
ನವದೆಹಲಿ (ಏ.26): 25ನೇ ಜನ್ಮದಿನದ ಸಂಭ್ರಮ ಆಚರಿಸಲು ಇನ್ನೇನು ಕೆಲವೇ ದಿನಗಳು ಇರುವಾಗಲೇ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ ಸಾವು ಕಂಡಿದ್ದಾರೆ. ಆಕೆಯ ಇನ್ಸ್‌ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮಿಶಾ ಅಗರ್ವಾಲ್ ಅವರ ಕುಟುಂಬ ಈ ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ, ಸಾವಿಗೆ ಏನು ಕಾರಣ ಅನ್ನೋದನ್ನ ತಿಳಿಸಿಲ್ಲ.
ಶುಕ್ರವಾರ ರಾತ್ರಿ, ಮಿಶಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಆ ಪೋಸ್ಟ್ ಅವರ ಹೆಸರಿನೊಂದಿಗೆ ಪ್ರಾರಂಭವಾಗಿದೆ. "ಮಿಶಾ ಅಗರ್ವಾಲ್", "ಏಪ್ರಿಲ್ 26, 2000 - ಏಪ್ರಿಲ್ 24, 2025" ಎಂದು ಬರೆಯಲಾಗಿದೆ. ಇದರರ್ಥ ಅವರು ತಮ್ಮ 25ನೇ ಜನ್ಮದಿನದ ಸಂಭ್ರಮ ಆಚರಿಸಲು ಎರಡು ದಿನಗಳು ಇರುವಾಗಲೇ ಸಾವು ಕಂಡಿದ್ದಾರೆ.
ಅದರೊಂದಿಗೆ ಪೋಸ್ಟ್‌ನಲ್ಲಿ "ಮಿಶಾ ಅಗರ್ವಾಲ್ ಅವರ ನಿಧನದ ಹೃದಯ ವಿದ್ರಾವಕ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇವೆ. ನೀವು ಅವರಿಗೆ ಮತ್ತು ಅವರ ಕೆಲಸಕ್ಕೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾವು ಇನ್ನೂ ಈ ಅಪಾರ ನಷ್ಟವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ." ಎಂದು ಬರೆಯಲಾಗಿದೆ. "ದಯವಿಟ್ಟು ಅವಳನ್ನು ನಿಮ್ಮ ನೆನಪಿನಲ್ಲಿ ಇಟ್ಟುಕೊಳ್ಳಿ ಮತ್ತು ಅವಳ ಯೋಚನೆಯನ್ನು ನಿಮ್ಮ ಅಂತರಾಳದಲ್ಲಿ ಇರಿಸುವುದನ್ನು ಮುಂದುವರಿಸಿ" ಎಂದು ತಿಳಿಸಲಾಗಿದೆ.
ಇದು ಅವರ ಅನೇಕ ಫಾಲೋವರ್ಸ್‌ಗಳಿಗೆ ಆಘಾತ ನೀಡಿದೆ. ಒಂದು ಕಾಮೆಂಟ್‌ನಲ್ಲಿ, "ಇಂದು ಅವರ ಹುಟ್ಟುಹಬ್ಬವಾಗಿತ್ತು.... ದಯವಿಟ್ಟು ಯಾರಾದರೂ ತಿಳಿಸಿ, ಅವರು ಇಂದು ಮರುಜನ್ಮ ಪಡೆದಿದ್ದಾರೆಯೇ... ಈಗ ಅವರಿಗೆ ಇಂದು 25 ವರ್ಷ ತುಂಬುತ್ತದೆ." ಇನ್ನೊಂದು ಕಾಮೆಂಟ್‌ನಲ್ಲಿ, "ಇದು ನಿಜವಲ್ಲ ಎಂದು ನಾನು ಭಾವಿಸುತ್ತೇನೆ. ಅವರು ತುಂಬಾ ಸುಂದರವಾಗಿದ್ದರು. ಪ್ರತಿಭಾನ್ವಿತ ಹುಡುಗಿಯಾಗಿದ್ದರು. ಈ ನೋವು ಊಹಿಸಲೂ ಸಾಧ್ಯವಿಲ್ಲ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಬರೆಯಲಾಗಿದೆ.
ಆಕೆಯ ತಮಾಷೆಯ ವಿಡಿಯೋಗಳು ನನಗೆ ನಗು ತರಿಸುತ್ತಿದ್ದವು. ಆಕೆ ಇಲ್ಲ ಎಂದರೆ ನಾನು ನಂಬಲು ಸಾಧ್ಯವೇ ಇಲ್ಲ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. 'ನನಗೆ ನಗು ಅಗತ್ಯವಿದ್ದಾಗ ಆಕೆಯ ವಿಡಿಯೋಗಳು ನನಗೆ ಮಂದಹಾಸ ಮೂಡಿಸಿದ್ದವು. ಆಕೆಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಿಟ್ಟಿದ್ದಕ್ಕೆ ಥ್ಯಾಂಕ್ಸ್' ಎಂದು ಇನ್ನೊಬ್ಬರು ಬರೆದಿದ್ದಾರೆ.
ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್ ಲಕ್ಷ ಸಂಪಾದನೆ
ಆಕೆಯ ವಿಡಿಯೋಗಳು ನನಗೆ ದಿನದ ಉತ್ತಮ ಆರಂಭವನ್ನು ನೀಡುತ್ತಿದ್ದವು. ಆಕೆ ಇಲ್ಲದೆ, ಇನ್ಸ್‌ಟಾಗ್ರಾಮ್‌ಅನ್ನು ಯೋಚನೆ ಮಾಡೋದು ಕೂಡ ಕಷ್ಟ ಎಂದು ಇನ್ನೊಬ್ಬರು ಬರೆದಿದ್ದಾರೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೆಚ್ಚಿನವರು ಪೋಸ್ಟ್ ಮಾಡಿದ್ದಾರೆ.
ಮಿಶಾ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಮತ್ತು ದುಃಖದ ಸಂದೇಶಗಳಿಂದ ತುಂಬಿ ತುಳುಕುತ್ತಿದ್ದವು. ಅವರ ಫಾಲೋವರ್ಸ್‌ಗು ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಕಾಮೆಂಟ್ ವಿಭಾಗವನ್ನು ತುಂಬಿ, ತಮ್ಮ ದುಃಖವನ್ನು ವ್ಯಕ್ತಪಡಿಸಿ ಮತ್ತು ಸಂತಾಪವನ್ನು ವ್ಯಕ್ತಪಡಿಸಿದರು.
ರಿಷಿಕೇಶದಲ್ಲಿ ವಿದೇಶಿ ಮಹಿಳೆಯರ ಸ್ನಾನದ ವಿಡಿಯೋ ತೆಗೆದ ಯುವಕ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.