ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿ ಪ್ರಾಣಿಗಳಿಗೆ ಕ್ರೂರ ಹಿಂಸೆ ನೀಡುವವರ ವಿರುದ್ಧ ಕಿಡಿ ಕಾರಿದ್ದು, ಅವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಪ್ರಾಣಿ ಪ್ರಿಯೆಯಾಗಿರುವ ಕನ್ನಡ ಹಿರೆತೆರೆ ಹಾಗೂ ಕಿರುತೆರೆ ನಟಿ ಸುಧಾರಾಣಿ (Actress Sudharani) ಪ್ರಾಣಿಪ್ರಿಯೆಯಾಗಿದ್ದು, ಇದೀಗ ಅವರು ಪ್ರಾಣಿಗಳಿಗೆ, ಪಕ್ಷಿಗಳಿಗೆ ಹಿಂಸೆ ನೀಡುವ ಅದರಲ್ಲು ಹಸುಗಳಿಗೆ ಹಿಂಸೆ ನೀಡಿರುವ ಕೆಲವೊಂದಿಷ್ಟು ವಿಡೀಯೋಗಳು ವೈರಲ್ ಆಗಿರುವ ಬಗ್ಗೆ ನೊಂದುಕೊಂಡಿದ್ದು, ಪ್ರಾಣಿ ಹಿಂಸೆ ಮಾಡುತ್ತಿರುವ ಕ್ರೂರಿಗಳ ವಿರುದ್ಧ ಕಠಿಣ ಶಿಕ್ಷೆಗೆ (punishment) ನಟಿ ಆಗ್ರಹಿಸಿದ್ದಾರೆ. ಈ ಕುರಿತು ಸುಧಾರಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ದೊಡ್ಡದಾದ ನೋಟ್ ಬರೆದಿದ್ದಾರೆ.
ನೇರಪ್ರಸಾರದಲ್ಲಿ ಬಂದ ಸುಧಾರಾಣಿ ವೀಕ್ಷಕರಿಗೆ ಕೊಟ್ಟಿದ್ದಾರೆ ಬಿಗ್ ಆಫರ್! ಏನದು ನೋಡಿ...
ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಮಗಳ ಹಸುವಿನ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿರುವ ಸುಧಾರಾಣಿ ‘ಒಬ್ಬ ಪ್ರಾಣಿ ಪ್ರೇಮಿಯಾಗಿ ಈ ಕೃತ್ಯಕ್ಕೆ ಸಂಬಂಧಿಸಿದ ಕೆಲವು ವಿಡೀಯೋಗಳನ್ನ ನೋಡಿ, ಇದರ ಬಗ್ಗೆ ಓದಿ ನನ್ನಿಂದ ಸುಮ್ಮನೆ ಇರೋದಕ್ಕೆ ಸಾಧ್ಯವಾಗಲಿಲ್ಲ, ಸುಮ್ಮನೆ ಇರೋದು ಕೂಡ ತಪ್ಪು. ನಾವು ತಾಯಿ ಸ್ಥಾನ ಕೊಟ್ಟಿರೋ ಕಾಮಧೇನುವಿಗೆ ಹೀಗೆ ಅಮಾನವೀಯವಾಗಿ ಹಿಂಸೆ ಕೊಟ್ಟಿರೋದನ್ನ ನೋಡಿದ್ರೆ ಕರುಳು ಕಿವುಚಿ ಬರುವಷ್ಟು ಸಂಕಟ ಆಗತ್ತೆ. ಈಗಲಾದರು ಶಾಸಕಾಂಗ ಎಚ್ಚೆತ್ತುಕೊಳ್ಳಬೇಕು. ಕೆಟ್ಟದ್ದನ್ನೇ ಅರಿಯದ ನಾಯಿ, ಕುರಿ, ಹಸು, ಕುದುರೆ, ಕತ್ತೆ ಇಂಥ ಯಾವುದೇ ಮೂಕಪ್ರಾಣಿಗಳಿಗೆ, ಪಕ್ಷಿಗಳಿಗೆ ಹಿಂಸೆ ಕೊಡೋ ಕ್ರೂರಿಗಳಿಂದ 50 ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟುಬಿಡೋದಲ್ಲ. ಇದು Bailable Offence ಕೂಡ ಅಲ್ಲ ಎಂದಿದ್ದಾರೆ.
ಸುಧಾರಾಣಿಯ ಕ್ರಷ್ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!
ಅಷ್ಟೇ ಅಲ್ಲ ಎಷ್ಟೋ ಜನ ಪ್ರಾಣಿ ಪಕ್ಷಿ ಪ್ರೇಮಿಗಳು ಮೂಕಜೀವಿಗಳಿಗೆ ಹಿಂಸೆ ಕೊಡೋದು ಜಾಮೀನು ರಹಿತ ಅಪರಾಧ ಅನ್ನೋ ಕಾನೂನನ್ನ ತರೋದಕ್ಕೆ ಹೋರಾಟ ಮಾಡ್ತಾ ಇದ್ದಾರೆ. ಇಂಥ ಕ್ರೂರಿಗಳನ್ನ ಜೈಲಿನಲ್ಲಿಟ್ಟು ಸಾಕಬೇಕಾ? ಒಳಗಡೆ ಚೆನ್ನಾಗಿ ಊಟ ತಿಂಡಿ ಮಾಡ್ಕೊಂಡು ಆರಾಮಾಗಿ ಇರ್ತಾರೆ. ಇವರಿಗೆ 50 ರೂಪಾಯಿ, 50 ಸಾವಿರ ಅಂತ ದಂಡ ಹಾಕಿದ್ರೆ ಹೇಗೋ ಏನೋ ಮಾಡಿ, ಸಾಲ ಮಾಡಿ ಆದರೂ ದಂಡ ಕಟ್ಟಿ ಹೊರಗಡೆ ಬರ್ತಾರೆ. ಈ ಎರಡು ಶಿಕ್ಷೆಗಳಿಂದ ಯಾವುದೇ ಬದಲಾವಣೆ ತರೋಕೆ ಸಾಧ್ಯವಿಲ್ಲ, ಇಂಥವರಿಗೆ ಘೋರವಾದ ಶಿಕ್ಷೆ ಕೊಡಬೇಕಾದ ಅವಶ್ಯಕತೆ ಇದೆ. ಬೇರೆ ದೇಶಗಳಲ್ಲಿ ಇರೋ ಹಾಗೆ ನಮ್ಮ ದೇಶದಲ್ಲೂ ಪ್ರಾಣಿ ಪಕ್ಷಿಗಳ ಹಿಂಸೆ ಮಾಡೋರಿಗೆ ಕಠಿಣವಾದ ಶಿಕ್ಷೆ ಕೊಡಬೇಕು, ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಾಣಿಹಿಂಸೆ ಮಾಡೋರ ವಿರುದ್ಧ Criminal Record File ಆಗಬೇಕು ಎಂದು ಹೇಳಿಕೊಂಡಿದ್ದಾರೆ.
ವಿಷ್ಣುವರ್ಧನ್ ಜೊತೆಗಿನ ಆ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ಸುಧಾರಾಣಿ? ಅವರೇ ಹೇಳಿದ ಕಾರಣ ಇದು!
ಜೊತೆಗೆ ಅವರು ಇನ್ನೇನೇ ಕೆಲಸ ಮಾಡೋಕೆ ಪ್ರಯತ್ನ ಪಟ್ಟರು ಇಂಥ ಕೆಲಸ ಮಾಡಿರೋದಕ್ಕೆ Criminal Background ಇರಬೇಕು. ಈ ಕ್ರಮ ಕೈಗೊಂಡಾಗ ಮಾತ್ರ ಈ ರೀತಿ ಮಾಡಬೇಕು ಅಂದುಕೊಳ್ಳೋರಿಗೆ ಯೋಚನೆ ಮಾಡೋಕೆ ಕೂಡ ಭಯ ಶುರುವಾಗತ್ತೆ. ಪ್ರಾಣಿಗಳಿಗೆ ಉಪಯುಕ್ತವಾಗೋ ಕಾನೂನನ್ನ ಈಗಲಾದರೂ ಜಾರಿಗೆ ತಂದರೆ ಮಾತ್ರ ಮುಂದೆ ಇಂಥ ಕೃತ್ಯಗಳು ನಡೆಯದೇ ಇರೋ ಹಾಗೆ ತಡೆಗಟ್ಟಬಹುದು ಎಂದು ಕೇಳಿಕೊಂಡಿದ್ದಾರೆ ನಟಿ ಸುಧಾರಾಣಿ.