BBK9 ಕಂಟೆಂಟ್‌ಗೂ ಕೇರ್‌ ಮಾಡದೆ TRPಗೂ ತಲೆ ಕೆಡಿಸಿಕೊಳ್ಳದೆ ಇರೋದು ನೇಹಾ ಗೌಡ ಒಬ್ಬಳೇ'

By Vaishnavi Chandrashekar  |  First Published Oct 31, 2022, 2:10 PM IST

ನಾವು ನಾವಾಗಿ ಬಿಗ್ ಬಾಸ್‌ ಮನೆಯಲ್ಲಿ ಉಳಿದುಕೊಳ್ಳುವುದು ತುಂಬಾನೇ ಕಷ್ಟ ಅದರಲ್ಲಿ genuine soul ಅಂದ್ರೆ ನೇಹಾ.....


ಬಿಗ್ ಬಾಸ್‌ ಸೀಸನ್9ರಿಂದ ಮನೆಯಿಂದ ಹೊರ ನಡೆದಿರುವ 5ನೇ ಸ್ಪರ್ಧಿ ನೇಹಾ ಗೌಡ. 5 ವಾರಗಳ ಕಾಲ ಯಾವುದೇ ಜಗಳ ಇಲ್ಲದೆ ಪ್ರತಿಯೊಬ್ಬರ ಜೊತೆನೂ ಸಂತೋಷವಾಗಿದ್ದುಕೊಂಡು ಮನೆಯಿಂದ ಒಳ್ಳೆಯ ಸ್ಪರ್ಧಿಯಾಗಿ ಹೊರ ನಡೆದಿರುವುದು ನೇಹಾ ಗೌಡ. ಬೆಸ್ಟ್‌ ಫ್ರೆಂಡ್‌ ಅನುಪಮಾ ಮನೆಯಲ್ಲಿದ್ದರೂ ಗುಂಪು ಮಾಡಬಾರದು ಎಲ್ಲರ ಜೊತೆ ಚೆನ್ನಾಗಿರಬೇಕು ಎನ್ನುವುದು ನೇಹಾ ಪಾಲಿಸಿ. ನಾಲ್ಕುವಾರವೂ ಕ್ಯಾಪ್ಟನ್ ಆಗಲು ನೇಹಾ ಸಖತ್ ಕಷ್ಟ ಪಟ್ಟಿದ್ದಾರೆ ಆದರೆ ಎಲ್ಲಿ ತಪ್ಪಾಗುತ್ತಿದೆ? ಯಾಕೆ ಕಡಿಮೆ ವೋಟ್ ಬರುತ್ತಿದೆ ಎಂದು ಅಮೂಲ್ಯ ಗೌಡ ಜೊತೆ ಚರ್ಚಿಸುತ್ತಾರೆ.

BBK9 ಅಮೂಲ್ಯ ಗೌಡ ಕೈಯಲ್ಲಿದೆ 3 ಇರುವೆ ಟ್ಯಾಟೂ; ರೂಪೇಶ್ ಶೆಟ್ಟಿ ಶಾಕಿಂಗ್ ರಿಯಾಕ್ಷನ್

Tap to resize

Latest Videos

ಅಮೂಲ್ಯ: ಆರಂಭದಲ್ಲಿ ನನಗೆ ಕಾವ್ಯಾ ತುಂಬಾನೇ ಇನೋಸೆಂಟ್ ಅನಿಸುತ್ತಿದ್ದಳು ಆದರೆ ಇಲ್ಲ ಸಮಯ ಸಂದರ್ಭ ಬಂದಾಗ ಆಕೆ ಯೋಚನೆ ಮಾಡುತ್ತಾಳೆ ಹೇಗಿ ಇದ್ದರೆ ಬೆಸ್ಟ್‌ ಎಂದು ಪ್ಲ್ಯಾನ್ ಮಾಡುತ್ತಾಳೆ ಆದರೆ ನೀನು (ನೇಹಾ) ಹಾಗಲ್ಲ.ನಿನಗೂ ಚೆನ್ನಾಗಿ ಯೋಚನೆ ಮಾಡಲು ಬರುತ್ತದೆ ಆದರೆ ಯಾವುದೇ ರೀತಿ ಡ್ರಾಮಾ ಮಾಡದೆ ಕಂಟೆಂಟ್‌ಗೋಸ್ಕರ ನಡೆದುಕೊಳ್ಳಬೇಕು ಟಿಆರ್‌ಪಿ ಬಗ್ಗೆ ಯೋಚನೆ ಮಾಡದೆ ನೀನು ನೀನಾಗಿ ಬಿಗ್ ಬಾಸ್ ಮನೆಯಲ್ಲಿರುವೆ. ನನಗೆ ಈ ಕ್ಯಾರೆಕ್ಟ್‌ ಹುಡುಗರ ತುಂಬಾನೇ ಇಷ್ಟ ಆಗುತ್ತೆ...
ನೇಹಾ: ನನಗೆ ನನ್ನ ಕ್ಯಾರೆಕ್ಟರ್ ಇಷ್ಟ ಆಗುತ್ತಿಲ್ಲ ನನ್ನ ಬಿಟ್ಟು....
ಅಮೂಲ್ಯ: ಇಲ್ಲ ನಾನು ತುಂಬಾ ಸಲ ಯೋಚನೆ ಮಾಡಿದ್ದೀನಿ. ಎಲ್ಲೋ ಒಂದು ಕಡೆ ನಾನು ಕೂಡ ಜನರು ನೋಡುತ್ತಿರುತ್ತಾರೆ ಈ ರೀತಿ ನಡೆದುಕೊಳ್ಳಬಾರದು ಈ ರೀತಿ ಇರಬಾರದು ಎಂದು ಯೋಚನೆ ಮಾಡುತ್ತೀನಿ ಆದರೆ ನೀನು ಮಾತ್ರ..ನಾನು ಇರೋದೆ ಹೀಗೆ ನಾನು ಯೋಚನೆ ಮಾಡೋದೇ ಹೀಗೆ ಅನ್ನೋ ರೀತಿ ವ್ಯಕ್ತಿ. ನಿನ್ನ ಬಿಟ್ಟು ಈ ಮನೆಯಲ್ಲಿ ಯಾರೂ ಈ ರೀತಿ ಇಲ್ಲ ನನ್ನನ್ನು ಕೂಡ ಲೆಕ್ಕ ಹಾಕಿಕೊಂಡು ಮಾತನಾಡುತ್ತಿರುವುದು ಏಕೆಂದರೆ ಒಂದೊಂದು ಘನಟೆಗಳಲ್ಲಿ ನನ್ನ ಬಗ್ಗೆ ನಾನು ಯೋಚನೆ ಮಾಡುತ್ತೀನಿ. ನಾನು ನಾನಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವೆ ಆದರೆ ಕಂಟೆಂಟ್ ಕೊಡಬೇಕು ಅಂತ ಥಿಂಕ್ ಮಾಡಿಲ್ಲ ಆ ತರ ಮಾಡಿದ್ದರೂ ನಾನು ತುಂಬಾನೇ ಫೇಕ್ ಆಗಿ ಕಾಣಿಸುತ್ತೀನಿ . ಎಷ್ಟೊಂದು ಕಡೆ ಮಾಡುವುದನ್ನು ಕಂಟ್ರೋಲ್ ಮಾಡಿದ್ದೀನಿ ..
ನೇಹಾ: ಬಿಗ್ ಬಾಸ್ ಮನೆಯಲ್ಲಿ ನಾನು ಕಂಟ್ರೋಲ್ ಕೂಡ ಮಾಡಿಲ್ಲ.
ಅಮೂಲ್ಯ: ದಿವ್ಯಾ ಜೊತೆ ನಾನು ಎಷ್ಟು ಬೇಕೋ ಅಷ್ಟು ಮಾತನಾಡುವುದು. ಆಕೆ ಕೂಡ ತುಂಬಾ ಯೋಚನೆ ಮಾಡುತ್ತಾಳೆ. ಅನುಪಮಾ ಬದಲಾಗಿದ್ದಾಳೆ ರಾಕಿ ಕೂಡ ಬದಲಾಗಿದ್ದಾರೆ ಅವನು ಇರುವ ರೀತಿ ಒಂದು ಚೂರು ಬಿಬಿ ಮನೆಯಲ್ಲಿ ಇಲ್ಲ 
ನೇಹಾ: ರಾಕೇಶ್ ಎಷ್ಟೊಂದು ಸಲ ಬದಲಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಬಾಣಗಳು ಬೇಕಾದಷ್ಟಿದ್ರೂ ನೇಹಾ ಗೌಡ ಬಿಲ್ಲು ಕಳೆದುಕೊಂಡಿದ್ದಾರೆ:

ಸುದೀಪ್: ಬಾಣಗಳು ಬೇಕಾದಷ್ಟು ಇದ್ರೂ ಕೂಡ ನೇಹಾ ಅವ್ರು ಬಿಲ್ಲು ಕಳೆದುಕೊಂಡಿದ್ದಾರೆ?

ನೇಹಾ ಗೌಡ:  100% ಅಂತ ನಾನು ಹೇಳುವುದಿಲ್ಲ ಆದರೆ ನಾನು ನನ್ನ ಸಂಪೂರ್ಣ ಶ್ರಮ ಹಾಕುತ್ತಿರುವೆ. ಕೆಲವೊಂದು ಸಲ ಹೇಗಾಗುತ್ತದೆ ಅಂದ್ರೆ ಇಲ್ಲಿ ಆಗಲೇ ಅನುಭವ ಹೊಂದಿರುವವರು ಇರುವುದರಿಂದ ಅವರಿಗೆ ತುಂಬಾ ಪ್ರಶ್ನೆ ಕೇಳ್ತೀನಿ ತಪ್ಪಿದ್ದರೆ ಅಲ್ಲೇ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೀನಿ. ನನ್ನ ಬಗ್ಗೆ ಇಲ್ಲಿ ಇರುವವರಿಗೆ ಈ ರೀತಿ ಅಭಿಪ್ರಾಯ ಇರುವುದಿಂದ ನಾನು ಕಂಡಿತಾ ನಾನು ಬದಲಾಗುತ್ತೀನಿ. ಯಾರಿಗೂ ನನ್ನ ಬದಲಾವಣೆ ಅನಿಸಬಾರದು.

click me!