ಪ್ರಶಾಂತ್ ಮೇಲೆ  ನೂರನೇ ದಿನ ತಾಳ್ಮೆ ಕಳಕೊಂಡ ವೈಷ್ಣವಿ!

Published : Jul 21, 2021, 12:18 AM IST
ಪ್ರಶಾಂತ್ ಮೇಲೆ  ನೂರನೇ ದಿನ ತಾಳ್ಮೆ ಕಳಕೊಂಡ ವೈಷ್ಣವಿ!

ಸಾರಾಂಶ

* ಬಿಗ್ ಬಾಸ್ ಮನೆಯಲ್ಲಿ ಚೀಲ  ಹೊರುವ ಟಾಸ್ಕ್ * ತಾಳ್ಮೆ ಕಳೆದುಕೊಂಡ ವೈಷ್ಣವಿ ಗೌಡ * ಪ್ರಶಾಂತ್ ಸಂಬರಗಿ ಮೇಲೆ ಕೈ ಎತ್ತಲು ಮುಂದಾದ ವೈಷ್ಣವಿ * ಅಂಕ ಗಳಿಕೆ ಮೇಲೆ ಎಲ್ಲರ ಕಣ್ಣು

ಬೆಂಗಳೂರು(ಜು. 20)    ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರಿಗೂ ಅಂಕಗಳಿಕೆ ಹೋರಾಟ..   ಬಿಗ್ ಬಾಸ್ ಮನೆಗೆ ನೂರು ದಿನ .. ಇದೇ ಮೊದಲ ಸಾರಿ ವೈಷ್ಣವಿ ಗೌಡ ತಾಳ್ಲೆ ಕಳೆದುಕೊಂಡ ಪ್ರಸಂಗಕ್ಕೂ ನೂರನೇ ದಿನ ಕಾರಣವಾಯಿತು.

ಬಿಗ್ ಬಾಸ್ ಚೀಲ ಹೊರುವ ಟಾಸ್ಕ್ ನೀಡಿದ್ದರು. ಮೊದಲಿನಿಂದಲೂ ಸ್ಪರ್ಧೆ ಬಿರುಸಿನಿಂದಲೇ ಕೂಡಿತ್ತು. ಒಬ್ಬರ ಹಿಂದೆ ಒಬ್ಬರು ಓಡುತ್ತ ಎದುರಿದ್ದವರ ಚೀಲವನ್ನು ಹರಿದು ಅದರೊಳಗಿನ ಥರ್ಮೋಕೋಲ್ ಖಾಲಿ ಮಾಡಬೇಕಿತ್ತು.

ಪ್ರಿಯಾಂಕಾಗೆ ಮಿಡಲ್ ಫಿಂಗರ್ ತೋರಿಸಿದ ಚಕ್ರವರ್ತಿಗೆ ಪಾಠ

ಈ ವೇಳೆ ಹಿಂದೆ ಇದ್ದ ಪ್ರಶಾಂತ್ ಮೇಲೆ ಸಿಟ್ಟಾದ ವೈಷ್ಣವಿ ಏರುಧ್ವನಿಯಲ್ಲಿ ಮಾತನಾಡಿದ್ದು ಅಲ್ಲದೆ ಕೈ ಮಾಡಲು ಮುಂದಾಗಿದ್ದಾರೆ.   ಒಂದು ಕಡೆ ನಾಯಕಿ ದಿವ್ಯಾ ಸುರೇಶ್ ಸಹ ಪ್ರಶಾಂತ್ ಗೆ ವಾರ್ನಿಂಗ್ ನೀಡುತ್ತಿದ್ದರು. ಆದರೆ ವೈಷ್ಣವಿ ಗೌಡ ನಡೆದುಕೊಂಡ ರೀತಿಗೆ ಪ್ರಶಾಂತ್ ಬೇಸರ ವ್ಯಕ್ತಪಡಿಸಿದರು.

ಕೈಕೆಸರಾದರೆ ಬಾಯಿ ಮೊಸರು ಮುತ್ತು ಹುಡುಕುವ ಟಾಸ್ಕ್ ಜಾರಿಯಲ್ಲಿಯೇ ಇದೆ. ಚೀಲದ ಟಾಸ್ಕ್ ನಲ್ಲಿಯೂ ಜಯಶಾಲಿಯಾದ ಅವರವಿಂದ್ ಐದು  ನೂರು ಅಂಕ ಬುಟ್ಟಿಗೆ ಹಾಕಿಕೊಂಡರು.  ಕನ್ನಡದ ಬಿಗ್ ಬಾಸ್ ಫಿನಾಲೆ ಹಂತಕ್ಕೆ ಬಂದಿದ್ದು  ಅಂಕ ಗಳಿಗೆ ಟಾಸ್ಕ್ ನಲ್ಲಿ ಕೊನೆಯಲ್ಲಿರುವ ವ್ಯಕ್ತಿ ನೇರವಾಗಿ ನಾಮಿನೇಟ್ ಆಗುತ್ತಾರೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ