ಶಾರೂಕ್ ಖಾನ್ ಮಕ್ಕಳಿಗೆ ಟೀಚರ್‌ ಆಗಿದ್ರಂತೆ ಕನ್ನಡ ಕಿರುತೆರೆಯ ಈ ನಟಿ!

By Kannadaprabha News  |  First Published Apr 3, 2020, 3:36 PM IST

ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.


ಸಿನಿಮಾ ಸ್ಟಾರ್‌ಗಳ ಮಕ್ಕಳಿಗೆ ಪಾಠ ಮಾಡಿದವಳು ನಾನು. ಯಾವ ಸ್ಟಾರ್‌ ಮಕ್ಕಳಿಗೆ ಅಂತೀರಾ ಶಾರೂಖ್‌ ಖಾನ್‌, ಸೈಫ್‌ ಆಲಿಖಾನ್‌, ಜೂಹಿ ಚಾವ್ಲಾ, ಕ್ರಿಕೆಟ್‌ ಲೋಕದ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಮಕ್ಕಳು ನನ್ನ ವಿಧ್ಯಾರ್ಥಿಗಳು. ಅದು ಹೇಗೆ ಎಂದು ನೀವು ಕೇಳಿ​ದರೆ ನಾನು ನಟ​ನೆಗೆ ಬರುವ ಮುನ್ನ ಏನಾ​ಗಿದ್ದೆ ಎಂಬು​ದನ್ನು ಹೇಳ​ಬೇ​ಕಿ​ದೆ. ನೀವು ನೋಡುತ್ತಿರುವ ‘ಸಿಲ್ಲಿ ನಲ್ಲಿ’ ಧಾರಾವಾಹಿಯ ಸಮಾಜ ಸೇವಕಿ ಲಲಿತಾಂಭ ಅಲಿಯಾಸ್‌ ಲಲ್ಲಿ, ಮೊದಲು ಶಾಲಾ ಶಿಕ್ಷಕಿ. ನಾನು ಹುಟ್ಟಿಬೆಳೆದ್ದಿದ್ದು ಮೈಸೂರಿನಲ್ಲಿ. ಇಂಗ್ಲಿಷ್‌ ವಿಭಾಗದಲ್ಲಿ ಎಂಎ ಮುಗಿಸಿದ ಮೇಲೆ ನಾನು ಸಂದರ್ಶನ ಕೊಟ್ಟು ಆಯ್ಕೆ ಆಗಿದ್ದು ಮುಂಬಾಯಿನಲ್ಲಿರುವ ಧೀರಾಬಾಯಿ ಅಂಬಾನಿ ಇಂಟರ್‌ ನ್ಯಾಷನಲ… ಸ್ಕೂಲ…ಗೆ. ಇಲ್ಲಿ ಇಂಗ್ಲೀಷ್‌ ಟೀಚರ್‌ ಆಗಿ 10 ವರ್ಷ ಕೆಲಸ ಮಾಡಿದ್ದೇನೆ. ಇದೇ ಶಾಲೆಗೆ ಬರುತ್ತಿದ್ದ ಬಾಲಿವುಡ್‌ನ ಬಹುತೇಕ ತಾರೆಗಳ ಮಕ್ಕಳಿಗೆ ನಾನು ಪಾಠ ಮಾಡಿದ್ದೇನೆ. ನಿಮಗೊಂದು ವಿಷಯ ಹೇಳಬೇಕು. ನಾನು ಶಾರೂಖ್‌ ಖಾನ್‌ ಅವರಿಗೆ ದೊಡ್ಡ ಅಭಿಮಾನಿ. ಅದೇ ಶಾರೂಖ್‌, ಪೇರೆಂಟ್ಸ್‌ ಮೀಟಿಂಗ್‌ಗೆ ಬಂದು ನನ್ನ ಮಗಳು ಹೇಗೆ ಓದುತ್ತಿದ್ದಾಳೆ ಎಂದಾಗ ನನಗೆ ಒಂದು ಕ್ಷಣ ನಂಬಕ್ಕೆ ಆಗುತ್ತಿರಲಿಲ್ಲ. ನಾವು ತೆರೆ ಮೇಲೆ ನೋಡಿ ಅಭಿಮಾನಿಸುವ ತಾರೆಗಳೇ ನಮ್ಮ ಮುಂದೆ ನಿಂತಾಗ ಹೇಗೆ ಅನಿಸಬೇಕು ಹೇಳಿ!?

ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ

Tap to resize

Latest Videos

ಹೀಗೆ ಸೆಲೆಬ್ರಿಟಿ ಮಕ್ಕಳಿಗೆ ಪಾಠ ಮಾಡಿದ ನಾನೇ ಮುಂದೆ ನಟಿಯಾಗಿ ಸೆಲೆಬ್ರಿಟಿ ಜೀವನ ಅನುಭವಿಸುವ ಅವ​ತಾಶ ಸಿಕ್ಕಿದ್ದು ‘ಸಿಲ್ಲಿ ನಲ್ಲಿ’ ಧಾರಾ​ವಾಹಿ ಮೂಲ​ಕ. ಟೀಚರ್‌ ಆಗಿದ್ದರೂ ನನಗೆ ಮೊದಲಿನಿಂದಲೂ ನಟನೆ ಅಂದರೆ ಪ್ರಾಣ. ಆದರೆ, ಪ್ರತಿಷ್ಠಿತ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ನನಗೆ ಅಂಥ ಅವಕಾಶ ಸಿಗುವುದಾದರೂ ಹೇಗೆ ಎಂದುಕೊಳ್ಳುತ್ತಿರುವಾಗಲೇ ಏನಾದರೂ ಮಾಡಿ ನಾನು ನಟಿ ಆಗಬೇಕು ಎಂದು ನಿರ್ಧರಿಸಿದೆ. ಬೆಳಗ್ಗಿನಿಂದ ಸಂಜೆ ವರೆಗೂ ಪಾಠ ಮಾಡುತ್ತಿದ್ದೆ. ಸಂಜೆ ನಂತರ ಅನುಪಮ… ಖೇರ್‌ ಇನ್‌ಸ್ಟೂಟ್‌ನಲ್ಲಿ ನಟನೆಯ ತರಬೇತಿಗೆ ಸೇರಿಕೊಂಡೆ. ಇಲ್ಲಿ ನಟನೆ ಕಲಿಯುತ್ತಿದ್ದಾಗಲೇ ಪೃಥ್ವಿ ಎನ್ನುವ ರಂಗ ತಂಡ ಸೇರಿಕೊಂಡ ನಾಟಕಗಳ ಪ್ರದರ್ಶನ ಮಾಡಲು ಶುರು ಮಾಡಿದೆ. ಹೀಗೆ ಹಿಂದಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ನನಗೆ ಮೊದಲು ಕ್ಯಾಮೆರಾ ಎದುರಿಸುವ ಅವಕಾಶ ಸಿಕ್ಕಿದ್ದು ಕ್ರೈಮ… ಧಾರಾವಾಹಿ ಎನಿಸಿಕೊಂಡಿದ್ದ ಸೋನಿ ವಾಹಿನಿಯಲ್ಲಿ ಬರುತ್ತಿದ್ದ ‘ಕ್ರೈಮ… ಪೆಟ್ರೋಲ…’ನಲ್ಲಿ. ಇದು ಕನ್ನಡದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರುವ ‘ಶಾತಂ ಪಾಪಂ’ ರೀತಿಯ ಧಾರಾವಾಹಿ. ತಿಂಗಳಿಗೆ ಎರಡ್ಮೂರು ಎಪಿಸೋಡ್‌ಗಳಲ್ಲಿ ನಟಿಸುವ ಅವಕಾಶ ಸಿಗುತ್ತಿತ್ತು ಅಷ್ಟೆ.

ಆದರೆ, ನಾನು ಪೂರ್ತಿ ನಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಳ್ಳುವಾಗಲೇ ಕನ್ನಡದಲ್ಲಿ ‘ಸಿಲ್ಲಿ ನಲ್ಲಿ’ ಧಾರಾವಾಹಿಗೆ ಆಡಿಷನ್‌ ನಡೆಯುತ್ತಿದೆ ಎಂದು ಗೊತ್ತಾಗಿ ಸೀದಾ ಬೆಂಗಳೂರಿಗೆ ಬಂದು ಆಡಿಷನ್‌ ಕೊಟ್ಟು ಆಯ್ಕೆ ಆದೆ. ನನಗೆ ಹಾಸ್ಯ ಮಾಡುವುದು ಅಷ್ಟಾಗಿ ಬರಲ್ಲ. ಆದರೂ ಧಾರಾವಾಹಿ ತಂಡ, ಸಿಹಿ ಕಹಿ ಚಂದ್ರು ಅವರ ಬೆಂಬಲದಿಂದ ನಾನು ಈ ಸವಾಲನ್ನು ಸ್ವೀಕರಿಸಿದೆ. ಹೀಗೆ ನಾನು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಸಮಾಜ ಸೇವಕಿ ಪಾತ್ರದ ಅವತಾರ ಎತ್ತಿ ಇಲ್ಲಿಗೆ ಒಂದು ವರ್ಷ ಆಗುತ್ತಿದೆ. ಈ ನಡುವೆ ಬೇರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬಂದರೂ ಸಮಯ ಸಿಗುತ್ತಿಲ್ಲ. ಯಾಕೆಂದರೆ ನಮ್ಮದು ದಿನಕ್ಕೊಂದು ಕತೆಯನ್ನು ಆಧರಿಸಿದ ಧಾರಾವಾಹಿ. ಹೀಗಾಗಿ ಪ್ರತಿ ದಿನ ಎಲ್ಲ ಪಾತ್ರಧಾರಿಗಳು ಹಾಜ​ರಾತಿ ಕಡ್ಡಾ​ಯ. ಈ ಕಾರಣಕ್ಕೆ ಬೇರೆ ಧಾರಾವಾಹಿಗಳತ್ತ ಮುಖ ಮಾಡಲು ಆಗುತ್ತಿಲ್ಲ. ಈಗ ನಾನೂ ಸಹ ಸೆಲೆಬ್ರಿಟಿ. ನನ್ನ ಜತೆಗೂ ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಲಲ್ಲಿ ಎಂದೇ ಗುರುತಿಸುತ್ತಾರೆ. ಫ್ಲಾಪ್‌ ಡಾಕ್ಟರ್‌ ಪತ್ನಿ, ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುವ ಪೆದ್ದು ಹೆಣ್ಣು, ಇದಕ್ಕಾಗಿ ಬೇರೆಯವರು ಹಾಕುವ ಸ್ಕೀಮುಗಳಿಗೆ ಬಲಿಪಶು ಆಗುವ ಪಾತ್ರ ನನ್ನದು. 220ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿದ್ದು, ಎಲ್ಲರು ನನ್ನ ನಟಿ ಅಂತಲೇ ಗುರುತಿಸುತ್ತಾರೆ.

ಆಗರ್ಭ ಶ್ರೀಮಂತನಾಗಿ ಬಡ ಹುಡುಗಿಗೆ ಕಾಟ ಕೊಡುವ ನಟನ ಅಸಲಿ ಮುಖ!

ಪ್ರತಿಷ್ಠಿತ ಉದ್ಯಮಿ ನೀತಾ ಅಂಬಾನಿ ಅವರ ಶಾಲೆ, ಒಳ್ಳೆಯ ಹುದ್ದೆ, ಕೈ ತುಂಬಾ ಸಂಬಳದ ಉದ್ಯೋಗ ಬಿಟ್ಟು ಬಣ್ಣದ ಜಗತ್ತಿಗೆ ಬರುವುದಕ್ಕೆ ಕಾರಣ ನನ್ನ ಪತಿ ನಿಶಾಂತ್‌ ನಾಗವಾರ್‌ ಅವರ ಬೆಂಬಲ. ಅವರು ಕೂಡ ಅದೇ ಧೀರುಬಾಯಿ ಅಂಬಾನಿ ಇಂಟರ್‌ ನ್ಯಾಷನಲ… ಸ್ಕೂಲ…ನ ಇಂಗ್ಲಿಷ್‌ ವಿಭಾಗದ ಎಚ್‌ಒಡಿ ಆಗಿದ್ದವರು. ಅವರು ನನ್ನ ಉತ್ಸಾಹ ಮತ್ತು ನಟನೆ ಬಗ್ಗೆ ನನಗೆ ಇದ್ದ ಪ್ಯಾಷನ್‌ ನೋಡಿ ಕೆಲಸ ಬಿಡುವಾಗ ಅಪ್ಪ- ಅಮ್ಮ ಕೋಪ ಮಾಡಿಕೊಂಡರೂ ನನ್ನ ಪತಿ ಸಿಟ್ಟು ಮಾಡಿಕೊಳ್ಳದೆ ನನ್ನ ಕನಸಿಗೆ ಬೆಂಬಲವಾಗಿ ನಿಂತರು. ಆ ಕಾರಣಕ್ಕೆ ಪ್ರತಿಷ್ಠಿತ ಶಾಲೆಯ ಕೆಲಸ ಬಿಟ್ಟು ನಟನೆಯತ್ತ ಬರಲು ಸಾಧ್ಯವಾಯಿತು. ನನಗಾಗಿ ಅವರು ಕೂಡ ಮುಂಬಾಯಿ ಬಿಟ್ಟು ಈಗ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಗ್ರೀನ್‌ವುಡ… ಹೈ ಎನ್ನುವ ವಿಧ್ಯಾ ಸಂಸ್ಥೆಯಲ್ಲಿ ಪೊ›ಪೇಸರ್‌ ಆಗಿದ್ದಾರೆ.

ನನ್ನ ನಟನೆಗೆ ಶಕ್ತಿ ತುಂಬಿದ್ದು ನನ್ನ ರಂಗಭೂಮಿ ಹಿನ್ನೆಲೆ. ಜತೆಗೆ ಅನುಪಮ… ಖೇರ್‌ ಇನ್‌ಸ್ಟೂಟ್‌ನಲ್ಲಿ ಕಲಿತ ಪಾಠಗಳು. ಮುಂದೆ ಸಿನಿಮಾಗಳಲ್ಲೂ ನಟಿಸುವ ಜತೆಗೆ ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಬೇಕು, ಒಳ್ಳೆಯ ನಾಟಕಗಳಲ್ಲಿ ಅಭಿನಯಿಸಬೇಕು ಎನ್ನುವ ಗುರಿ ಇದೆ.

click me!