
ರಿಯಾಲಿಟಿ ಷೋ ಎಂದರೆ ಮುಂಚಿನಂತಿಲ್ಲ. ಅದರಲ್ಲಿಯೂ ಡಾನ್ಸ್ ಷೋಗಳು ಒಂದು ಹಂತಕ್ಕೆ ಮೇಲೆಯೇ ಹೋಗಿವೆ. ಇಲ್ಲಿ ಡಾನ್ಸ್ಗಿಂತಲೂ ಹೆಚ್ಚಾಗಿ ಸ್ಪರ್ಧಿಗಳು ಸರ್ಕಸ್ ಮಾಡುತ್ತಾ ವೀಕ್ಷಕರನ್ನು ರಂಜಿಸುವುದು ಇದೆ. ಸರ್ಕಸ್ಗಳಲ್ಲಿ ಹಿಂದೆಲ್ಲಾ ಕಲಾವಿದರು ಕಲೆಗಳನ್ನು ಪ್ರದರ್ಶಿಸುವಾಗ ಮೈಯೆಲ್ಲಾ ಜುಂ ಎನ್ನುತ್ತಿತ್ತು. ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿತ್ತು. ಆದರೂ ಆಗೊಮ್ಮೆ ಈಗೊಮ್ಮೆ ಕಲಾವಿದರ ಜೀವಕ್ಕೆ ಅಪಾಯ ಆಗುವಂಥ ಘಟನೆಗಳು ನಡೆಯುತ್ತಲೇ ಇರುತ್ತಿದ್ದವು. ಈಗಲೂ ಕೆಲವೇ ಸರ್ಕಸ್ ಕಂಪೆನಿಗಳು ಉಳಿದುಕೊಂಡಿವೆ. ಆದರೆ ಡಾನ್ಸ್ ರಿಯಾಲಿಟಿ ಷೋಗಳಲ್ಲಿ ಸಾಮಾನ್ಯರು ಎನಿಸಿಕೊಂಡ ಕಲಾವಿದರು ಅದ್ಭುತವಾದ ಮೈ ನವಿರೇಳುವಂಥ ಸರ್ಕಸ್ಗಳ ಪ್ರದರ್ಶನ ಮಾಡುತ್ತಾರೆ. ಇದಕ್ಕಾಗಿ ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಶೂಟಿಂಗ್ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳಲಾಗುತ್ತದೆ. ಇದು ಸ್ಪರ್ಧಾತ್ಮಕ ಯುಗ ಆಗಿರುವ ಕಾರಣ, ಷೋಗಳು ಹೆಚ್ಚು ಟಿಆರ್ಪಿ ಗಳಿಸಬೇಕು ಎಂದರೆ ಈ ರೀತಿಯ ಸರ್ಕಸ್ಗಳು ಇಂದು ಅನಿವಾರ್ಯ ಕೂಡ ಆಗಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ರಾಜಾ ರಾಣಿ ಷೋನಲ್ಲಿ ಕೂಡ ಕಲಾವಿದರು ಮೈ ನವಿರೇಳಿಸುವಂಥ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರಸಾರ ಆಗುವ ಈ ಷೋನ ಪ್ರೊಮೋ ಒಂದನ್ನು ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಕಲಾವಿದರ ಅಸಾಧ್ಯ ಎನ್ನುವಂಥ ಸ್ಟಂಟ್ಗಳನ್ನು ಮಾಡಿದ್ದಾರೆ. ಅದರಲ್ಲಿ ಇಬ್ಬರು ಸ್ಪರ್ಧಿಗಳು ರೋಪ್ ಮೂಲಕ ಎತ್ತರಕ್ಕೆ ಹೋಗಿದ್ದಾರೆ. ದಿಢೀರ್ ಎಂದು ಕಲಾವಿದೆ ಆಯ ತಪ್ಪಿ ಬೀಳುವಂತೆ ತೋರಿಸಿದ್ದಾರೆ. ಇದನ್ನು ನೋಡಿ ತೀರ್ಪುಗಾರರಾಗಿರುವ ಸೃಜನ್ ಲೋಕೇಶ್, ಅದಿತಿ ಪ್ರಭುದೇವ, ತಾರಾ ಅವರು ಕಿರುಚಿಕೊಂಡಿದ್ದಾರೆ. ಆದರೆ ಅಸಲಿಗೆ ಇದೊಂದು ಸ್ಟಂಟ್ ಅಷ್ಟೇ. ಕೆಳಕ್ಕೆ ಜಿಗಿದ ಕಲಾವಿದೆಯನ್ನು ಮೇಲೆ ಇರುವ ಕಲಾವಿದ ಬ್ಯಾಲೆನ್ಸ್ ಮೂಲಕ ಕಾಲಿನಿಂದ ಹಿಡಿದಿದ್ದಾರೆ.
ಎರಡು ತಿಂಗಳ ಮಗು ಬಿಟ್ಟು ಬರ್ತೀರಾ? ನಟಿ ಅದಿತಿ ಪ್ರಭುದೇವ್ಗೆ ಅಭಿಮಾನಿಗಳ ಕ್ಲಾಸ್!
ಅಂದಹಾಗೆ, ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಕಳೆದ ಜೂನ್ 8 ರಿಂದ ಆರಂಭವಾಗಿದೆ. ಅನುಪಮಾ ಗೌಡ ಮತ್ತೆ ನಿರೂಪಕಿಯಾಗಿ ಆಗಮಿಸಲಿದ್ದಾರೆ. ಸೃಜನ್ ಲೋಕೇಶ್, ತಾರಾ ಮತ್ತು ಅದಿತಿ ಪ್ರಭುದೇವ್ ಅವರು ತೀರ್ಪುಗಾರರಾಗಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಾಜ ರಾಣಿ ಶೋ ನಿರ್ಮಾಣಗೊಳ‌್ಳುತ್ತಿದೆ.
ಕಳೆದ ಸೀಸನ್ನುಗಳ ಯಶಸ್ಸು ತಂಡದ ಉತ್ಸಾಹವನ್ನು ಹೆಚ್ಚಿಸಿದ್ದು, ‘ರಾಜ ರಾಣಿ’ಯ ಮೂರನೇ ಸೀಸನ್ನಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹನ್ನೆರೆಡು ಸೆಲೆಬ್ರಿಟಿ ದಂಪತಿಗಳು ಪಾಲ್ಗೊಳ್ಳಲಿರುವ ‘ರಾಜ ರಾಣಿ ರೀಲೋಡೆಡ್’ ನ ಹೊಸ ಸೀಸನ್ ಜೋಡಿಗಳ ಡಾನ್ಸಿನ ಮೇಲೆ ಹೆಚ್ಚು ಒತ್ತು ನೀಡಿದೆ. ತಮಾಷೆ, ಹರಟೆ, ಆಟ, ಭಾವನೆಗಳೆಲ್ಲಾ ಇರುತ್ತವಾದರೂ ಈ ಸಲ ಜೋಡಿಗಳ ನರ್ತನ ಸಾಮರ್ಥ್ಯ ಹಿಂದಿನ ಸೀಸನ್ನುಗಳಿಗಿಂತ ಆದ್ಯತೆ ಪಡೆದಿದೆ. ಹನ್ನೆರಡು ಸೆಲೆಬ್ರೆಟಿಗಳು ಷೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಟಿವಿ ಮುಖಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ತನಕ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಜೋಡಿಗಳನ್ನು ಷೋನಲ್ಲಿ ಕಾಣಬಹುದು. ಡಾನ್ಸ್ ಮತ್ತು ಗೇಮುಗಳ ಮೂಲಕ ಈ ಜೋಡಿಗಳು ತಮ್ಮ ನಡುವಿನ ಸಾಮರಸ್ಯವನ್ನು ಪರೀಕ್ಷೆಗೊಳಪಡಿಸಲಿದ್ದಾರೆ.
ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.