ನೀನು ನನ್ನನ್ನೇ ಲವ್​ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು ಹೊಸ ಸ್ಟೋರಿ?

Published : Jul 25, 2024, 04:16 PM IST
ನೀನು ನನ್ನನ್ನೇ ಲವ್​ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು  ಹೊಸ ಸ್ಟೋರಿ?

ಸಾರಾಂಶ

ಮಂಚದ ಮೇಲೆ ಕುಳಿತು ಲವ್​ ಬಗ್ಗೆ ಹೇಳಿದ್ದಾರೆ ನಿವೇದಿತಾ ಗೌಡ. ಬಾಲಿವುಡ್​ ಸಿನಿಮಾ ಹಾಡಿನ  ರೀಲ್ಸ್​ ಮಾಡಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?  

ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ಅದೇನೇ ಇದ್ದರೂ, ನಿವೇದಿತಾಗೂ ಚೆನ್ನಾಗಿ ಗೊತ್ತು, ಟ್ರೋಲ್​ನಿಂದಲೇ ರೀಲ್ಸ್​ ಮಾಡುವವರ ಜೀವನ ಸಾಗುವುದು ಎನ್ನುವುದು. ಅದೇ ಕಾರಣಕ್ಕೆ ಹೆಚ್ಚಿನ ರೀಲ್ಸ್​ ತಾರೆಯರು ತಮಗೆ ಬಂದಿರುವ ಕೆಟ್ಟ ಕಮೆಂಟ್ಸ್​ಗಳನ್ನು ಡಿಲೀಟ್​ ಮಾಡುವುದಿಲ್ಲ. ಏಕೆಂದರೆ ಅದೇ ಅವರಿಗೆ ಜೀವನ. ಹೆಚ್ಚೆಚ್ಚು ಕೆಟ್ಟ ಕಮೆಂಟ್​  ಪಡೆದರೆ, ಹೆಚ್ಚೆಚ್ಚು ಜನಪ್ರಿಯರಾಗಬಹುದು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದೇ ರೀತಿಯ ಕಮೆಂಟ್​ ಮೂಲಕವೇ ಕೆಲವು ಜನಪ್ರಿಯ ರಿಯಾಲಿಟಿ ಷೋಗಳಲ್ಲಿಯೂ ತಮಗೆ ಸ್ಥಾನ ಸಿಕ್ಕು ಇನ್ನಷ್ಟು ಉತ್ತುಂಗಕ್ಕೆ ಏರಬಹುದು ಎನ್ನುವುದು ರೀಲ್ಸ್​ ತಾರೆಯರಿಗೆ ಚೆನ್ನಾಗಿ ಅರಿವಿದೆ. ಇನ್ನು ನಿವೇದಿತಾ ಅಂತೂ ಮೊದಲೂ ಇಂಥ ಕಮೆಂಟಿಗೆ ತಲೆ ಕೆಡಿಸಿಕೊಂಡವರಲ್ಲ, ಈಗಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ನಾನೇನಾದ್ರೂ ನಿನ್ನ ಮದ್ವೆಯಾಗಿದ್ರೆ... ನಿವೇದಿತಾ ಹೊಸ ರೀಲ್ಸ್​ ನೋಡಿ ಫ್ಯಾನ್ಸ್​ ಹೇಳಿದ್ದೇನು?
ನೀನು ಏನೂ ಹೇಳದಿದ್ರೂ ನನ್ನನ್ನೇ ಲವ್​ ಮಾಡೋದು ಎಂದು ಗೊತ್ತು. ನೀನು ನನ್ನನ್ನೇ ಸೆಲೆಕ್ಟ್​ ಮಾಡಿದ್ದು ಗೊತ್ತು ಎಂದು ಹೇಳುವ ಮೂಲಕ ನಿವೇದಿತಾ ಲೈಫ್​ನಲ್ಲಿ ಹೊಸ ಎಂಟ್ರಿ ಯಾರದ್ದು ಎಂದು ಕೇಳುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಈ ಹಾಡು  ( चाहे तुम कुछ ना कहो, मैने सुन लिया) ಜೋ ಜೀತಾ ವಹಿ ಸಿಕಂದರ್​ ಚಿತ್ರದ್ದು. ಇದನ್ನೇ ರೀಲ್ಸ್​ ಮಾಡಿದ್ದಾರೆ ನಿವೇದಿತಾ.  ಆದರೆ ಅವರು ಏನೇ ರೀಲ್ಸ್​ ಮಾಡಿದ್ರೂ ಸದ್ಯ ಅದರ ಅರ್ಥ ಹುಡುಕಿ ಅವರ ಬದುಕಿಗೆ ಕನೆಕ್ಟ್​ ಮಾಡೋದು ಮಾಮೂಲಾಗಿದೆ. ಸುಮ್ಮನೇ ಯಾವುದೋ ಒಂದು ಹಾಡಿಗೆ ರೀಲ್ಸ್​ ಮಾಡಿದ್ರೂ ಇದು ನಿವೇದಿತಾ ತಮಗೇ ಹೇಳಿಕೊಂಡಿರೋದು ಎಂದೇ ಅರ್ಥ ಕಲ್ಪಿಸಲಾಗುತ್ತಿದೆ. ಅಷ್ಟಕ್ಕೂ ಇಲ್ಲೂ ಹಾಗೆಯೇ ಆಗಿದೆ. ಮಂಚದ ಮೇಲೆ ಕುಳಿತು ನಿವೇದಿತಾ ಈ ಹಾಡನ್ನು ಹೇಳಿರುವ ಕಾರಣ, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ರಿಯಾಕ್ಟ್​ ಮಾಡುತ್ತಿದ್ದಾರೆ. 

ಇನ್ನು ಕೆಲವರು ಡಿವೋರ್ಸ್​ ಆದ ಮೇಲೆ ಸೋಷಿಯಲ್​ ಮೀಡಿಯಾದಲ್ಲಿ ನಿವೇದಿತಾ ವರ್ಚಸ್ಸು ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಪ್ರಚಾರಕ್ಕಾಗಿ ಈ ರೀತಿ ಅವರು ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಜರ್ನಿ ಮುಂದುವರೆಸಿದ್ದಾರೆ. ಹೀಗೆ ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. 

ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್​ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?