
ಹದಿನಾರನೇ ಶತಮಾನದ ಮಹಾ ಶರಣ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಬದುಕು ಹಾಗೂ ಆಧ್ಯಾತ್ಮಿಕತೆ ಸಾರುವ ಧಾರಾವಾಹಿ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ'. ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ಇದಾಗಿದೆ. ಧಾರಾವಾಹಿಯಲ್ಲಿ ಮಹಾದೇವನ ಪಾತ್ರಧಾರಿ ಬದಲಾಗಿದ್ದಾರೆ.
ಹೌದು! ಕುಟುಂಬಸ್ಥರಿಗೆ ಕೊರೋನಾ ಸೋಂಕು ತಗುಲಿದ ಕಾರಣ ನಟ ವಿನಯ್ ಗೌಡ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದೀಗ ವಿನಯ್ ಪಾತ್ರಕ್ಕೆ ನಟ ಆರ್ಯನ್ ಆಯ್ಕೆ ಆಗಿದ್ದಾರೆ. 'ಜೈ ಹನುಮಾನ್','ವಿಷ್ಣು ದಶಾವತಾರ' ಮತ್ತು 'ಹರಹರ ಮಹಾದೇವ' ಧಾರಾವಾಹಿಗಳಲ್ಲಿ ಆರ್ಯನ್ ಅಭಿನಯಿಸಿದ್ದಾರೆ. ಮಹಾದೇವನ ಪಾತ್ರದಲ್ಲಿ ಅನೇಕ ಬಾರಿ ಕಾಣಿಸಿಕೊಂಡಿರುವ ಕಾರಣ ಜನರು ಅರ್ಯನ್‌ಗೆ ಬೇಗ ಹತ್ತಿರವಾಗುವುದರಲ್ಲಿ ಅನುಮಾವಿಲ್ಲ. ಇತ್ತೀಚಿಗೆ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು.
ಕೊರೋನಾ ಪಾಸಿಟಿವ್ ಎಂದು ಧಾರಾವಾಹಿಯಿಂದ ಹೊರ ನಡೆದ ನಟ ವಿನಯ್ ಗೌಡ!
ಚಿತ್ರೀಕರಣ ಸ್ಥಗಿತಗೊಂಡಿರುವ ಕಾರಣ ಆರ್ಯನ್ ಇನ್ನೂ ಈ ಪಾತ್ರಕ್ಕೆ ಚಿತ್ರೀಕರಣ ಮಾಡಿಲ್ಲ. ಸದ್ಯದ ಮಟ್ಟಕ್ಕೆ ಹಳೆ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಧಾರಾವಾಹಿ ಸಿದ್ಧಲಿಂಗೇಶ್ವರರ ಹುಟ್ಟು, ಬಾಲ್ಯ, ಪವಾಡ, ಸಾಧನೆ ಹಾಗೂ ವಚನಗಳಿಂದ ಆರಂಭವಾಗಿದ್ದು, ಎಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸಜೀವ ಸಮಾಧಿಯಾಗುವವರೆಗಿನ ಸಂಪೂರ್ಣ ಚಿತ್ರಣವನ್ನು ನೋಡುಗರ ಮುಂದೆ ಈ ಧಾರಾವಾಹಿ ಅನಾವರಣಗೊಳಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.