ಹಿಂದಿಯ ದೇವೋಂಕ ದೇವ್ ಮಹದೇವ್ ಸೀರಿಯಲ್ ನಟಿ ಫೋ ಟೋ ಶೂಟ್ ಮಧ್ಯೆಯೇ ಹೈಪೋಥೆರ್ಮಿಯಾಗೆ ಒಳಗಾಗಿ ಅಸ್ವಸ್ಥರಾಗುವುದನ್ನು ಕಾಣಬಹುದು. ಹಿಮಾಲಯದ ಸ್ಪಿಟ್ಟಿ ವ್ಯಾಲಿಯಲ್ಲಿ ಮದ್ವೆಯಾಗುವ ಮೂಲಕ ಈ ದಂಪತಿ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಮಾಡಿದ್ದರು.
ಹಿಂದಿಯ ದೇವೋಂಕ ದೇವ್ ಮಹದೇವ್ ಸೀರಿಯಲ್ ಯಾರಿಗೆ ಗೊತ್ತಿಲ್ಲ ಹೇಳಿ. ಶಿವನ ಕತೆಯನ್ನು ಹೇಳುವ ಈ ಪೌರಾಣಿಕ ಧಾರವಾಹಿಯ ಬಗ್ಗೆ ತಿಳಿಯದವರಿಲ್ಲ, ಈ ಸೀರಿಯಲ್‌ನಿಂದ ಮುನ್ನೆಲೆಗೆ ಬಂದು ಪ್ರಸಿದ್ಧಿ ಪಡೆದ ನಟಿ ಆರ್ಯಾ ವೋರಾ. ತಮಗೆ ಸಿಕ್ಕ ಈ ಜನಪ್ರಿಯತೆಯನ್ನೇ ಬಳಸಿಕೊಂಡು ತಮ್ಮಿಷ್ಟದ ಸೋಲೋ ಟ್ರಾವೆಲಿಂಗ್ ಇನ್‌ಫ್ಲುಯೆನ್ಸರ್ ಆಗಿರುವ ಈ ನಟಿ ಕಳೆದ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೂ ಕಾಲಿರಿಸಿದ್ದರು. ಆದರೆ ಮದ್ವೆಗೆ ಮೊದಲು ತಾವು ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಫೋಟೋ ಶೂಟ್ ನಡೆಸಿ ಹುಷಾರು ತಪ್ಪಿದ ವಿಚಾರವನ್ನು ಈಗ ಹೇಳಿಕೊಂಡಿದ್ದರು, ನೆಟ್ಟಿಗರಿಂದ ಸರಿಯಾಗಿ ಉಗಿಸಿಕೊಳ್ಳುತ್ತಿದ್ದಾರೆ.
ಫೆಬ್ರವರಿ 26 ರಂದು ನಟಿ ರಂಜಿತ್ ಜೊತೆ ನಟಿ ಆರ್ಯಾ ವೋರಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದ್ವೆಗೂ ಮೊದಲ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನ್ನು ಅವರು ಈಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಫೋಟೋ ಶೂಟ್ ಮಧ್ಯೆಯೇ ಅವರು ಹೈಪೋಥೆರ್ಮಿಯಾಗೆ ಒಳಗಾಗಿ ಅಸ್ವಸ್ಥರಾಗುವುದನ್ನು ಕಾಣಬಹುದು. ಹಿಮಾಲಯದ ಸ್ಪಿಟ್ಟಿ ವ್ಯಾಲಿಯಲ್ಲಿ ಮದ್ವೆಯಾಗುವ ಮೂಲಕ ಈ ದಂಪತಿ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಮಾಡಿದ್ದರು.
ಹಿಮಾಲಯದ ತಪ್ಪಲಿನಲ್ಲೇ ಅವರು ಫೋಟೋ ಶೂಟ್ ಕೂಡ ಮಾಡಿಸಿದ್ದು ಅತೀವವಾದ ಚಳಿ ತಡೆಯಲಾಗದೇ ಅವರು ಪ್ರಜ್ಞಾಹೀನರಾಗಿ ಕುಸಿದು ಬೀಳುವುದನ್ನು ಕಾಣಬಹುದು. ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ನಟಿಯನ್ನು ಸಖತ್ ಟ್ರೋಲ್ ಮಾಡಿದ್ದಾರೆ. ನಿಮಗೆ ನಿಮ್ಮ ಜೀವಕ್ಕಿಂತ ಫೋಟೋ ಶೋಟೇ ಹೆಚ್ಚಾಯ್ತಾ ಎಂದು ಕೆಲವರು ನಟಿಯನ್ನು ಪ್ರಶ್ನೆ ಮಾಡಿದ್ದಾರೆ ಮತ್ತೆ ಕೆಲವರು ಇದೇ ಕಾರಣಕ್ಕೆ ಶಿಕ್ಷಣದ ಜೊತೆಗೆ ಕಾಮನ್‌ಸೆನ್ಸ್ ಕೂಡ ತುಂಬಾ ಅಗತ್ಯ ಎಂದಿದ್ದಾರೆ. ಕೆಲವರು ಫೋಟೋಗಾಗಿ ತಮ್ಮ ಪ್ರಾಣವನ್ನು ಕೊಡಲು ಕೂಡ ಸಿದ್ಧರಿದ್ದಾರೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಪ್ರೀ ವೆಡ್ಡಿಂಗ್ ಗಾಗಿ ಇಷ್ಟೆಲ್ಲಾ ಮಾಡುವ ಅಗತ್ಯವಿತ್ತೆ ಎಂದು ಮತ್ತೆ ಕೆಲವರು ಪ್ರಶ್ನೆ ಮಾಡಿದ್ದಾರೆ.
ಆದಾಗಿಯೂ ಕೆಲವರು ಅರ್ಯಾರ ಬೋಲ್ಡ್ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನ ಯಾವಾಗ್ಲೂ ಮಾತಾಡ್ತಿರ್ತಾರೆ ಆದರೆ ನಿಮಗೆ ಹೀಗೆ ಮಾಡಬೇಕು ಎಂಬ ಕನಸ್ಸಿದ್ದರೆ ಯಾವತ್ತೂ ಹಿಂಜರಿಬಾರ್ದು. ನಿಮಗೆ ಇದು ಅಗತ್ಯ ಎಂದೆನಿಸಿದರೆ ಅದರ ಸಂಪೂರ್ಣ ರಿಸ್ಕ್ ನಿಮ್ಮದೇ ಆಯ್ಕೆ ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಅರ್ಯಾ ವೋರಾ ಅವರ ಸಿನಿಮಾ ಕೆರಿಯರ್ ಬಗ್ಗೆ ಹೇಳುವುದಾದರೆ ಅವರು 2013ರಲ್ಲಿ ಮೈ ಫ್ರೆಂಡ್ ಗಣೇಶ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದಾದ ನಂತರ ಅವರು ದೇವೋಂಕೇ ದೇವ್ ಮಹದೇವ್ ಸಿರೀಯಲ್‌ನಲ್ಲಿ ದೇವ ಗಣೇಶನ ಪತ್ನಿಯಾದ ಸಿದ್ದಿಯ ಪಾತ್ರವನ್ನು ಮಾಡಿದ್ದು, ಈ ಮೂಲಕ ಬಹಳ ಜನಪ್ರಿಯತೆ ಗಳಿಸಿದ್ದರು. ಸೀರಿಯಲ್ ನಟಿ, ಜೊತೆ ಸೋಲೋ ಟ್ರಾವೆಲರ್ ಕೂಡ ಆಗಿರುವ ಆರ್ಯಾ ವೋರಾ ಅವರು ಭರತನಾಟ್ಯ ನೃತ್ಯ ಕಲಾವಿದೆಯೂ ಆಗಿದ್ದಾರೆ.