ನನ್ನ ಹೆಂಡತಿ ಡವ್ ರಾಣಿ; ಶ್ವೇತಾ ಪ್ರಸಾದ್ ತರ್ಲೆ ವಿಡಿಯೋ ಶೇರ್ ಮಾಡಿದ ಪ್ರದೀಪ್!

Published : Jul 24, 2023, 10:52 AM IST
ನನ್ನ ಹೆಂಡತಿ ಡವ್ ರಾಣಿ; ಶ್ವೇತಾ ಪ್ರಸಾದ್ ತರ್ಲೆ ವಿಡಿಯೋ ಶೇರ್ ಮಾಡಿದ ಪ್ರದೀಪ್!

ಸಾರಾಂಶ

ಕಾರಿನಲ್ಲಿ ಪ್ರಯಾಣ ಮಾಡುವಾಗ ಹೆಂಡ್ತಿ ಡವ್ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ ಆರ್‌ಜೆ ಪ್ರದೀಪ್.....

ಫೇಮಸ್ ಕನ್ನಡ ರೆಡಿಯೋ ಜಾಕಿ, ಕನ್ನಡ ವ್ಲಾಗರ್, ಥಿಯೇಟರ್ ಆರ್ಟಿಸ್ಟ್ ಹಾಗೂ ನಿರ್ದೇಶಕ ಆರ್‌ಜೆ ಪ್ರದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಯಾವ ಪೋಸ್ಟ್ ಶೇರ್ ಮಾಡಿದರೂ ಅದಕ್ಕೊಂದು ಕ್ರಿಯೇಟಿವ್ ಫಾಂಟ್ ಮತ್ತು ಹೆಡ್‌ಲೈನ್‌ ಬಳಸಿ ಇನ್‌ಸ್ಟಾಗ್ರಾಂನ ಕಪರ್‌ಫುಲ್ ಆಗಿಟ್ಟುಕೊಂಡಿದ್ದಾರೆ. ಈಗ ಪ್ರದೀಪ್ ಸುದ್ದಿಯಲ್ಲಿರುವುದು ಪತ್ನಿ ತರಲೆ ವಿಡಿಯೋ ಶೇರ್ ಮಾಡಿರುವುದಕ್ಕೆ...

ಹೌದು! ಆರ್‌ಜೆ ಪ್ರದೀಪ್ ಪತ್ನಿ ಹೆಸರು ಶ್ವೇತಾ ಪ್ರಸಾದ್. ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಸ್ವಂತ ಬ್ಯುಸಿನೆಸ್‌ ನಡೆಸುತ್ತಿರುವ ಸ್ಟ್ರಾಂಗ್ ಮಹಿಳೆ. ಪ್ರದೀಪ್ ಮತ್ತು ಶ್ವೇತಾ ಕಾರಿನಲ್ಲಿ ಪ್ರಯಾಣ ಮಾಡುವಾಗ ಗೇರ್‌ ಬಳಿ ಮೊಬೈಲ್‌ ಇಟ್ಟು ವಿಡಿಯೋ ರೆಕಾರ್ಡ್ ಮಾಡಲಾಗಿದೆ, ಕಾರು ಓಡಿಸಿಕೊಂಡು ಏನೂ ಗೊತ್ತಿಲ್ಲದಂತೆ ಪ್ರದೀಪ್‌ ಇದ್ದರೆ ಕ್ಯಾಮೆರಾ ಕಂಡು ಶ್ವೇತಾ ಸಿಕ್ಕಾಪಟ್ಟೆ ತರಲೆ ಮಾಡಿದ್ದಾರೆ. ಈ ವಿಡಿಯೋವನ್ನು ಅಪ್ಲೋಡ್ ಮಾಡಿ 'ನನ್ನ ಡವ್ ರಾಣಿ'ಎಂದು ಕ್ಯಾಪ್ಶನ್ ನೀಡಲಾಗಿದೆ. ಇದು ಸಿಕ್ಕಾಪಟ್ಟೆ ಕ್ಯೂಟ್ ಆಗಿದೆ, ತರ್ಲೆ ಹೆಂಡ್ತಿ ಇದ್ರೆ ಜೀವನ ಸೂಪರ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕಿರುತೆರೆ ನಟಿ ಶ್ವೇತಾ ಪ್ರಸಾದ್‌ ಸೌದಿ ಅರೇಬಿಯಾ ಪ್ರವಾಸ; ಫೋಟೋಗಳು ವೈರಲ್ 

ಕಾಲೇಜ್‌ ದಿನಗಳಿಂದ ಶ್ವೇತಾ ಮತ್ತು ಪ್ರದೀಪ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಈ ಜೋಡಿ ಮದುವೆಯಾಗಿ ಹಲವು ವರ್ಷಗಳಾಗಿದೆ ಯಾಕೆ ಮಗು ಮಾಡಿಕೊಂಡಿಲ್ಲ ಅನ್ನೋ ಪ್ರಶ್ನೆ ದೊಡ್ಡದಾಗಿತ್ತು. ಇದಕ್ಕೆ ಶ್ವೇತಾ ಒಮ್ಮೆ ಉತ್ತರ ಕೊಟ್ಟಿದ್ದರು. ಆದರೆ ಈ ಬಗ್ಗೆ ಶ್ವೇತಾ ಯಾವುತ್ತು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ ಎಂದು ಶ್ವೇತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗಿನ್ನು ಮಗುವಾಗದೇ ಇರಲು ಕಾರಣವೇನು? ನನ್ನ ವೈಯಕ್ತಿಕ ವಿಚಾರ ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆಯುವುದು ಮಹಿಳೆಯ ಆಯ್ಕೆಯಾಗಿದೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ. ಓದು, ಮದುವೆ, ಮಗು, ಸಾಯುವುದು ಅಂತ ಏನು ಸೂತ್ರವಿಲ್ಲ.ಮಕ್ಕಳನ್ನು ಹೊಂದಿದ ಮಹಿಳಯರ ಬಗ್ಗೆ ಹೇಳುವುದಾದರೇ, ಕುಟುಂಬದವರ ಒತ್ತಡದಿಂದ, ಸಮಾಜ ಕೇಳುತ್ತಿದೆ ಎಂದು, ಅಮ್ಮ ಹೇಳಿದರು ಎನ್ನುವ ಕಾರಣಕ್ಕೆ. ಇವರೆಲ್ಲರಿಂದ ಒತ್ತಡವಿದೆ ಎನ್ನುವ ಕಾರಣಕ್ಕೆ ಎಂದು ಹೇಳುತ್ತಾರೆ.ಇದು ತುಂಬಾ ವೈಯಕ್ತಿಕ ಮತ್ತು ಮಗುವನ್ನು ಮಾಡಿಕೊಳ್ಳಲು ನಿರ್ಧರಿಸುವ ಪಯಣ ಹೆಣ್ಣಿಗೆ ತುಂಬಾ ಸುಂದರವಾದುದ್ದು. ಮಗುವನ್ನು ಪಡೆಯಲು ಮಹಿಳೆೇ ನಿರ್ಧರಿಸಿ ಪಡೆಯಬೇಕು. ಅವಳನ್ನು ನೀವು ನಿರ್ಧರಿಸಬೇಡಿ, ಅವಳ ನಿರ್ಧಾರವನ್ನು ಪ್ರಶ್ನೆ ಮಾಡದಿರಿ. ಇದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ' ಎಂದಿದ್ದಾರೆ.

 

NGO ಆರಂಭ: 

ಕಿರುತೆರೆಗೆ ಗುಡ್ ಬೈ ಹೇಳಿದ ಶ್ವೇತಾ ತಮ್ಮದೆ ಆನ್‌ಲೈನ್‌ ಬ್ಯುಸಿನೆಸ್ ಆರಂಭಿಸಿದ್ದರು. ಎಲ್ಲವೂ ಆರ್ಗ್ಯಾನಿಕ್  ಆಗಿದ್ದು ನೂರಾರು ಗ್ರಾಹಕರ ಗಮನ ಸೆಳೆಯಿತ್ತು.2023ರ ಸಂಕ್ರಾಂತಿ ಹಬ್ಬವನ್ನು ಶ್ವೇತಾ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.ಪೂಜೆ ಮುಗಿದ ನಂತರ ಶ್ವೇತಾ ಹೊಸ ಕೆಲಸ ಶುರು ಮಾಡಿದ್ದಾರೆ. ಅದುವೇ ತಂದೆ ಹೆಸರಿನಲ್ಲಿ ಎನ್‌ಜಿಒ ಆರಂಭಿಸಿ ಸೇವೆ ಮಾಡಲು ಮುಂದಾಗಿದ್ದಾರೆ. 'ನನ್ನ ಜೀವನದ ಸ್ಪೆಷಲ್ ದಿನ ಇದು. ಎನ್‌ಜಿಒ ಮೂಲಕ ನಾನು ಎಲ್ಲಾ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೆ ಅದರಂತೆ ಆರಂಭಿಸಿರುವೆ.ತಂದೆ ಪ್ರಸಾದ್ ಫೌಂಡೇಷನ್‌ ಮೂಲಕ ನಾನು ಸಮಾಜ ಸೇವೆ ಮಾಡಲು ಮುಂದಾಗುತ್ತಿರುವೆ. ಅನ್ನದಾನ ಮಾಡಲು ದೇವಸ್ಥಾನಗಳಿಗೆ ದೇಣಿಗೆಗಳು ಕೊಡಬೇಕು ಎಂದು ಹೇಳಿಕೊಟ್ಟವರು ಅಪ್ಪಹಸಿವು ನೀಗಿಸಲು ಮತ್ತು ನನ್ನ ಸುತ್ತಲಿರುವವರೆಲ್ಲರನ್ನು ಸಂತೋಷವಾಗಿರಿಸಲು ಮತ್ತು ಅದು ನಿಜವಾದ ಸಂತೋಷ' ಎಂದು ಶ್ವೇತಾ ಬರೆದುಕೊಂಡಿದ್ದರು. 

ಬಾಲಿವುಡ್‌ನಲ್ಲಿ ಶಿಲ್ಪಾ, ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಾ; 'ಇದೆಂತಾ ಹೇರ್‌ ಸ್ಟೈಲ್?'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿ ಗೆಲುವಿನ ಸಂಭ್ರಮ ಜೊತೆ ಮಹತ್ವದ ಸಂದೇಶ ರವಾನಿಸಿದ ಕಾವ್ಯ, ಫ್ಯಾನ್ಸ್ ಸಂಭ್ರಮ ಡಬಲ್
ಗಿಲ್ಲಿ ನಟ, ರಕ್ಷಿತಾ TO ಅಶ್ವಿನಿ ಗೌಡ, ಈ ಬಾರಿಯ ಬಿಗ್ ಬಾಸ್ ಲೈಫ್ ಜಿಂಗಾಲಾಲ