ಮೂರು ತಿಂಗಳಿನಲ್ಲಿ 45 ಕೆಜಿ ಲಾಸ್; ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆಂದು ಸತ್ಯ ಬಿಚ್ಚಿಟ್ಟ ರಾಮಾಚಾರಿ ರಿತ್ವಿಕ್!

By Vaishnavi Chandrashekar  |  First Published Jul 26, 2023, 4:00 PM IST

ತೂಕ ಇಳಿಸಿಕೊಂಡ ಅವಕಾಶ ಗಿಟ್ಟಿಸಿಕೊಂಡ ರಿತ್ವಿಕ್. ರಾಮಾಚಾರಿ ಧಾರಾವಾಹಿ ಆಡಿಷನ್ ನಡೆದಿದ್ದು ಹೇಗೆಂದು ರಿವೀಲ್ ಮಾಡಿದ ನಟ... 


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಿತ್ವಿಕ್ ಮೂಲತಃ ಮೈಸೂರಿನವರು. ರಂಗಭೂಮಿ ಹಿನ್ನಲೆ ಹೊಂದಿರುವ ನಟ ಆಡಿಷನ್ ಕೊಟ್ಟ ಅವಕಾಶ ಪಡೆದುಕೊಂಡಿದ್ದು ಹೇಗೆ? ನಿರ್ದೇಶಕರು ತೂಕ ಇಳಿಸಿಕೊಳ್ಳುವ ಚಾಲೆಂಜ್ ಹಾಕಿದ್ದು ಯಾಕೆ ಎಂದು ಹಂಚಿಕೊಂಡಿದ್ದಾರೆ. 

'ಕೊರೋನಾ ಸಮಯದಲ್ಲಿ ಎಲ್ಲರಂತೆ ಸಮಯ ವ್ಯರ್ತ ಮಾಡುವುದು ಬೇಡ ಎಂದು ಯುಟ್ಯೂಬ್ ಚಾನೆಲ್ ಆರಂಭಿಸಿದೆ. ಅದರಲ್ಲಿ ಒಂದಿಷ್ಟು ಆಕ್ಟಿಂಗ್ ಡೈಲಾಗ್‌ಗಳು, ಬೇರೆ ಬೇರೆ ನಾಟಗಳು ಮತ್ತು ಸಿನಿಮಾ ಡೈಲಾಗ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವುದಕ್ಕೆ ಶುರು ಮಾಡಿದೆ. ಆರಂಭದಲ್ಲಿ ಕೇವಲ ಬಲ್ಬ್ ಹಾಕಿ ವಿಡಿಯೋ ಮಾಡಿದ ಆಮೇಲೆ ಪೋನ್‌ ಲೈಟ್‌ ಬಳಸಿಕೊಂಡು ಮಾಡುತ್ತಿದ್ದೆ ದಿನ ಕಳೆಯುತ್ತಿದ್ದಂತೆ ರಿಂಗ್ ಲೈಟ್‌ ಪ್ರೊಫೆಶನಲ್ ಲೈಟ್‌ ತೆಗೆದುಕೊಳ್ಳಲು ಆರಂಭಿಸಿದೆ..ಅಲ್ಲಿಂದ ಗ್ರೀನ್ ಮ್ಯಾಟ್ ಹಾಕುವುದಕ್ಕೆ ಶುರು ಮಾಡಿದೆ ಮತ್ತು ನಾನೇ ಸೆಟ್ ಕ್ರಿಯೇಟ್ ಮಾಡುತ್ತಿದ್ದೆ. ದಿನವೂ ಒಂದೊಂದೆ ಹೆಜ್ಜೆ ಇಟ್ಟು ದಿನ ಕಳೆಯುತ್ತಿದ್ದಂತೆ ಒಳ್ಳೆ ವಿಡಿಯೋ ಮಾಡಲು ಶುರು ಮಾಡಿದೆ' ಎಂದು ರಿತ್ವಿಕ್ ಯುಟ್ಯೂಬ್ ಸಂದರ್ಶವೊಂದರಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಮತ್ತೆ ದಪ್ಪಗಾಗಿರುವೆ ರಾಮಾಚಾರಿ; ನಟ ರಿತ್ವಿಕ್‌ ಲುಕ್‌ ಬಗ್ಗೆ ತಲೆ ಕೆಡಿಸಿಕೊಂಡ ಹೆಣ್ಣುಮಕ್ಕಳು!

'ನನ್ನ ಯುಟ್ಯೂಬ್ ಜರ್ನಿಯಲ್ಲಿ ಏನಾಯ್ತು ನನ್ನ ವಿಡಿಯೋವನ್ನು ನಿರ್ದೇಶಕ ರಾಮ್‌ಜೀ ಸರ್ ನೋಡಿ ಅವರ ಟೀಮ್‌ಗೆ ಮೈಸೂರಿನ ಹುಡುಗ ಆಕ್ಟಿಂಗ್ ಚೆನ್ನಾಗಿ ಮಾಡುತ್ತಾನೆ ಕರೆ ಮಾಡಬೇಕು ಎಂದು ಹೇಳಿ ಬೇರೆ ಯಾವುದೋ ಸೀರಿಯಲ್‌ಗೆ ನನ್ನ ಆಡಿಷನ್ ಮಾಡಿದರು. ಆ ಸೀರಿಯಲ್‌ಗೆ ನನ್ನ ಪರ್ಸನಾಲಿಟಿ ಸೆಟ್ ಆಗಲ್ಲ ಹೀಗಾಗಿ ಮತ್ತೊಂದು ಆಡಿಷನ್ ಇದೆ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಎಂದು ಟೈಟಲ್ ಆಡಿಷನ್ ನಡೆಯುತ್ತಿದೆ ಬಂದು ಕೊಡು ಎಂದರು. ದಿನ ಕಳೆದ ಮೇಲೆ ಟೈಟಲ್‌ನ ರಾಮಚಾರಿ ಅಂತ ಮಾಡಿರುವುದು. ಆಡಿಷನ್ ಕೊಟ್ಟ ದಿನವೇ ಸೆಲೆಕ್ಟ್‌ ಆಗಿಬಿಟ್ಟಿ, ನನ್ನ ಜೀವನದ ಮೊದಲ ಆಡಿಷನ್‌ನಲ್ಲಿ ನಾನು ಸೆಲೆಕ್ಟ್‌. 10 ವರ್ಷ ನಾನು ಪಟ್ಟ ಕಷ್ಟಕ್ಕೆ ಪ್ರತಿಫಲ ಇಲ್ಲಿ ಸಿಕ್ಕಿದೆ, ಶ್ರಮ ಪಟ್ಟರೆ ಖಂಡಿತಾ ಅದಕ್ಕೆ ಉತ್ತರವಿದೆ ಎಂದು ತಿಳಿಯಿತ್ತು' ಎಂದು ರಿತ್ವಿಕ್ ಹೇಳಿದ್ದಾರೆ.  

'ಧಾರಾವಾಹಿಗೆ ಸೆಲೆಕ್ಟ್ ಆದಾಗ ನಾನು 120 ಕೆಜಿ ತೂಕವಿದ್ದೆ ತುಂಬಾ ತುಂಬಾ ದಪ್ಪ ಇದ್ದೆ. ಬೇರೆ ಯಾವ ನಿರ್ದೇಶಕರಾಗಿದ್ದರೂ ನನ್ನ ನೋಡಿ ನಕ್ಕಿ ಕಳುಹಿಸಿ ಬಿಡುತ್ತಿದ್ದರು  ನಿನ್ನ ಕೈಯಲ್ಲಿ ಆಗುವುದಿಲ್ಲ ಸೂಟ್ ಆಗಲ್ಲ ಎಂದು. ನಿನ್ನ ಕೈಯಲ್ಲಿ ಆಗುತ್ತೆ ಈ ಪಾತ್ರ ನೀನೇ ಮಾಡುತ್ತೀಯಾ ಜಿಮ್ ಸೇರಿಕೋ ಫೀಸ್‌ ಕೂಡ ನಾನೇ ಕೊಡುತ್ತೀನಿ ಒಟ್ಟಾರೆ ನೀನು ಸಣ್ಣ ಆಗಬೇಕು ಅಷ್ಟೆ ಎಂದು. ನನ್ನ ಮೇಲೆ ನಂಬಿಕೆ ಇಟ್ಟು ಮುಂದೆ ತಳ್ಳಿದರು. ಅವರನ್ನು ಮೆಚ್ಚಿಸಬೇಕು ಎಂದು ಅಷ್ಟೇ ಶ್ರಮ ಹಾಕಿದೆ. ಮೂರ್ನಾಲ್ಕು ತಿಂಗಳ ಜರ್ನಿಯಲ್ಲಿ ರಪ್ ಅಂತ 70 ಕೆಜಿ ತೂಕಕ್ಕೆ ಇಳಿಸಿಕೊಂಡೆ ಈ ಜರ್ನಿಯಲ್ಲಿ 45 ಕೆಜಿ ಲಾಸ್ ಆಯ್ತು. ಇನ್ನೂ ಸಣ್ಣಗಾಗುತ್ತಿರುವೆ ಜರ್ನಿ ನಡೆಯುತ್ತಿದೆ' ಎಂದಿದ್ದಾರೆ ರಿತ್ವಿಕ್. 

Mr & Mrs ರಾಮಾಚಾರಿ ಚಿತ್ರದ ಕಸ್ತೂರಿ- ಸುವರ್ಣ ನೆನಪಿದ್ಯಾ? ಈಗ ಹೇಗಿದ್ದಾರೆ ನೋಡಿ..

'ಬೆಳಗ್ಗೆ ರಾತ್ರಿ ಅನ್ನೋದು ಲೆಕ್ಕ ಮಾಡದೆ ಜಿಮ್‌ನಲ್ಲಿ ಸಮಯ ಕಳೆಯುತ್ತಿದ್ದೆ. ಜಿಮ್‌ ನನ್ನ ಎರಡನೇ ಮನೆ ಆಗಿತ್ತು.  ಬಾಯಿ ಕಟ್ಟಬೇಕು ಅನ್ನ ತಿನ್ನುವಂತಿಲ್ಲ ಸಕ್ಕರೆ ತಿನ್ನಬಾರದು. ಹೊರಗೆ ಏನೂ ತಿನ್ನಬಾರದು ಆದರೆ ತುಂಬಾ ಆಸೆ ಆಗುತ್ತಿರುತ್ತದೆ. ಒಂದು ಬೇಕು ಅಂದ್ರೆ ಮತ್ತೊಂದು ಕೊಡಬೇಕು ಎಷ್ಟೋ ತ್ಯಾಗ ಮಾಡಬೇಕಾಗುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಏನೂ ಯೋಚನೆ ಮಾಡಿದ ಜಿಮ್ ವರ್ಕೌಟ್ ಅಷ್ಟೆ ನನ್ನ ಗುರಿಯಾಗಿತ್ತು, ಅಷ್ಟು ಪ್ರಯತ್ನ ಪಟ್ಟಿದ್ದಕ್ಕೆ ನಾನು ಒಂದು ಹಂತಕ್ಕೆ ತಲುಪಿರುವೆ' ಎಂದು ಹೆಮ್ಮೆಯಿಂದ ರಿತ್ವಿಕ್ ಮಾತನಾಡಿದ್ದಾರೆ. 

click me!