ಏನ್ ಏನ್ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಜನರ ಗುರು? 8 ಕಾಲಿರುವ ಇರುವೆ ನೋಡಿ ಶಾಕ್ ಆದ ರೂಪಿ....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರಲ್ಲಿ ಜನಪ್ರಿಯ ಕಿರುತೆರೆ ನಟಿ ಅಮೂಲ್ಯ ಗೌಡ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಟಫ್ ಫೈಟ್ ಆಂಡ್ ಕಾಮ್ ಗರ್ಲ್ ಆಗಿ ಗುರುತಿಸಿಕೊಂಡಿರುವ ಅಮೂಲ್ಯ ಇದೀಗ ಲವ್ ಗುಂಗಿನಲ್ಲಿ ಬಿದ್ದಿದ್ದಾರೆ. ರಾಕೇಶ್ ಅಡಿಗ ಮತ್ತು ಅರುಣ್ ಸಾಗರ್ ಜೊತೆ ಕೋಲ್ಡ್ ವಾರ್ ಇದ್ದರೂ ಇನ್ನಿತ್ತರ ಸ್ಪರ್ಧಿಗಳ ಜೊತೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ನಡುವೆ ಅಮೂಲ್ಯ ಮೇಕಪ್, ಕೂದಲು ಮತ್ತು ಡ್ರೆಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಆದರೆ ಆಕೆ ಕೈಯಲ್ಲಿರುವ ಟ್ಯಾಟು ಏನೆಂದರೆ ರೂಪೇಶ್ ಪ್ರಶ್ನೆ ಮಾಡಿದ್ದಾರೆ.
BBK9 ಅರೇ! ಪಾತ್ರೆ ತೊಳಿತಿದ್ದೀರಾ ಗಾಡಿ ತೊಳಿತಿದ್ದೀರಾ? ರಾಕೇಶ್- ಅಮೂಲ್ಯ ನಡುವೆ ಸ್ಪಾರ್ಕ್!
ರೂಪೇಶ್ - ಅಮೂಲ್ಯ ಮಾತುಕತೆ:
ಅಮೂಲ್ಯ: ಇರಲಾರದ ಇರುವೆ ಬಿಟ್ಕೊಂಡ್ರು ಅಂತಾರೆ ಆ ಮಾತುಗಳನ್ನು ಕೇಳಿದ್ದೀರಾ?
ರೂಪೇಶ್: ನಿಮ್ಮ ಕೈಯಲ್ಲಿರುವುದು ಇರುವೆ ಎಂದು ಯಾರು ಹೇಳುತ್ತಾರೆ
ಅಮೂಲ್ಯ: ಮೂರು ಇರುವೆ ಇದೆ. ಚಿಂಟು-ಮಿಂಟು- ಪಿಂಟು
ರೂಪೇಶ್: ಇರುವೆನಾ ಇದು? ಬಿಗ್ ಬಾಸ್ ಇದನ್ನು ಇರುವೆ ಅಂತ ಯಾರಾದರೂ ಒಪ್ಪಿಕೊಂಡರೆ ಎಲ್ಲಿ ಬೇಕಿದ್ದರೂ ಟ್ಯಾಟು ಹಾಕಿಸಿಕೊಳ್ಳುತ್ತೀನಿ.
ರೂಪೇಶ: ಇರುವೆಗೆ ಇಷ್ಟೊಂದು ಕಾಲಿದೆ ಎಂದು ಯಾರು ಹೇಳುತ್ತಾರೆ?
ಅಮೂಲ್ಯ: ಇರುವೆಗಳಿಗೆ ಇರೋದೆ 8 ಕಾಲುಗಳು
ರೂಪೇಶ್: ಇರುವೆಗಳಿಗೆ ನಾಲ್ಕು ಕಾಲುಗಳು ಇರುವುದು..
ಅಮೂಲ್ಯ: ಮತ್ತೆ ಎಷ್ಟು ಕಾಲುಗಳು ಇರೋದು?
ರೂಪೇಶ್: ನೀವೇ ಡಿಸೈನ್ ಕೊಟ್ಟು ಮಾಡಿರುವುದಾ ಅಥವಾ ಅವರೇ ಮಾಡಿರುವುದಾ?
ಅಮೂಲ್ಯ: ಟ್ಯಾಟು ಹಾಕುವವರು ಯಾವುದೋ ಜ್ಞಾನದಲ್ಲಿ ಮಾಡಿರುವುದು ಅದಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ
ರೂಪೇಶ್: ನೋಡಲು ಇರುವೆ ರೀತಿ ಇಲ್ಲ..ಪಕ್ಕಾ ಜೇಡಾ ಅಥವಾ ಚೆಳು ರೀತಿ ಇದೆ.
ಅಮೂಲ್ಯ: ನನ್ನ ಕೈಯಲ್ಲಿ ಇರುವುದು ಇರುವೆ ಆದರೆ ಅದು ಮಲಗಿಕೊಂಡಿದೆ.
ರೂಪೇಶ್: ಗೋಟ್ ಮಲಗಿಕೊಂಡಿದೆ ಅಂತ ಹೇಳಿ ಇರುವೆ ಎಂದು ಟ್ಯಾಟುಗೆ ಅವಮಾನ ಮಾಡಬೇಡಿ.
ರೂಪೇಶ್ ಶೆಟ್ಟಿ ಮತ್ತು ಅಮೂಲ್ಯ ಗೌಡ ಚರ್ಚೆ ನೋಡಿಕೊಂಡು ರೂಪೇಶ್ ರಾಜಣ್ಣ ಬಾತ್‌ರೂಪ್ ಏರಿಯಾದಲ್ಲಿ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದರು.
ಕಳ್ಳತನ ಮಾಡುತ್ತಿದ್ದ ಅಮೂಲ್ಯ ಗೌಡ:
'ಅಣ್ಣ ನಾನು ಅವಾಗವಾಗ ಮನೆಯಲ್ಲಿ ದುಡ್ಡು ಎತ್ತುತ್ತಿದ್ವಿ. ನಮ್ಮ ಮನೆಯಲ್ಲಿ ಜಾಸ್ತಿ ಹಣ ಕದ್ರೆ ಅದು ನಮ್ಮ ಅಣ್ಣ ಮಾಡಿದ್ದಾನೆ ಅಂತ. 100 ರೂಪಾಯಿ ಕಡಿಮೆ ಕದ್ದರೆ ಅದು ನಾನು ಮಾಡಿದೆ ಅಂತ. ಅವನೇ ಮಾಡಿದ್ದರೂ ಅದು ನನ್ನ ಮೇಲೆ ಬರುತ್ತಿತ್ತು. ಇದೆಲ್ಲಾ ಕಾಲೇಜ್ ಟೈಂನಲ್ಲಿ ಆಗಿರುವುದು. ಅಮ್ಮಂಗೂ ಗೊತ್ತು ನಾವು ದುಡ್ಡು ಎತ್ತುತ್ತಿದ್ವಿ ಅಂತ ಅವರು ಬಿಡು ಮಕ್ಕಳು ಅಲ್ವಾ ಅಂತ ಸುಮ್ಮನಿದ್ದರು. ಒಂದು ದಿನ ಅಣ್ಣ 6 ಸಾವಿರ ರೂಪಾಯಿ ಎತ್ಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಹೇಗೆ ಅಂದ್ರೆ ಒಂದು ತಿಂಗಳು ಆ ಹಣದ ಬಗ್ಗೆ ಮಾತನಾಡುತ್ತಿರಲಿಲ್ಲ ಆಮೇಲೆ ನಾವು ಅವತ್ತು ಅಲ್ಲಿ ಹುಡುಕುತ್ತಿದ್ದ ಹಣ ನಾನೆ ಎತ್ಕೊಂಡಿದ್ದು ಅಂತಿದ್ವಿ. ಆ 6 ಸಾವಿರ ರೂಪಾಯಿ ಅಣ್ಣನ ಪ್ಯಾಂಟ್‌ನಲ್ಲಿತ್ತು. ಹೊರಗಡೆ ಹೋಗಿ ಬಂದಿದ್ದ. ಅವತ್ತು ಅವನ ಜೇಬಿಗೆ ಕೈ ಹಾಕಿದ್ದರೆ ಹಣ ಜಾಸ್ತಿ ಇದೆ...ಮನೆಯಲ್ಲಿ ಯಾರೇ ಕದ್ದಿದ್ದರು ಅದು ನಮಗೆ ಗೊತ್ತಿರುತ್ತೆ ಏಕೆಂದರೆ ಒಂದು ಅವನು ಮಾಡಬೇಕು ಇಲ್ಲ ನಾನು ಮಾಡಬೇಕು. ನಾನು ಏನ್ ಮಾಡಿದೆ... ಅವನೇ ಪಿಕ್‌ಪಾಕೆಟ್ ಮಾಡಿರುವುದು. ನಾನು ಅವನ ಪಾಕೆಟ್‌ನಿಂದ ತೆಗೆದುಕೊಂಡೆ. ಗೊತ್ತಾದರೆ ಬೈಯುತ್ತಾನೆ ಎಂದು ಸಣ್ಣದಾಗಿ ಜೇಬಿಗೆ ತೂತು ಮಾಡಿದೆ ಅಂದ್ರೆ ಎಲ್ಲೂ ತೂತಾಗಿ ಬಿದಿತ್ತು ಅಂದುಕೊಳ್ಳಬೇಕು ಅಂತ. ಒಂದು ವಾರ ಅವನು ನನ್ನ ಜೊತೆ ಮಾತನಾಡಲಿಲ್ಲ. ಒಂದು ತಿಂಗಳು ಆದಮೇಲೆ ಅಮ್ಮಂಗೆ ಹೇಳಿದ. ಅಮ್ಮ ನಿನ್ನ ಮಗಳು ಎಷ್ಟು ಛತ್ರಿ ಅಂದ್ರೆ ನಾನೇ ನಿಮ್ಮ ಲಾಕರ್‌ನಿಂದ ಹಣ ಎತ್ತಿರುವುದು ...ಅವಳು ನನ್ನ ಪಾಕೆಟ್‌ನಿಂದ ತೆಗೆದುಕೊಂಡು ಪಾಕೆಟ್ ತೂತು ಮಾಡಿಟ್ಟಿದ್ದಾಳೆ' ಎಂದು ಸತ್ಯ ಹೇಳಿದ.