ಆನ್‌ಸ್ಕ್ರೀನ್‌ ಮಿಥುನ್ ಬೇರೆ, ನಾನು ಬೇರೆ ಎಂದು ಪೋಷಕರು ಮನವರಿಕೆ ಮಾಡಿದ್ದರು: ಸ್ವಾಮಿನಾಥನ್ ಆನಂತರಾಮನ್

Suvarna News   | Asianet News
Published : Oct 16, 2021, 04:20 PM IST
ಆನ್‌ಸ್ಕ್ರೀನ್‌ ಮಿಥುನ್ ಬೇರೆ, ನಾನು ಬೇರೆ ಎಂದು ಪೋಷಕರು ಮನವರಿಕೆ ಮಾಡಿದ್ದರು:  ಸ್ವಾಮಿನಾಥನ್ ಆನಂತರಾಮನ್

ಸಾರಾಂಶ

ಮಾಡಲ್‌ ಆಗಬೇಕು ಅಂದುಕೊಂಡವನು ಹೇಗೆ ಸಿನಿ ಜರ್ನಿ ಆರಂಭಿಸಿದೆ, ಆನ್‌ಸ್ಕ್ರೀನ್‌ ಪಾತ್ರದ ಪ್ರಭಾವ ಎಷ್ಟಿರುತ್ತದೆ ಎಂದು ಹಂಚಿಕೊಂಡ ಮಿಥುನ ರಾಶಿ ಸ್ವಾಮಿನಾಥನ್   

ಸದಾ ಮೂಗಿನ ತುದಿಯಲ್ಲಿ ಕೋಪ (Anger), ಹಣ ದುಪ್ಪಟ್ಟು ಮಾಡುವ ಹುಮ್ಮಸ್ಸು, ತಾಯಿ (Mother) ಮಾತೇ ವೇದವಾಕ್ಯ,  ನಾನೇ ಕರೆಕ್ಟ್‌ ಎನ್ನು ಮನೋಭಾವದಲ್ಲಿರುವ 'ಮಿಥುನ ರಾಶಿ'(Mithuna Rashi) ನಟ ಸ್ವಾಮಿನಾಥನ್ ಅನಂತರಾಮನ್‌ (Swaminathan Anantharaman) ತಮ್ಮ ರೀಲ್ ಲೈಫ್ (Reel Life) ಪಾತ್ರ ನಿಜ ಜೀವನದ ಮೇಲೆ ಎಷ್ಟರ ಮಟ್ಟಕ್ಕೆ ಪರಿಣಾಮ ಬೀರುತ್ತದೆ ಎಂದು ಹಂಚಿಕೊಂಡಿದ್ದಾರೆ. 

ಮೊದಲ ಸಿನಿಮಾ; ಮಂಗಳೂರಿನ ಹಳೇ ಮನೇಲಿ ಶೂಟಿಂಗ್ ಆರಂಭಿಸಿದ ಸ್ವಾಮಿನಾಥನ್ ಆನಂತರಾಮನ್!

'ಆರಂಭದಲ್ಲಿ ನನಗೆ ಆ್ಯಕ್ಟಿಂಗ್ (Acting) ಬಗ್ಗೆ ಒಂದು ಚೂರು ಮಾಹಿತಿ ಇರಲಿಲ್ಲ. ನನ್ನ ನಿರ್ದೇಶಕರು ನನಗೆ ಗೈಡ್ ಮಾಡಿ ಈ ವರೆಗೂ ಕರೆದುಕೊಂಡು ಬಂದಿದ್ದಾರೆ. ಚಿತ್ರೀಕರಣ ಮಾಡುವಾಗಲೂ ನನಗೆ ಯಾವುದೇ ತಾಂತ್ರಿಕ (Technical) ವಿಚಾರದ ಬಗ್ಗೆ ಮಾಹಿತಿ ಇರಲಿಲ್ಲ.  2019 ಡಿಸೆಂಬರ್ 14 ಅಥವಾ 15ರಂದು ನಾನು ಮಿಥುನರಾಶಿ ಚಿತ್ರೀಕರಣ ಆರಂಭಿಸಿದೆ. ನನ್ನ ವೃತ್ತಿ ಜೀವನದ (Career) ಹೊಸ ಜರ್ನಿ ಬಗ್ಗೆ ನಾನು ತುಂಬಾನೇ ಎಕ್ಸೈಟ್ ಆಗಿದ್ದೆ. ಈ ಪಾತ್ರಕ್ಕೆ ಬೇಕಾದ ರೀತಿಗೆ ನಾನು ಬದಲಾಗಬೇಕಿತ್ತು ಅದು ತುಂಬಾನೇ ಥ್ರಿಲಿಂಗ್ ಕ್ಷಣ' ಎಂದು ಇ-ಟೈಮ್ಸ್ ಜೊತೆ ಸ್ವಾಮಿನಾಥನ್ ಮಾತನಾಡಿದ್ದಾರೆ. 

'ಧಾರಾವಾಹಿ ಅರಂಭದಲ್ಲಿ ನಾನು ತುಂಬಾನೇ ಅಹಂಕಾರದ (Arrogant) ಹುಡುಗ. ಮಿಥುನ್ ಅವನದ್ದೇ ಲೋಕದಲ್ಲಿರುತ್ತಾನೆ. ಮುಂಗೋಪಿ, ಜೀವನದಲ್ಲಿ ನಡೆದಿರುವ ಕಹಿ ಘಟನೆಗಳಿಂದ ಅವನಿಗೆ ಹಣ (Money) ಮಾಡುವುದು ಮುಖ್ಯ ಆಗಿರುತ್ತದೆ. ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ, ನಾನು ಎಲ್ಲೋ ನನ್ನನ್ನು ನಾನು ಕಳೆದುಕೊಂಡೆ. ಎಷ್ಟರ ಮಟ್ಟಕ್ಕೆ ಅಂದ್ರೆ ನನ್ನ ಬಗ್ಗೆ ನಾನೇ ಮರೆತು ಹೋಗಿದ್ದೆ.  ಮಿಥುನರಾಶಿ ಆರಂಭವಾಗಿ ಎಂಟು ತಿಂಗಳ ನಂತರ ನಾನೇ ಬೇರೆ ವ್ಯಕ್ತಿಯಾಗಿ ಕಾಣಿಸಿಕೊಳ್ಳಲು ಆರಂಭಿಸಿದೆ. ಆನ್‌ಸ್ಕ್ರೀನ್ (Onscreen) ಪಾತ್ರನ ರಿಯಲ್ ಲೈಫ್ (Real Life)ಪಾತ್ರ ಅನ್ನು ರೀತಿ ವರ್ತಿಸುತ್ತಿದ್ದೆ. ಆದರೆ ಒಂದು ದಿನ ನನ್ನ ಪೋಷಕರು ರಿಯಾಲಿಟಿ ತಿಳಿಸಿಕೊಟ್ಟರು. ನನ್ನ ಗುಣದಲ್ಲಿ ಆದ ಬಲಾವಣೆ ಕಂಡು ಅವರು ಹೇಳಿದ್ದರು ನನ್ನ ಆನ್‌ಸ್ಕ್ರೀನ್ ಕ್ಯಾರೆಕ್ಟರ್ ಮತ್ತು ರಿಯಲ್ ಲೈಫ್‌ ನಡುವೆ ಒಂದು ಲೈನ್ ಇರಲಿ ಎಂದು. ನಾನು ಯಾವ ರೀತಿ ಬದಲಾಗಿದ್ದೆ ಎಂದು ತಿಳಿಸಿಕೊಟ್ಟರು. ಇದೊಂದು eye-opener ದಿನ ಆಗಿತ್ತು,' ಎಂದು ಸ್ವಾಮಿನಾಥನ್ ಮಾತನಾಡಿದ್ದಾರೆ. 

ಆಯುರ್ವೇದ ವೈದ್ಯನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಮಿಥುನ ರಾಶಿ' ಸ್ವಾಮಿನಾಥನ್ ಅನಂತರಾಮನ್!

'ನಾನು ಪಾತ್ರಕ್ಕೆ ಗ್ರೇ ಶೇಡ್ ಇತ್ತು. ಕೆಲವೊಮ್ಮೆ ವೀಕ್ಷಕರು ನನ್ನ ಜೊತೆ ಮಾತನಾಡುವಾಗ ನನ್ನ ಆನ್‌ಸ್ಕ್ರೀನ್‌ ಹೆಂಡ್ತಿಗೆ ತೊಂದರೆ ಕೊಡಬೇಡಿ, ಎಂದು ಹೇಳುತ್ತಿದ್ದರು. ಕೆಲವು ಎಪಿಸೋಡ್‌ಗಳಲ್ಲಿ ನನ್ನ ಪಾತ್ರದ ಗುಣ ಬದಲಾಗಿದೆ. ತುಂಬಾನೇ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ನನ್ನ ಫ್ಯಾಮಿಲಿ (Family) ಜೊತೆ ಹೊರಗಿದ್ದಾಗ ಕೆಲವು ಬಂದು ಒಳ್ಳೆಯ ವಿಚಾರ ಹೇಳಿದಾಗ ಖುಷಿ ಆಗುತ್ತದೆ. ನನ್ನ ಮುಂದಿನ ಸಿನಿಮಾದ ಎರಡು ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವೆ. ಸಿನಿಮಾದಲ್ಲೂ ಹರಿಣಿ (Harini) ಅವರು ತಾಯಿ ಪಾತ್ರ ಮಾಡುತ್ತಿದ್ದಾರೆ. ಅವರು ನನಗೆ ತುಂಬಾನೇ ಸಪೂರ್ಟ್ ಮಾಡುತ್ತಾರೆ.  ಸದ್ಯ ವೃತ್ತಿ ಜೀವನದ ಕಡೆ ಗಮನ ನೀಡುತ್ತಿರುವೆ. ಮೊದಲು ಸೆಟಲ್ ಆಗಬೇಕು ಆಮೇಲೆ ಪರ್ಸನಲ್ ಲೈಫ್‌ (Personal LIfe) ಬಗ್ಗೆ ಚಿಂತೆ ಮಾಡುವೆ,' ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?