
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಜ ರಾಣಿ' ರಿಯಾಲಿಟಿ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲೊಂದು. ರಿಯಲ್ ಜೋಡಿಗಳ ರಿಯಾಲಿಟಿ ಲೈಫ್ ಹೇಗಿದೆ? ಅವರಿಬ್ಬರ ನಡುವೆ ಹೊಂದಾಣಿಕೆ ಎಷ್ಟರ ಮಟ್ಟಿಗಿದೆ ಎಂದು ಈ ಶೋ ಮೂಲಕ ಅವರ ಅಭಿಮಾನಿಗಳಿಗೆ ತಿಳಿಯುತ್ತಿದೆ.
24 ಮತ್ತು 25ನೇ ತಾರೀಖು ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ಜೋಡಿಯೊಂದು ಒಂದೇ ಏಪ್ರಾನ್ ಧರಿಸಿ ಒಬ್ಬರು ಅಡುಗೆ ಮಾಡಬೇಕು, ಮತ್ತೊಬ್ಬರು ಹೇಳಿಕೊಡಬೇಕು. ಈ ಟಾಸ್ಕ್‌ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಮಜ್ಜಿಗೆ ಹುಳಿ ಮಾಡುವುದ ಹೇಳಿಕೊಡ ಬೇಕಿತ್ತು.
ಮಜ್ಜಿಗೆ ಹುಳಿ ಎಂದು ಓದುತ್ತಿದ್ದಂತೆ ನಿವೇದಿತಾ ಗೌಡ, ಚಂದನ್‌ಗೆ ಮಾಡಲು ಗೊತ್ತಾ ಎಂದು ಪ್ರಶ್ನೆ ಮಾಡುತ್ತಾರೆ. ತಕ್ಷಣವೇ ಸೃಜನ್ ಲೋಕೇಶ್ 'ಅಪ್ಪ ಅದು ಮಜ್ಜಿಗೆ ಹುಳಿ, ಹುಳಿ ಮಜ್ಜಿಗೆ ಅಲ್ಲ,' ಎಂದು ಕಾಲೆಳೆಯುತ್ತಾರೆ. 'ಮಜ್ಜಿಗೆ ಎಷ್ಟು ಕುದಿಸಬೇಕು? ನಿಂಬೆ ಹಣ್ಣು ಹಾಕಬೇಕು ಅಲ್ವಾ? ಮಜ್ಜಿಗೆ ಹುಳಿ ಗ್ರೀನ್ ಇದೆ. ಅದು ಹಳದಿ ಬಣ್ಣ ಇರಬೇಕು ಅಲ್ವಾ?' ಎಂದು ನಿವೇದಿತಾ ಗೌಡ ನಾನ್ ಸ್ಟಾಪ್ ಪ್ರಶ್ನೆ ಕೇಳುತ್ತಾಳೆ. 'ನಮ್ಮ ಊರಿನ ಕಡೆ ಹೀಗೆ ಮಾಡುವುದು, ನಿಂಬೆ ಹಾಕುತ್ತಾರೆ,' ಎಂದು ಚಂದನ್ ಹೇಳುತ್ತಾ ಗ್ಯಾಸ್ ಸ್ಟೌ ಮೇಲಿದ್ದ ಪಾತ್ರೆಯನ್ನು ಬೀಳಿಸುತ್ತಾರೆ. ತಕ್ಷಣವೇ ಅಲ್ಲಿದ್ದ ಪ್ರತಿಯೊಬ್ಬರೂ ಚೆಲ್ಲಿದರು ಮಜ್ಜಿಗೆಯಾ ಎಂದು ಹಾಡಿನ ರೀತಿಯಲ್ಲಿ ರೇಗಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.