ಮನಿಷಾ ಜೊತೆ ಪ್ರೇಮದ ಕಿಚ್ಚು ಹೊತ್ತಿಸಿದ ಕಂಠಿ! ಸ್ನೇಹಾ ಕಥೆ ಏನು ಕೇಳ್ತಿದ್ದಾರೆ ಫ್ಯಾನ್ಸ್​...

Published : Jul 25, 2024, 04:45 PM IST
 ಮನಿಷಾ ಜೊತೆ ಪ್ರೇಮದ ಕಿಚ್ಚು ಹೊತ್ತಿಸಿದ ಕಂಠಿ! ಸ್ನೇಹಾ ಕಥೆ ಏನು ಕೇಳ್ತಿದ್ದಾರೆ ಫ್ಯಾನ್ಸ್​...

ಸಾರಾಂಶ

ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ಪುಟ್ಟಕ್ಕನ ಮಕ್ಕಳು ಕಂಠಿ ಉರ್ಫ್​ ಧನುಷ್​ ಅವರು ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ವಾಹಿನಿ ಶೇರ್​ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ...  

ಕಂಠಿ ಎಂದರೆ ಸಾಕು... ಎಲ್ಲರ ಕಣ್ಣೆದುರಿಗೆ ಬರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್​ ನಾಯಕ. ಸ್ನೇಹಾಳ ಪ್ರೇಮಿಯಾಗಿ, ಪತಿಯಾಗಿ, ಪುಟ್ಟಕ್ಕನ ಅಳಿಯನಾಗಿ ಎಲ್ಲಕ್ಕಿಂತಲೂ ಮಿಗಿಲಾಗಿ ಬಂಗಾರಮ್ಮನ ಮಗನಾಗಿ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುತ್ತಾ ಇರುವ ಕಂಠಿಯನ್ನು ಕಂಡರೆ ಸೀರಿಯಲ್​ ಪ್ರಿಯರಿಗಂತೂ ಸಿಕ್ಕಾಪಟ್ಟೆ ಪ್ರೀತಿ. ಅನಕ್ಷರಸ್ಥನಾಗಿ, ಇದೀಗ ಅಕ್ಷರ ಕಲಿಯುತ್ತಾ ಇರುವ ಕಂಠಿ, ತಾನು ಅಪ್ಪನಾಗುತ್ತಿದ್ದೇನೆ ಎಂದು ತಿಳಿದು ತನ್ನನ್ನೇ ತಾನು ಬದಲಿಸಿಕೊಳ್ಳಲು ಪ್ರಯತ್ನಿಸಿದ ಕಂಠಿ, ಇದೀಗ ತಾನು ಅಪ್ಪ ಆಗುತ್ತಿಲ್ಲ, ಪತ್ನಿ ಸುಳ್ಳು ಹೇಳಿದ್ದಾಳೆ ಎಂದು ತಿಳಿದ ಮೇಲಿನ ಕಂಠಿ... ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬುತ್ತಿರುವ ಕಂಠಿಯ ಮೇಲೆ  ಯುವತಿಯರಿಗೆ ಸಿಕ್ಕಾಪಟ್ಟೆ ಕ್ರಶ್​. ಕಂಠಿ ಎಲ್ಲಿ ಹೋದರೂ ಯುವತಿಯರು ಮುತ್ತಿಕೊಳ್ಳುವುದನ್ನು ನೋಡಿದರೆ ಇವರ ಮೇಲೆ ಎಷ್ಟು ಕ್ರಶ್​ ಇದೆ ಎನ್ನುವುದು ತಿಳಿಯುತ್ತದೆ.

ಅಂದಹಾಗೆ, ಎಲ್ಲರ ಮನಸ್ಸನ್ನು ಗೆದ್ದು, ಕದ್ದಿರುವ ಕಂಠಿಯ ನಿಜವಾದ ಹೆಸರು ಧನುಷ್​. ಇದೀಗ ಧನುಷ್​ ಅವರು Dance ಕರ್ನಾಟಕ Dance ರಿಯಾಲಿಟಿ ಷೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ಶುರುವಾಗಿರುವ ಈ ಷೋದಲ್ಲಿ ಈ ವಾರ 'Jodi Introduction Round' ಇದ್ದು, ಇದರಲ್ಲಿ ಮನಿಷಾ ಅವರ ಜೊತೆ ಸಕತ್​ ರೊಮಾನ್ಸ್​ ಮಾಡಿದ್ದಾರೆ. ಈ ಮೂಲಕ ವೇದಿಕೆಯಲ್ಲಿ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. 'ಚೆಂದುಟಿಯ ಪಕ್ಕದಲಿ' ಹಾಡಿಗೆ ಡ್ಯಾನ್ಸ್‌ನ ಸುಂದರ ಕಾವ್ಯ ಸೃಷ್ಟಿಸಿದ ಕಂಠಿ-ಮನೀಷಾ! ಶೀರ್ಷಿಕೆಯಡಿ ಜೀ ಕನ್ನಡ ವಾಹಿನಿ ಇದರ ಪ್ರೊಮೋ ಬಿಡುಗಡೆ ಮಾಡಿದೆ. ಧನುಷ್​ ಅವರು ನಟನೆಗೆ ಮಾತ್ರವಲ್ಲದೇ ಡಾನ್ಸ್​ಗೂ ಸೈ ಎನ್ನುವುದನ್ನು  ಇಲ್ಲಿ ನಿರೂಪಿಸಿದ್ದಾರೆ. ಇವರಿಗೆ ತೀರ್ಪುಗಾರರ ಕಡೆಯಿಂದಲೂ ಭಾರಿ ಶ್ಲಾಘನೆ ವ್ಯಕ್ತವಾಗಿದೆ. 

DKD- ಸೀತಾರಾಮ ಪ್ರಿಯಾ, ಪುಟ್ಟಕ್ಕನ ಮಗಳು ಸಹನಾ ಈ ಪರಿ ಡಾನ್ಸಾ? ಜಡ್ಜ್​ಗಳು ಸುಸ್ತೋ ಸುಸ್ತು!

ಇನ್ನು ಧನುಷ್​ ಕುರಿತು ಹೇಳುವುದಾದರೆ, ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದಾಗಲೇ ಧನುಷ್​ ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.   ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಟಿಸುವುದಕ್ಕೂ ಮುನ್ನ ಇವರು ಧನುಷ್‌, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದಾರೆ.  ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು.  ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು.  ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದವರು ಇವರು.

 ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಮಂಡ್ಯದ ಭಾಷೆಯನ್ನೇ ಬಳಸಲಾಗುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಧನುಷ್​ ಅವರು ತಮ್ಮದು ಕೋಲಾರವಾದ್ದರಿಂದ ಇಲ್ಲಿಯ ಭಾಷೆಗೂ ಮಂಡ್ಯ ಭಾಷೆಗೂ ಸಾಮ್ಯತೆ ಇದೆ. ಆದ್ದರಿಂದ ಸೀರಿಯಲ್​ನಲ್ಲಿ ಮಂಡ್ಯದ ಭಾಷೆ ಬಳಸುವುದು ಕಷ್ಟವಾಗಲಿಲ್ಲ ಎಂದಿದ್ದಾರೆ.  ಇದೀಗ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. 

ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?