ದರ್ಶನ್ ಅಭಿಮಾನಿಗಳ ಕೊಟ್ಟಕೊನೆಯ ಗುರಿ ಡಿ ಬಾಸ್ ಹೊರಗೆ ಬರ್ಬೇಕು ಅನ್ನೋದು. ಅದಕ್ಕೆ ಅವರು ಏನ್ ಬೇಕಾದ್ರೂ ಮಾಡೋಕೆ ಸಿದ್ಧವಿದ್ದಾರೆ. ಈಗ ಅಭಿಮಾನಿಯೊಬ್ಬನ ವಿಡಿಯೋ ವೈರಲ್ ಆಗಿದ್ದು, ಅದ್ರಲ್ಲಿ ಆತ ಹೇಳಿದ್ದೇನು ಗೊತ್ತಾ?
ಬಳ್ಳಾರಿ ಜೈಲಿ (Bellary Jail ) ನಲ್ಲಿ ಬಂಧಿಯಾಗಿರುವ ಡಿ ಬಾಸ್ ದರ್ಶನ್ (D Bas Darshan) ಅಭಿಮಾನಿಗಳ ಅಭಿಮಾನ ಎಂತದ್ದು ಅಂತ ಮತ್ತೆ ಹೇಳ್ಬೇಕಾಗಿಲ್ಲ. ದರ್ಶನ್ ಜೈಲಿನಿಂದ ಹೊರಗೆ ಬಂದ್ರೆ ತಿಂಗಳುಗಟ್ಟಲೆ ಹಬ್ಬ ಮಾಡಲು ಸಿದ್ಧವಾಗಿರುವ ಫ್ಯಾನ್ಸ್ ಈಗ ಕಿಚ್ಚ ಸುದೀಪ್ (Kiccha Sudeep) ಬಗ್ಗೆ ಮಾತನಾಡ್ತಿದ್ದಾರೆ. ಸೋಶಿಯಲ್ ಮೀಡಿಯಾ (Social media) ದಲ್ಲಿ ದರ್ಶನ್ ಅಭಿಮಾನಿಯೊಬ್ಬನ ವಿಡಿಯೋ ವೈರಲ್ ಆಗಿದೆ. ದರ್ಶನ್ ಬಿಡಿಸೋಕೆ ನಟ ಸುದೀಪ್ ಹೋಗ್ಬೇಕಂತೆ. ಬಾಯಿ ಮುಂದೆ ಮೈಕ್ ಬರ್ತಿದ್ದಂತೆ ಏನೇನೋ ಮಾತನಾಡಿದ ದರ್ಶನ್ ಅಭಿಮಾನಿ, ನಮ್ ಬಾಸನ್ನು ಸುದೀಪ್ ಬಿಡಿಸ್ಬೇಕು ಅಂತಿದ್ದಾರೆ. ನಮ್ ಹತ್ರ ದುಡ್ಡಿಲ್ಲ, ಸುದೀಪ್, ದರ್ಶನ್ ಅವರನ್ನು ಬಿಡಿಸ್ಕೊಂಡು ಬರ್ ಬೇಕು, ಸುದೀಪ್ ಅಲ್ದೆ ಮತ್ತ್ಯಾರ್ ಬಿಡಿಸ್ತಾರೆ ಹೇಳಿ ಮೇಡಂ ಎನ್ನುವ ಅಭಿಮಾನಿ, ಸುದೀಪ್ ನಂಬರ್ ಇದೆ ಮೇಡಂ, ಆದ್ರೆ ಅವರು ಕಾಲ್ ಎತ್ತುತ್ತಿಲ್ಲ ಅಂತ ಗೋಳಾಡ್ತಿದ್ದಾನೆ.
ಈ ವಿಡಿಯೋವನ್ನು ನಮ್ಮ ಸ್ಯಾಂಡಲ್ವುಡ್ ಇನ್ಸ್ಟಾ ಖಾತೆಯಲ್ಲಿ (Sandalwood Insta account) ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ. ಅಲ್ಲ ಗುರು, ಎಷ್ಟ್ ಪೆಗ್ ಏರ್ಸಿದಿಯಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಮೋಸ್ಟ್ಲಿ ನೀರ್ ಬರೆಸದೆ ಡೈರೆಕ್ಟ್ ಕುಡಿದಿರ್ಬೇಕು ಎನ್ನುತ್ತಾರೆ ಜನರು. ಲೋಕಲ್ ಎಣ್ಣೆ ಕುಡಿದ್ರೆ ಇದೇ ಕಥೆ ಅಂತ ಟ್ರೋಲರ್ ಕಾಲೆಳೆದಿದ್ದಾರೆ. ದರ್ಶನ್ ಫ್ಯಾನ್ಸ್ ಅಲ್ಲ ಇಂಥವರೆ ಅಂತ ಕಮೆಂಟ್ ಮಾಡಿದ ಜನರೂ ಇಲ್ಲಿದ್ದಾರೆ. ತಮಾಷೆ ಅಂದ್ರೆ ಸುದೀಪ್ ನಂಬರ್ ಈತನ ಬಳಿ ಇರೋದು. ಫೋನ್ ಮಾಡಿದ್ರೂ ಸುದೀಪ್, ಫೋನ್ ರಿಸೀವ್ ಮಾಡ್ತಿಲ್ಲ ಎನ್ನುವ ಆತನ ಮಾತಿಗೆ ನೆಟ್ಟಿಗರಿಗೆ ಕಿಕ್ ಏರಿದೆ.
ಸೀತಾಗೆ ರಾಮ್ ಏನ್ ಅಂತ ಹೆಸರಿಡ್ತಾನೆ? ಮುದ್ದು ಜೋಡಿ ರೋಮ್ಯಾನ್ಸ್ ನೋಡಿ ನಾಚಿನೀರಾದ ವೀಕ್ಷಕರು
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy murder case) ದಲ್ಲಿ ಜೈಲು ಸೇರಿರುವ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅದೇ ದಿನ ನಟ ಸುದೀಪ್ ಪ್ರೆಸ್ ಮೀಟ್ (Sudeep press meet) ಕರೆದಿದ್ರು. ತಮ್ಮ ಬರ್ತ್ ಡೇ, ಸಿನಿಮಾ ಬಗ್ಗೆ ಮಾತನಾಡಿದ್ದ ಸುದೀಪ್, ದರ್ಶನ್ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದರು. ಅವರ ಜೊತೆ ಮಾತ್ ಬಿಟ್ಟು ಎರಡು ವರ್ಷವಾಗಿದೆ. ಮಾತೇ ಆಡೋದಿಲ್ಲ ಅಂದ್ಮೇಲೆ ಹೋಗಿ ಪ್ರಯೋಜನವಿಲ್ಲ ಎಂದಿದ್ದ ಸುದೀಪ್, ಸಂಬಂಧ ಹಳಸಲು ಕಾರಣ ಇಬ್ಬರೂ ಎಂದಿದ್ದರು. ಸೂರ್ಯ ಹಾಗೂ ಚಂದ್ರ ಒಟ್ಟಿಗೆ ಇರಲು ಸಾಧ್ಯವಿಲ್ಲ. ಇಬ್ಬರು ಒಟ್ಟಿಗೆ ಬಂದ್ರೆ ಕಷ್ಟವಾಗ್ಬಹುದು. ನಮ್ಮಿಬ್ಬರದ್ದು ಡಿಫರೆಂಟ್ ಸ್ವಭಾವ, ಡಿಫರೆಂಟ್ ಟೇಸ್ಟ್. ನನಗೆ ನಾಟಕವಾಡೋಕೆ ಬರೋದಿಲ್ಲ. ಅವರಿಗೆ ಅವಮಾನ ಆದಾಗ ನಾನು ಪತ್ರ ಬರೆದಿದ್ದೆ. ನನ್ನ ಮನಸ್ಸಿಗೆ ಬೆಸ್ಟ್ ಅನ್ನಿಸಿದ್ದನ್ನು ನಾನು ಮಾಡಿದ್ದೆ ಎಂದು ಸುದೀಪ್ ಹೇಳಿದ್ದರು. ಹಾಗೆಯೇ ಕೊಲೆ ಪ್ರಕರಣದಲ್ಲಿ ದರ್ಶನ್ ತಪ್ಪುಮಾಡಿದ್ದಾರಾ ಇಲ್ವಾ ಅನ್ನೋದನ್ನು ಕೋರ್ಟ್ ತೀರ್ಮಾನಿಸುತ್ತೆ. ಅದ್ರ ಬಗ್ಗೆ ನಮ್ಮ ಬಳಿ ಅಭಿಪ್ರಾಯ ಕೇಳೋದು ತಪ್ಪು ಎಂದು ಸುದೀಪ್ ಹೇಳಿದ್ದರು.
ಕಮಿಟ್ಮೆಂಟ್ ಇದ್ದ ಕಾರಣ ಮದ್ವೆಯಾಗಿ 6 ವರ್ಷ ಆದ್ಮೇಲೆ ಈಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಿದೆ: ನೇಹಾ ಗೌಡ
ಇಂದು ದರ್ಶನ್ ಮತ್ತು ಪವಿತ್ರಾ ಗೌಡ (Pavitra Gowda) ಸೇರಿದಂತೆ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗ್ತಿದೆ. ದರ್ಶನ್ ಬಳ್ಳಾರಿ ಜೈಲಿನಲ್ಲಿ ಈಗಾಗಲೇ ಸರ್ಜಿಕಲ್ ಚೇರ್ (Surgical Chair) ಕೇಳಿ ಪಡೆದಿದ್ದಾರೆ. ಎಸಿ ಮತ್ತು ಟಿವಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಇದೆ. ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೈಲುವಾಸ ನಡೆಸಿ ಈಗ ಬಳ್ಳಾರಿಗೆ ಶಿಫ್ಟ್ ಆಗಿರುವ ದರ್ಶನ್ಗೆ ಚಾರ್ಜ್ ಶೀಟ್ ಭಯ ಶುರುವಾಗಿದೆ. ಇತ್ತ ಅಭಿಮಾನಿಗಳ ಅತಿರೇಕ ನೋಡಿದ ಆರ್ ಟಿಒ, ವಾಹನದ ಮೇಲೆ ಅನವಶ್ಯಕ ಸ್ಟಿಕ್ಕರ್ ಅಂಟಿಸದಂತೆ ಎಚ್ಚರಿಗೆ ನೀಡಿದೆ.