
ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗಿದೆ. ಪೋಸ್ಟರ್, ಟೀಸರ್ ಹಾಗೂ ಹಾಡುಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ರಾಬರ್ಟ್ ಸಿನಿಮಾ ಇದೀಗ ಬಿಡುಗಡೆಯಾಗಿದೆ. ಒಂದು ವಾರದಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಸೋಲ್ಡ್ ಔಟ್ ಆಗಿದೆ. ಬರೋಬ್ಬರಿ 1200 ಸ್ಕ್ರೀನ್‌ಗಳಲ್ಲಿ ರಾಬರ್ಟ್ ಪ್ರದರ್ಶನ ಶುರುವಾಗಿದೆ. ಬುಕ್ಕಿಂಗ್ ಸ್ಟಾರ್ಟ್ ಆಗುತ್ತಿದ್ದಂತೆ ಮೊದಲು ಟಿಕೆಟ್ ಖರೀದಿ ಮಾಡಿದ್ದು ಯಾರು ಗೊತ್ತಾ?
ಖ್ಯಾತ ನಿರ್ದೇಶಕನ ಪುತ್ರ ಇವರು...
ರಾಜ್ಯದಲ್ಲಿ ಒಟ್ಟು 700 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ 'ರಾಬರ್ಟ್' ಸಿನಿಮಾ ಪ್ರದರ್ಶನ ಆರಂಭವಾಗಿದೆ. ಮೊದಲ ಟಿಕೆಟ್ಟ್ ಅನ್ನು ಖ್ಯಾತ ನಿರ್ದೇಶಕ ನಂದ ಕಿಶೋರ್ ಅವರ ಪುತ್ರ ಶೌರ್ಯ ಖರೀದಿಸಿದ್ದಾರೆ. ತಮ್ಮ ಮಗ ಲಕ್ಕಿ ಅಂತ ತಮ್ಮ ಬದಲು ಆತನಿಂದ ಟಿಕೆಟ್ ಪಡೆದಿದ್ದಾರೆ ನಂದ ಕಿಶೋರ್. ಇಂದು ಥಿಯೇಟರ್ ಸ್ಕ್ರೀನ್‌ಗೆ ಪೂಜೆ ಮಾಡಲಾಗಿತ್ತು. ಪೂಜೆಯಲ್ಲಿ ತುರಣ್ ಸುಧೀರ್, ನಂದ ಕಿಶೋರ್ ಕುಟುಂಬ ಹಾಗೂ ನಾಯಕಿ ಆಶಾ ಭಟ್ ಭಾಗಿಯಾಗಿದ್ದರು.
ದರ್ಶನ್ ಸರ್‌ನ ಈ ಒಂದು ಗುಣ ನನಗೂ ಬೇಕು: ಆಶಾ ಭಟ್
"
ಕಳೆದ ವಾರ ತರುಣ್ ಸುಧೀರ್ ಅವರ ಅಣ್ಣ ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಬಿಡುಗಡೆಯಾಗಿತ್ತು. ಅಣ್ಣ-ತಮ್ಮ ಇಬ್ಬರೂ ಬಿಗ್ ಬಜೆಟ್ ಚಿತ್ರಕ್ಕೆ ಕೈ ಹಾಕಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಲಿದ್ದಾರೆ ಎಂಬುದು ಸಿನಿ ಪ್ರೇಮಿಗಳ ನಂಬಿಕೆ. ನಟಿ ಆಶಾ ಭಟ್ ತಮ್ಮ ಮೊದಲ ಚಿತ್ರವನ್ನು ಅಭಿಮಾನಿಗಳ ಜತೆ ವೀಕ್ಷಿಸಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಶ್ರೀನಿವಾಸ ಚಿತ್ರ ಮಂದಿರದಲ್ಲಿ ಇಡೀ ಚಿತ್ರತಂಡವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.