದ್ದವರು ಈಗ ಧನರಾಜ್‌ ಪರವೂ ನಡೆಯುತ್ತಿದೆ ಎನ್ನುಲು ಶುರು ಮಾಡಿದ್ದಾರೆ. 

ಸಿಂಪಲ್ಲಾಗಿ ಸೀರೆಯಲ್ಲಿ ಮಿಂಚಿದ ಲೀಲಾ; ಕೊರಳಲ್ಲಿ ಸರವಿಲ್ಲ ಎಂದು ಫ್ಯಾನ್ಸ್ ಬೇಸರ

 

click me!