ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ ಇದೀಗ ಕನ್ನಡಿಗರ ಮನಸ್ಸಿನಲ್ಲಿ ಲೀಲಾ ಅಗಿ ಉಳಿದುಕೊಂಡಿದ್ದಾರೆ.
Image credits: our own
ಸಿಂಪಲ್ ಲೀಲಾ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಜೋಡಿಯಾಗಿ ಕಾಂತಾರ ಚಿತ್ರದಲ್ಲಿ ಲೀಲಾ ಆಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಅದಾದ ಮೇಲಿಂದ ಎಲ್ಲರೂ ಲೀಲಾ ಎಂದೇ ಕರೆಯುತ್ತಿದ್ದಾರೆ.
Image credits: our own
ಸಂಕ್ರಾಂತಿ ಸಂಭ್ರಮ
ಈ ವರ್ಷ ಸಪ್ತಮಿ ಗೌಡ ಮಕರ ಸಂಕ್ರಾಂತಿ ಹಬ್ಬವನ್ನು ಕುಟುಂಬಸ್ಥರ ಜೊತೆ ಸರಳವಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಗಳಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
Image credits: our own
ಸೀರೆ ಲುಕ್ ವೈರಲ್
ಸಪ್ತಮಿ ಗೌಡ ಸೀರೆಯಲ್ಲಿ ಕಾಣಿಸಿಕೊಂಡರೆ ಪಡ್ಡೆ ಹುಡುಗರು ಫಿದಾ ಆಗುತ್ತಾರೆ. ನೀಲಿ ಬಣ್ಣದ ಸಿಂಪಲ್ ಫ್ಯಾನ್ಸಿ ಸೀರೆಗೆ ಪಿಂಕ್ ಬಣ್ಣದ ಬ್ಲೌಸ್ ಮ್ಯಾಚ್ ಮಾಡಿಕೊಂಡಿದ್ದಾರೆ.
Image credits: our own
ಡಿಸೈನರ್ ಕಾಮೆಂಟ್ ವೈರಲ್
'ತುಂಬಾ ವರ್ಷಗಳ ಹಿಂದಿನ ಬ್ಲೌಸ್‌ನ ಈಗಲೂ ಧರಿಸಿರುವೆ. ಚೆನ್ನಾಗಿದೆ' ಎಂದು ಬ್ಲೌಸ್ ಡಿಸೈನ್ ಮಾಡಿಕೊಟ್ಟ ತೇಜಸ್ವಿನಿ ಕಾಮೆಂಟ್ ಸಖತ್ ವೈರಲ್ ಆಗುತ್ತಿದೆ.
Image credits: our own
ಸಾಲು ಸಾಲು ಆಫರ್‌ಗಳು
ಪಾಪ್ ಕಾರ್ನ್ ಮಂಕಿ ಟೈಗರ್, ಕಾಂತಾರ, ಹಿಂದಿ ಸಿನಿಮಾ ವ್ಯಾಕ್ಸಿನ್ ಮತ್ತು ಯುವ ಚಿತ್ರದಲ್ಲಿ ನಟಿಸಿದ ಮೇಲೆ ಸಪ್ತಮಿ ಹೊಸ ಸಿನಿಮಾ ಅನೌನ್ಸ್ ಮಾಡಬೇಕಿದೆ. ಈಗಾಗಲೆ ಸಾಲು ಸಾಲು ಆಫರ್‌ಗಳು ಬರುತ್ತಿದೆ ಎನ್ನಲಾಗಿದೆ.