Bigg Boss: ಈ ವಾರ ದೊಡ್ಮನೆಗೆ 5 ಜನ 'ವೈಲ್ಡ್‌ ಕಾರ್ಡ್‌' ಎಂಟ್ರಿ ಕೊಡಲಿದ್ದಾರಾ? ಯಾರೆಲ್ಲಾ ಹೋಗೋ ಚಾನ್ಸ್..?!

Published : Sep 26, 2026, 06:55 PM IST
Bigg Boss Kannada Wild Card Entry

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿ ಒಂಬತ್ತನೇ ವಾರದಲ್ಲಿ ಹೊರಬಂದಿದ್ದ ನಟರೂ ಇವರಲ್ಲೊಬ್ಬರು. ಯಾರೆಲ್ಲಾ? ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ದೊಡ್ಮನೆಯೊಳಗಿನ ವಾತಾವರಣ ಮತ್ತಷ್ಟು ರೋಚಕವಾಗುತ್ತಿದೆ. ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ, ವಾದ-ವಿವಾದ ಮತ್ತು ಆಟದ ತಂತ್ರಗಳು ವೀಕ್ಷಕರ ಕುತೂಹಲ ಹೆಚ್ಚಿಸಿರುವ ಬೆನ್ನಲ್ಲೇ, ಇದೀಗ ತಾಂಡವ್ ರಾಮ್ ಅವರ ದಿಢೀರ್ ನಿರ್ಗಮನ ದೊಡ್ಡ ಚರ್ಚೆಯ ವಿಷಯವಾಗಿದೆ.

ಇತ್ತೀಚೆಗೆ ತಾಂಡವ್ ಮಧ್ಯರಾತ್ರಿ ‘ಎಮರ್ಜೆನ್ಸಿ ಎಕ್ಸಿಟ್’ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅದರಲ್ಲೂ ಆಟದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದ ತಾಂಡವ್ ಹೀಗೆ ದಿಢೀರ್ ಆಗಿ ಹೊರಬಂದಿರುವುದು ವೀಕ್ಷಕರಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ತಾಂಡವ್ ಮತ್ತೆ ದೊಡ್ಮನೆಗೆ ಮರಳುತ್ತಾರಾ ಎಂಬ ಕುತೂಹಲವೂ ಮುಂದುವರಿದಿದೆ.

ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬರುವ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಷನ್ ಎದುರಿಸಲಿದ್ದಾರೆ ಎಂಬ ಚರ್ಚೆಯ ನಡುವೆ, ಬರೋಬ್ಬರಿ ಐವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಮಾಹಿತಿಗೆ ಈವರೆಗೆ ವಾಹಿನಿಯಿಂದ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ಯಾರು ಆ ಐವರು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿ ಒಂಬತ್ತನೇ ವಾರದಲ್ಲಿ ಹೊರಬಂದಿದ್ದ ನಟ ಆದಿ ಲೋಕೇಶ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಇದರ ಜೊತೆಗೆ ಸೀಸನ್ 5ರಲ್ಲಿ ದೊಡ್ಮನೆ ಪ್ರವೇಶಿಸಿ ಗಮನ ಸೆಳೆದಿದ್ದ ನಟಿ ತೇಜಸ್ವಿನಿ ಪ್ರಕಾಶ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಸೀಸನ್ 7ರ ಸ್ಪರ್ಧಿ ಹಾಗೂ ಖ್ಯಾತ ಡ್ಯಾನ್ಸರ್ ಕಿಶನ್ ಬಿಳಗಲಿ ಅವರ ಹೆಸರು ಕೂಡ ವೈಲ್ಡ್ ಕಾರ್ಡ್ ಪಟ್ಟಿಯಲ್ಲಿ ಇದೆ ಎನ್ನಲಾಗುತ್ತಿದೆ.

ಇನ್ನು ‘ಗಿಚ್ಚಿ ಗಿಲಿಗಿಲಿ’ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಹಾಸ್ಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾಗಿರುವ ಕಾಮಿಡಿ ಕಲಾವಿದ ಪ್ರಶಾಂತ್ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಕನ್ನಡದ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಹಿರಿಯ ನಟಿ ವಿಜಯಲಕ್ಷ್ಮಿ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ವಿಶೇಷ ಅತಿಥಿಗಳಾ? ಸ್ಪರ್ಧಿಗಳಾ?

ಕುತೂಹಲಕಾರಿ ಸಂಗತಿಯೆಂದರೆ, ಈ ಐವರು ದೊಡ್ಮನೆಗೆ ಯಾವ ರೀತಿಯಲ್ಲಿ ಪ್ರವೇಶಿಸಲಿದ್ದಾರೆ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಾಜಿ ಸ್ಪರ್ಧಿಗಳಾದ ಆದಿ ಲೋಕೇಶ್, ತೇಜಸ್ವಿನಿ ಪ್ರಕಾಶ್ ಮತ್ತು ಕಿಶನ್ ಬಿಳಗಲಿ ಅವರು ಹಿಂದಿನ ಸೀಸನ್‌ಗಳ ಮಾದರಿಯಲ್ಲಿ ವಿಶೇಷ ಅತಿಥಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ವಿಜಯಲಕ್ಷ್ಮಿ ಮತ್ತು ಪ್ರಶಾಂತ್ ಗೌಡ ಅವರು ಪೂರ್ಣಪ್ರಮಾಣದ ಸ್ಪರ್ಧಿಗಳಾಗಿ ಆಟ ಮುಂದುವರಿಸಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

ಹೀಗಾಗಿ ಒಂದೆಡೆ ತಾಂಡವ್ ಅವರ ಎಮರ್ಜೆನ್ಸಿ ಎಕ್ಸಿಟ್, ಮತ್ತೊಂದೆಡೆ ಎಲಿಮಿನೇಷನ್ ಚರ್ಚೆ, ಇದರ ನಡುವೆ ಐದು ವೈಲ್ಡ್ ಕಾರ್ಡ್ ಎಂಟ್ರಿಯ ಸುದ್ದಿ—ಇವೆಲ್ಲವೂ ‘ಬಿಗ್ ಬಾಸ್ ಕನ್ನಡ 13’ರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವವರೆಗೆ ಇವುಗಳನ್ನು ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯೆಂದೇ ಪರಿಗಣಿಸಬೇಕಾಗಿದೆ.

ತಾಂಡವ್ ಮತ್ತೆ ಬರುತ್ತಾರಾ? ನಿಜವಾಗಿಯೂ ಐವರು ಹೊಸ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುತ್ತಾರಾ? ಅಥವಾ ಬಿಗ್ ಬಾಸ್ ಮತ್ತೊಂದು ಸರ್ಪ್ರೈಸ್ ನೀಡಲಿದೆಯೇ? ಎಂಬ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಬೇಕಿದೆ. ಅಲ್ಲಿಯವರೆಗೆ ಬಿಗ್ ಬಾಸ್ ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಿಡ್ ನೈಟ್ ಹೊರಬಿದ್ದಿರುವ ತಾಂಡವ್ ಮತ್ತೆ ಬಿಗ್‌ ಬಾಸ್‌ ಮನೆಯೊಳಕ್ಕೆ ಬರ್ತಾರಾ? ಈ ಸುಳಿವು ಕೊಟ್ಟಿದ್ಯಾರು?
Bigg Boss, ಕಳಂಕಿತರನ್ನು ಸ್ಟಾರ್​ ಮಾಡುವ ಗಟಾರ್​ ಷೋ: ಸ್ಟಾಂಡ್ಅಪ್ ಕಾಮಿಡಿಯನ್ ಮಾತಿಗೆ ಫ್ಯಾನ್ಸ್​ ಆಕ್ರೋಶ