ಬಿಗ್​ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?

By Suvarna News  |  First Published Dec 21, 2023, 12:18 PM IST

ತೆಲಗು ಬಿಗ್​ಬಾಸ್​ನಲ್ಲಿ ವಿನ್ನರ್​ ಆಗಿದ್ದ ರೈತನ ಮಗ ಪಲ್ಲವಿ ಪ್ರಶಾಂತ್​ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಅರೆಸ್ಟ್​ ಆಗಿದ್ದು, ಜೈಲು ಸೇರಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 


ಕಳೆದ ವಾರವಷ್ಟೇ ಪಲ್ಲವಿ ಪ್ರಶಾಂತ್​ ಎನ್ನುವ ಹೆಸರು ಭರ್ಜರಿ ಸದ್ದು ಮಾಡಿತು. ಇದಕ್ಕೆ ಕಾರಣ, ಬಿಗ್​ಬಾಸ್​​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈತನ ಮಗನೊಬ್ಬ ವಿನ್ನರ್​ ಆಗಿರುವ ಕಾರಣದಿಂದ. ತೆಲಗು ಬಿಗ್​ಬಾಸ್​ ಸೀಸನ್​ 7 ಕಪ್​ ಗೆದ್ದು ಪಲ್ಲವಿ ಪ್ರಶಾಂತ್​ ಎಲ್ಲರ ಪ್ರೀತಿ ಗಳಿಸಿದರು. 105 ದಿನಗಳ ಕಾಲ ನಡೆದ ಶೋನಲ್ಲಿ ಪಲ್ಲವಿ ಪ್ರಶಾಂತ್ ಗೆಲುವು ಸಾಧಿಸಿದರು. ಗೆಲಗು ಬಿಗ್ ಬಾಸ್ ಪ್ರಶಸ್ತಿ ವಿಜೇತರಿಗೆ 50 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಟ್ಯಾಕ್ಸ್​ ಎಲ್ಲಾ ಕಟ್ಟಾಗಿ  ಪಲ್ಲವಿ ಪ್ರಶಾಂತ್ ಅವರಿಗೆ 35 ಲಕ್ಷ ರೂಪಾಯಿ ಬಹುಮಾನ ಬಂದಿತು. ರೈತನ ಮಗನೊಬ್ಬ ಈ ರೀತಿಯ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂತು. ಆದರೆ ಖುಷಿಯಿಂದ ಕುಣಿದು ಕುಪ್ಪಳಿಸಿ, ಎಲ್ಲರ ಮೆಚ್ಚುಗೆ ಗಳಿಸಬೇಕಿದ್ದ ಪಲ್ಲವಿ ಪ್ರಶಾಂತ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಪ್ರಶಾಂತ್ ಜೊತೆಗೆ ಅವರ ಸಹೋದರ ಮನೋಹರ್ ಅವರನ್ನು ಕೂಡ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪ್ರಶಾಂತ್ ಹಾಗೂ ಮನೋಹರ್ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಅವರನ್ನು ಚಂಚಲಗುಡ ಜೈಲಿಗೆ ಸ್ಥಳಾಂತರಿಸಲಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ,  ಪಲ್ಲವಿ ಪ್ರಶಾಂತ್​ ವಿನ್ನರ್​ ಆಗುತ್ತಿದ್ದಂತೆಯೇ,  ಅವರ ಬೆಂಬಲಿಗರು ಬಿಗ್​ ಬಾಸ್​ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಫ್ಯಾನ್ಸ್​ ಪುಂಡಾಟ ಮೆರೆದಿದ್ದರು. ಕಾರು ಬಸ್ಸುಗಳನ್ನು, ಪೀಠೋಪಕರಣಗಳನ್ನು ಜಖಂ ಮಾಡಿದ್ದರು. ಈ ಪ್ರಕರಣದಲ್ಲಿ ಪಲ್ಲವಿ ಪ್ರಕಾಶ್‌ ಅವರನ್ನು  ಆರೋಪಿಯನ್ನಾಗಿ ಮಾಡಲಾಗಿದೆ. ಬಿಗ್‌ಬಾಸ್‌ ಮನೆಯಿಂದ ಹಿಂಬಾಗಿಲ ಮೂಲಕ ಹೋಗುವಂತೆ ಪೊಲೀಸರು ತಿಳಿಸಿದರೂ ತೆರೆದ ವಾಹನದಲ್ಲಿ ತನ್ನ ಹಿಂಬಾಲಕರ ಜತೆ ಹೋಗಿರುವುದರಿಂದ  ಪೊಲೀಸರು ಕೇಸ್​ ದಾಖಲು ಮಾಡಿದ್ದರು.  ಇದಾದ ಬಳಿಕ ಪಲ್ಲವಿ ಪ್ರಕಾಶ್​ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು.  

Latest Videos

undefined

ಬಿಗ್​ಬಾಸ್ ವಿನ್ನರ್​ಗೆ ಇದೆಂಥ ಫಜೀತಿ! ಗೆಲ್ಲುತ್ತಿದ್ದಂತೆಯೇ ಕೇಸ್​ ದಾಖಲು- ತಲೆ ಮರೆಸಿಕೊಂಡ್ರಾ ಪಲ್ಲವಿ ಪ್ರಶಾಂತ್​?

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದರು. ಹೊರಗಡೆ ಜಗಳ ಆಗುತ್ತಿರುವುದರಿಂದ ಹಿಂದಿನ ಬಾಗಿಲಿನಿಂದ ಹೋಗುವಂತೆ ಪೊಲೀಸರು ಮಾತ್ರವಲ್ಲದೆ ಬಿಗ್‌ಬಾಸ್‌ ಆಡಳಿತವೂ ತಿಳಿಸಿತ್ತು. ಆದರೆ, ಈ ಆದೇಶ, ಸೂಚನೆ ಮರೆತ ಪಲ್ಲವಿ ಪ್ರಶಾಂತ್‌ ತೆರೆದ ಜೀಪ್‌ನಲ್ಲಿ ಜಗಳ, ಪುಂಡಾಟ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡಿದ ಆರೋಪವನ್ನು ಈಗ ಪಲ್ಲವಿ ಪ್ರಶಾಂತ್‌ ಎದುರಿಸುತ್ತಿದ್ದಾರೆ. ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್​ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. 

ಆದರೆ ನಿನ್ನೆ ಬೆಳಗ್ಗೆಯಷ್ಟೇ ಪಲ್ಲವಿ ಪ್ರಶಾಂತ್​  ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ‘ನಿನ್ನೆಯಿಂದ ನಾನು ಮನೆಯಲ್ಲೇ ಇದ್ದೆ. ಎಲ್ಲಿಯೂ ತಲೆ ಮರೆಸಿಕೊಂಡಿಲ್ಲ. ಫೋನ್​ ಹಾಳಾಗಿದ್ದರಿಂದ ಸ್ವಿಚ್​ ಆಫ್​ ಆಗಿತ್ತು’ ಎಂದಿದ್ದರು. ನಾನು ತಪ್ಪು ಮಾಡಿಲ್ಲ. ನನ್ನ ವಿಡಿಯೋಗಳನ್ನು ತಿರುಚಿ ಸೋಷಿಯಲ್‌ ಮೀಡಿಯಾದಲ್ಲಿ ಹರಡಲಾಗುತ್ತಿದೆ. ಪಲ್ಲವಿ ಪ್ರಶಾಂತ್‌ ರೈತನ ಮಗ, ಆತ ಎಂದಿಗೂ ತಪ್ಪು ಮಾಡುವುದಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ರಾತ್ರಿ ಅವರನ್ನು ಬಂಧಿಸಲಾಗಿದೆ. ಸುಮಾರು ಆರು ಗಂಟೆಗಳ ಕಾಲ ಪೊಲೀಸರು ಪಲ್ಲವಿ ಪ್ರಶಾಂತ್​ ಅವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಹರಾಜು! ಕಾರ್ತಿಕ್​ಗೆ ಭಾರಿ ಡಿಮಾಂಡ್​- ಕೊನೆಗೂ ಯಾರ ಕೈ ಸೇರಿದ್ರು?

click me!