ರಾಜಾ ರಾಣಿ ವೇದಿಕೆ ಮೇಲೆ 8 ತಿಂಗಳ ಹಿಂದೆ ಅಡವಿಟ್ಟಿದ್ದ ಮಾಂಗಲ್ಯವನ್ನು ಬಿಡಿಸಿಕೊಟ್ಟ ಪತಿ ಪ್ರಶಾಂತ್.
'ಸಿಲ್ಲಿ ಲಲ್ಲಿ' ಧಾರಾವಾಹಿಯ ಜನಪ್ರಿಯ ಜೋಡಿ ಪ್ರಶಾಂತ್ ಮತ್ತು ರೂಪಾ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಸಂಚಿಕೆಯಲ್ಲೂ ವಿಭಿನ್ನವಾಗಿ ಗುರುತಿಸಿಕೊಂಡಿರುವ ಈ ಜೋಡಿ, ಈಗಾಗಲೇ ಐದನೇ ವಾರ ತಲುಪಿದ್ದಾರೆ. ರಿಯಾಲಿಟಿ ಶೋಗಿಂತ ರಿಯಲ್ ಲೈಫ್‌ಗೆ ಹೆಚ್ಚು ಕನೆಕ್ಟ್ ಆಗುವ ಈ ಕಾರ್ಯಕ್ರಮದಲ್ಲಿ ಒಂದು ಅದ್ಭುತ ಕ್ಷಣ ಎದುರಾಗಿದೆ.
ಹೌದು! ಈ ವೀಕೆಂಡ್ ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ಪತಿಯರು ತಮ್ಮ ಹೆಂಡತಿಗೆ ತಿಳಿಯದಂತೆ ಒಂದು ಸರ್ಪ್ರೈಸ್ ನೀಡಬೇಕು. ಅವರ ಬಹು ಕಾಲದ ಆಸೆಯನ್ನು ಕೂಡ ಈಡೇರಿಸಬಹುದೆಂಬ ಟಾಸ್ಕ್ ನೀಡಲಾಗಿತ್ತು. ಇದೇ ಸೂಕ್ತ ಸಮಯ ಎಂದು ನಟ ಪ್ರಶಾಂತ್ ಪತ್ನಿಗೆ ತಾಂಬೂಲದ ಜೊತೆಗೆ ಮಾಂಗಲ್ಯ ತಂದು ಮುಂದಿಡುತ್ತಾರೆ.
ಮಕ್ಕಳಿಗೆ ಲಾಲಿ ಹಾಡು ಹಾಡಿದ ನಿವೇದಿತಾ-ಚಂದನ್; ಇಶಿತಾ ಯಾಕಮ್ಮ ಈ ಹಾಡು?ಕಳೆದ ವರ್ಷ ಮನೆ ಖರೀದಿಸಬೇಕು ಸಾಲ ಪಡೆಯಲು ಬ್ಯಾಂಕ್ ಟು ಬ್ಯಾಂಕ್ ಓಡಾಡುತ್ತಾರೆ ಪ್ರಶಾಂತ್. ಕಲಾವಿದರಾದ ಕಾರಣ ಯಾವ ಬ್ಯಾಂಕ್ ಕೂಡ ಸಾಲ ನೀಡಲು ಮುಂದಾಗುವುದಿಲ್ಲ. ಈ ಕಾರಣಕ್ಕೆ ರೂಪಾ ತಮ್ಮ ಮಾಂಗಲ್ಯವನ್ನು ನೀಡಿ ಸಾಲ ಪಡೆದುಕೊಳ್ಳುತ್ತಾರೆ. ವೇದಿಕೆ ಮೇಲೆ ಪ್ರಶಾಂತ್ ಮಾಂಗಲ್ಯ ತಂದದ್ದನ್ನು ನೋಡಿ ನಟಿ ತಾರಾ ಶಾಕ್ ಅಗುತ್ತಾರೆ. 'ಆರ್ಟಿಸ್ಟ್ ಅಂತ ಬಂದಾಗ ಬ್ಯಾಂಕ್‌ನಲ್ಲಿ ಲೋನ್ ಸಿಗಲ್ಲ ಅದಕ್ಕೆ ರೂಪಾ ಮಾಂಗಲ್ಯ ಸಲ ಕೊಟ್ಟಿದ್ರು,' ಅಂತ ಪ್ರಶಾಂತ್ ಹೇಳುತ್ತಾರೆ. 'ನನಗೆ ಮಾಂಗಲ್ಯ ಮತ್ತೆ ವಾಪಸ್ ಬಂದೇ ಬರುತ್ತೆ ಅಂತ ಗೊತ್ತಿತ್ತು. ಆದರೆ ಇಷ್ಟು ಬೇಗ ಅಂದುಕೊಂಡಿರಲಿಲ್ಲ,' ಎಂದು ರೂಪಾ ಭಾವುಕರಾಗುತ್ತಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ವೇದಿಕೆ ಮೇಲೆ ನಿಂತು ಅವರಿಬ್ಬರೂ ಮತ್ತೆ ಮದುವೆ ಆಗುವಂತೆ ಮಾಡಿ ಆಶೀರ್ವಾದಿಸುತ್ತಾರೆ. ಇಡೀ ಸಂಚಿಕೆ ಮನ ಮುಟ್ಟುವಂತಿತ್ತು, ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇ ವಿಡಿಯೋ ವೈರಲ್ ಆಗುತ್ತಿದೆ.