ಶೇ.5 ವೋಟ್, ದಿವ್ಯಾ ನನ್ನ ಲಕ್ಕಿ ಚಾರ್ಮ್; ಎಲ್ಲಿ ನೋಡಿದರೂ ಅರವಿಂದ್ ವಿಡಿಯೋ!

Suvarna News   | Asianet News
Published : May 21, 2021, 11:07 AM IST
ಶೇ.5 ವೋಟ್, ದಿವ್ಯಾ ನನ್ನ ಲಕ್ಕಿ ಚಾರ್ಮ್; ಎಲ್ಲಿ ನೋಡಿದರೂ ಅರವಿಂದ್ ವಿಡಿಯೋ!

ಸಾರಾಂಶ

ಬಿಗ್ ಬಾಸ್ ಸ್ಪರ್ಧಿ ಅರವಿಂದ್ ಮನೆಯಿಂದ ಹೊರ ಬಂದ ನಂತರ ಹಲವು ವಾಹಿನಿಗಳಲ್ಲಿ ಸಂದರ್ಶನ ನೀಡಿದ್ದಾರೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಅಗುತ್ತಿವೆ. ಸಿಕ್ಕರೆ ಇಂಥದ್ದೇ ಹುಡುಗ ಸಿಗಬೇಕು ಎನ್ನುತ್ತಿದ್ದಾರೆ  ಹುಡುಗಿಯರು.

Daka ಬೈಕ್‌ ರೇಸ್‌ ಸ್ಪರ್ಧೆಯಲ್ಲಿ ವಿಶ್ವಾದ್ಯಂತ ಭಾರತವನ್ನು ಪ್ರತಿನಿಧಿಸಿರುವ ಅರವಿಂದ್ ಕಲರ್ಸ್‌ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾ, ಕಿರುತೆರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಸ್ಪರ್ಧಿಗಳ ನಡುವೆ ಈ ರಿಯೋಲಿಟ್ ಶೋನಲ್ಲಿ ಅರವಿಂದ್ ತಮ್ಮ ಪ್ರತಿಭೆಯೊಂದಿಗೆ, ರೇಸಿಂಗ್ ಮಹತ್ವವನ್ನೂ ಜನರಿಗೆ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಜನಪ್ರಿಯ ಸ್ಪರ್ಧಿಗಳ ನಡುವೆ ಟಫ್‌ ಫೈಟ್‌ ಕೊಟ್ಟು ಫಿನಾಲೆ ಹಂತ ತಲುಪುವ ಸಾಮರ್ಥ್ಯ ಹೊಂದಿದ್ದ ಸ್ಪರ್ಧಿ ಅರವಿಂದ್. 

ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ 

ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್‌ ನಂತರ ನಟಿ ದಿವ್ಯಾ ಉರುಡುಗಾ ಜೊತೆ ಕೊಂಚ ಕ್ಲೋಸ್ ಆದರು. ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ ಕಾರಣ ಬಿಗ್ ಬಾಸ್‌ ಚಿತ್ರೀಕರಣಕ್ಕೆ ಬ್ರೇಕ್ ಹಾಕಬೇಕಾಯಿತು. 72 ದಿನಗಳಿಗೇ ಸ್ಪರ್ಧಿಗಳು ಮನೆಯಿಂದ ಹೊರ ಬಂದರು. ಶೋ ಅಂತ್ಯ ಕಾಣುವ ಎರಡು ದಿನ ಮುನ್ನ ಅನಾರೋಗ್ಯದ ಕಾರಣ ದಿವ್ಯಾ ಉರುಡುಗ ಮನೆಯಿಂದ ಹೊರ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿವ್ಯಾ ಆರೋಗ್ಯದ ಬಗ್ಗೆ ಕೇಳಿ, ಆಕೆ ಬಗ್ಗೆ ಚಿಂತಿಸುತ್ತ ಅರವಿಂದ್ ಕಣ್ಣೀರಿಡುತ್ತಿದ್ದ ವಿಡಿಯೋ ಮನಕಲಕುವಂತೆ ಇತ್ತು. 

ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದಾರೆ. ಪ್ರತಿ ಸಲ ಅರವಿಂದ್ ಲೈವ್ ಬಂದಾಗಲೂ ದಿವ್ಯಾ ಬಗ್ಗೆ ಪ್ರಶ್ನೆ ಕೇಳಿದ್ದರು. ಅರವಿಂದ್ ನೀಡುತ್ತಿದ್ದ ಉತ್ತರಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

'ದಿವ್ಯಾ ನನಗೆ ಲಕ್ಕಿ ಚಾರ್ಮ್. ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ನಾನು ಹೀಗೆ ಮುಂದುವರೆದುಕೊಂಡು ಹೋಗಬೇಕು ಅಂದು ಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು. ನಮ್ಮನ್ನು ಜನ ಸ್ವೀಕರಿಸಿರುವ ರೀತಿ ನೋಡಿ ಶಾಕ್ ಆಗಿದೆ. ತುಂಬಾ ಸ್ಪೆಷಲ್ ಫೀಲ್ ಆಗುತ್ತಿದೆ. ಅದರಲ್ಲೂ ಆರ್ಯ, ಆರ್ವಿ ಅಂತ ಹ್ಯಾಷ್‌ಟ್ಯಾಕ್ ಕ್ರಿಯೇಟ್ ಮಾಡಿದ್ದಾರೆ.  ನಾನು 15 ವರ್ಷಗಳು ಡಾಕಾದಲ್ಲಿ ಮಾಡಿರುವ ಸಾಧನೆಯನ್ನು ಜನರು ಈಗ ಈ ಶೋ ಮೂಲಕ ಗುರುತಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇವಲ 44 ಸಾವಿರ ಫಾಲೋವರ್ಸ್‌ ಇದ್ದರು ನಂಗೆ. ಇದೀಗ 2 ಲಕ್ಷ ಫಾಲೋವರ್ಸ್ ಆಗಿದ್ದಾರೆ' ಎಂದು ಅರವಿಂದ್ ಮಾತನಾಡಿದ್ದಾರೆ.

ದಿವ್ಯಾ ಅನಾರೋಗ್ಯದ ವೇಳೆ ಅರವಿಂದ್ ಆಕೆಯ ಬಟ್ಟೆಗಳನ್ನು ಒಗೆಯುತ್ತಿದ್ದರು, ಹೆಲ್ತ್‌ ಚೆಕಪ್‌ಗೆಂದು ಆಸ್ಪತ್ರೆಗೆ ಹೋದರೆ ಅ ಕ್ಷಣದ ದಿವ್ಯಾ ಪಾಲಿನ ಮನೆ ಕೆಲಸಗಳನ್ನೂ ಅರವಿಂದ್ ಮಾಡುತ್ತಿದ್ದರು. ದಿವ್ಯಾನ ಮಿಸ್ ಮಾಡಿಕೊಳ್ಳಬಾರದು ಎಂದು ಆಕೆ ವಾಟರ್ ಬಾಟಲ್ ಹಿಡಿದು ಓಡಾಡುತ್ತಿದ್ದರು. ಅರವಿಂದ್ ಹೆಣ್ಣು ಮಕ್ಕಳನ್ನು ಗೌರವಿಸಿ, ಪ್ರೀತಿಸುವ ರೀತಿಗೆ ಅದೆಷ್ಟೋ ಮಂದಿ ಹೆಣ್ಣು ಮಕ್ಕಳು ಫಿದಾ ಆಗಿದ್ದಾರೆ. ನಮಗೂ ಇದೇ ಹುಡುಗ ಬೇಕು, ಸಿಕ್ಕಿಲ್ಲ ಅಂದ್ರೆ ಓಕೆ. ಆದರೆ ಇದೇ ರೀತಿ ಇರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Cucumber-Sugar ತಿಂದ್ರೆ ಕಲ್ಲಂಗಡಿ ಟೇಸ್ಟ್, ಸೆಟ್ ನಲ್ಲಿ ರಾಘು ಮೇಲೆ ಝಾನ್ಸಿ ಪ್ರಯೋಗ
ಗಿಲ್ಲಿ- ಕಾವ್ಯಾ ಜೋಡಿ ಜಟಾಪಟಿಗೆ ರಿಯಲ್ ರೀಸನ್ ಏನು? ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ?