ಕಣ್ಣೆದುರೇ ತಮ್ಮನ ಸಾವು, 6 ದಿನಗಳ ನಂತರ ದುಬೈನಿಂದ ಮೃತದೇಹ ರವಾನೆ: 'ರಾಮಚಾರಿ' ನಟಿ ಕಣ್ಣೀರು

By Vaishnavi ChandrashekarFirst Published Dec 21, 2023, 4:07 PM IST
Highlights

ದುಬೈನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟ ರಾಮಚಾರಿ ಅಂಜಲಿ. ತಮ್ಮನ ಸಾವಿಗೆ ನಾನೇ ಕಾರಣ ಅಂದುಬಿಟ್ಟರು ಜನ....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಅಂಜಲಿ ತಮ್ಮ ಜೀವನದಲ್ಲಿ ನಡೆದಿರುವ ಘಟನೆವೊಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಸಾವಿಗೆ ನೀನೇ ಕಾರಣ ಎಂದು ಪದೇ ಪದೇ ಹೇಳುವ ಜನರಿಗೆ ಸತ್ಯ ಬಿಚ್ಚಿಟ್ಟಿದ್ದಾರೆ. 

'ನನ್ನ ತಮ್ಮ ಮನೆ ಕಟ್ಟಿದ್ದ...ಬ್ಯಾಂಕ್‌ಗಳಿಗೆ ಹಣ ಕಟ್ಟಬೇಕಿತ್ತು. ದುಬೈನಲ್ಲಿ ಮಗನಿಗೆ ಕೆಲಸ ಸಿಕ್ಕರೆ ಸಹಾಯ ಆಗುತ್ತದೆ ಎಂದು ಅಮ್ಮ ಸದಾ ಹೇಳುತ್ತಿದ್ದರು. ಎಲ್ಲೋ ಕಳೆದು ಹೋಗಿರುವ ಹುಡುಗ ಒಬ್ಬ ನಮಗೆ ಸಿಕ್ಕಿದ...ಆತನನ್ನು ನಾವೇ ಸಾಕಿ ನನ್ನ ಅಸಿಸ್ಟೆಂಟ್‌ ಆಗಿ ಕೆಲಸಕ್ಕೆ ಬರೆದುಕೊಂಡು ಹೋಗುತ್ತಿದ್ದೆ. ನಾನು ಮದುವೆ ಮಾಡಿಕೊಂಡು ದುಬೈಗೆ ಹೋದ ಮೇಲೆ ತುಂಬಾ ಬೇಸರ ಮಾಡಿಕೊಂಡಿದ್ದ ಅಂತ ನನ್ನ ಗಂಡನಿಗೆ ಹೇಳಿ ದುಬೈನಲ್ಲಿ ಕೆಲಸ ಕೊಡಿಸಿದ್ದು. ಅವನು ಕೆಲಸ ಮಾಡಿ ದುಡಿದು ದುಡಿದು ಚೆನ್ನಾಗಿ ಹಣ ಸಂಪಾದನೆ ಮಾಡಿದ್ದ. ಹೀಗಾಗಿ ನನ್ನ ತಮ್ಮ ಕೂಡ ಚೆನ್ನಾಗಿ ದುಡಿದು ಬ್ಯಾಂಕ್ ಹಣ ತೀರಿಸಬೇಕು ಎಂದು ಅಮ್ಮ ಹೇಳುತ್ತಿದ್ದರು ಅಂತ ನನ್ನ ಗಂಡನಿಗೆ ಹೇಳಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದೆ' ಎಂದು ನಿರ್ದೇಶಕ ಕಮ್ ನಟ ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಅಂಜಲಿ ಮಾತನಾಡಿದ್ದಾರೆ. 

Latest Videos

ಸದಾ ಸೀರೆಯಲ್ಲಿರುವ ರಾಮಚಾರಿ ತಾಯಿ; ಅಂಜಲಿ ಮಾಡರ್ನ್‌ ಲುಕ್‌ಗೆ ನೆಟ್ಟಿಗರು ಶಾಕ್!

'ಸುಮಾರು ಒಂದು ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿ ಚೆನ್ನಾಗಿ ಸೆಟಲ್ ಆದ. ಆದರೆ ಒಂದು ದಿನ ಕಾರ್ಯಕ್ರಮವೊಂದಕ್ಕೆ ನಾನು ಹೋಗಬೇಕಿತ್ತು....ನನ್ನ ಕಾರಿನಲ್ಲಿ ಕುಳಿತುಕೊಂಡು ಆಮೇಲೆ ಬೇಡ ಎಂದು ಹೇಳಿ ಮತ್ತೊಂದು ಕಾರಿನಲ್ಲಿ ಹೋದಾ. ನಾನು ಹಿಂದಿನ ಕಾರಿನಲ್ಲಿ ಬರುತ್ತಿದ್ದೆ. ಕಾರ್ಯಕ್ರಮ ನಡೆಯುವ ಜಾಗ ತಲುಪಿದ ಮೇಲೆ ಆತನಿಗೆ ಒಂದು ಫೋನ್ ಬರುತ್ತದೆ. ಕಾರಿನಲ್ಲಿ ಕುಳಿತು ಕರೆ ಸ್ವೀಕರಿಸುವ ಬದಲು ಹೊರಗೆ ಬಂದು ಫೋನ್‌ನಲ್ಲಿ ಮಾತನಾಡಲು ಶುರು ಮಾಡುತ್ತಾನೆ. ತಮ್ಮ ನಿಂತಿದ್ದ ಜಾಗದಲ್ಲಿ ಎತ್ತರಕ್ಕೆ ಕಾರ್ಯಕ್ರಮದ ವೆಲ್ಕಂ ಆರ್ಚಾ ಬೋರ್ಡ್ ಹಾಕಿದ್ದರು...ಅದು ನೇರವಾಗಿ ಅವನ ಮೇಲೆ ಬಿದ್ದು ಸ್ಥಳದಲ್ಲಿ ಮೃತಪಟ್ಟ' ಎಂದು ಅಂಜಲಿ ಹೇಳಿದ್ದಾರೆ. 

ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಚಾರು; ಸೊಂಟದ ಮೇಲೆ ನೆಟ್ಟಿಗರ ಕಣ್ಣು!

'ದುಬೈನಲ್ಲಿ ಈ ಘಟನೆ ನನ್ನ ಕಣ್ಣು ಎದುರೇ ನಡೆಯಿತ್ತು. ತಮ್ಮನ ಸಾವಿಗೆ ನಾನೇ ಕಾರಣ ಅನ್ನೋ ರೀತಿಯಲ್ಲಿ ಮಾತನಾಡಲು ಶುರು ಮಾಡಿದರು. ಆತನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದು ನಾನೇ ಅಲ್ವಾ ಅಂತ. ಭಾರತದಲ್ಲಿ ಇದ್ದ ಅಮ್ಮನಿಗೆ ಮಗನನ್ನು ನೋಡುವ ಆಸೆ ಹೀಗಾಗಿ ಮೃತದೇಹವನ್ನು ಭಾರತಕ್ಕೆ ತರಬೇಕಿತ್ತು. ಶುಕ್ರವಾರ ಈ ಘಟನೆ ನಡೆಯಿತ್ತು...ದುಬೈನಲ್ಲಿ ಕಂಪ್ಲೇಂಟ್ ಆಗಿ ಪೋಸ್ಟ್‌ ಮಾರ್ಟಮ್ ಮಾಡಿ ಬುಧವಾರ ಕೊಟ್ಟರು. ದುಬೈನಲ್ಲಿ ಇಷ್ಟು ವರ್ಷ ಇದ್ದೆ...ಅಲ್ಲಿ ರೂಲ್ಸ್‌ ಅಂದ್ರೆ ರೂಲ್ಸ್‌. ಹೆಣ್ಣು ಮಕ್ಕಳು ತುಂಬಾ ಸುರಕ್ಷಿತವಾಗಿ ಬದುಕಬಹುದು. ನಾವು ನೋವಿನಲ್ಲಿ ಇದ್ದ ಕಾರಣ ಅವರೇ ಮನೆಗೆ ಬಂದು ವಿಚಾರಿಸುತ್ತಿದ್ದರು' ಎಂದಿದ್ದಾರೆ ಅಂಜಲಿ. 

'ತಮ್ಮನ ಸಾವಿಗೆ ನ್ಯಾಯ ಸಿಗಬೇಕು ಎಂದು ಕೇಸ್ ಹಾಕಿದೆ. ಅವನು ಕೆಲಸ ಮಾಡುತ್ತಿದ್ದ ಕಂಪನಿ ಕಾಂಪ್ಸೇಶನ್ ಕೊಟ್ಟರು ಆದರೆ ಕಾರ್ಯಕ್ರಮ ಆಯೋಜಿಸಿದವರು? ಬೋರ್ಸ್‌ ಸರಿಯಾಗಿ ಹಾಕಲಾಗಿತ್ತು ಹಾಗೆ ಹೀಗೆ ಅಂತ ವಾದ ಮಾಡಿದರು. ದುಬೈ ನ್ಯಾಯಾಲಯ....ಅವನಿಗೆ ಕಾಂಪನ್ಸೇಷನ್ ಕೊಡಿಸಿತ್ತು' ಎಂದು ಅಂಜಲಿ ಹೇಳಿದ್ದಾರೆ. 

 

click me!