
ಕಿರುತೆರೆಯ ಫೇಮಸ್ ಕಾರ್ಯಕ್ರಮ ಕಲರ್ಸ್ ಅನುಬಂಧ ಅವಾರ್ಡ್ಸ್ 2021 ಪ್ರಸಾರವಾಗುತ್ತಿದೆ. ಧಾರವಾಹಿ ಪ್ರಿಯರ ನೆಚ್ಚಿನ ಕಾರ್ಯಕ್ರಮ ಈ ಬಾರಿ ಹೆಚ್ಚು ಕಳೆಗಟ್ಟಿದೆ. ಬಹಳಷ್ಟು ಕಾಮೆಡಿ, ಫನ್, ಡ್ಯಾನ್ಸ್, ಭಾವನಾತ್ಮಕ ಸಂದರ್ಭಗಳು ಸೇರಿಕೊಂಡು ಕಾರ್ಯಕ್ರಮ ವೀಕ್ಷಕರ ಹಿಡಿದಿಟ್ಟಿದೆ.
ಕಲರ್ಸ್ ಕನ್ನಡ ಅವಾರ್ಡ್ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡಾ ಭಾಗಿಯಾಗಿದ್ದು ರಾಜರಾಣಿ ತಂಡದಿಂದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೊತೆಯಾಗಿ ಭಾಗವಹಿಸಿದ್ದಾರೆ. ಸೃಜನ್ ನಿರೂಪಣೆಯಲ್ಲಿ ನಿವೇದಿತಾ ಗೇಮ್ ಆಡಿದ್ದು ಇದರಲ್ಲಿ ಬಹಳಷ್ಟು ಫನ್ನಿ ಮೊಮೆಂಟ್ಸ್‌ಗಳಿದ್ದವು.
ಅನುಬಂಧ ಅವಾರ್ಡ್ಸ್ 2021 (Anubandha Awarda 2021)ನಲ್ಲಿ ನಿವೇದಿತಾ ಗಾಢ ಹಸಿರು ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ. ಅವರ ಪಿ ರ್ಯಾಪರ್ ಚಂದನ್ ಶೆಟ್ಟಿ ಕೂಡಾ ಸೇಮ್ ಪಿಂಚ್ ಮಾಡ್ಕೊಂಡು ಪತ್ನಿಗೆ ಸಾಥ್ ಕೊಟ್ಟಿದ್ದಾರೆ. ಸೆಲೆಬ್ರಿಟಿ ಜೋಡಿ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಕಾರ್ಯಕ್ರಮದಲ್ಲಿ ಚಂದ ಹೆಚ್ಚಿಸಿದ್ದಾರೆ.
ಡ್ರೆಸ್ ಭಾರ ಕೇಳಿದ್ದಕ್ಕೆ ಎತ್ತಿ ನೋಡಿ ಎಂದ ನಿವೇದಿತಾ..! ಚಂದನ್ ರಿಯಾಕ್ಷನ್ ಹೀಗಿತ್ತು
ಕಲರ್ಸ್ ಕನ್ನಡದ ರಿಯಾಲಿಟಿ ಶೋ ರಾಜಾ-ರಾಣಿ ಮೂಲಕ ಸಖತ್ ಫನ್ ಹಾಗೂ ಮನೋರಂಜನೆ ಕೊಡ್ತಿರೋ ಬಿಗ್‌ಬಾಸ್ ಜೋಡಿ ಈಗ ಅನುಬಂಧ ವೇದಿಕೆಯಲ್ಲೂ ಖುಷಿಯಾಗಿ ಕಾರ್ಯಕ್ರಮ ಎಂಜಾಯ್ ಮಾಡಿದ್ದಾರೆ. ನಿವೇದಿತಾ ಗೌಡ ಸೃಜನ್ ನಿರೂಪಣೆಯಲ್ಲಿ ಗೇಮ್ ಆಡಿದ್ದು ಫನ್ನಿಯಾಗಿ ಉತ್ತರಗಳನ್ನು ಕೊಟ್ಟಿದ್ದಾರೆ.
ಮೈಸೂರು ಕಡೆಯ ಮೂರು ಬೈಗುಳಗಳನ್ನು ಹೇಳಿ ಎಂದು ಸೃಜನ್ ಕೇಳಿದ್ದಕ್ಕೆ ನಿವೇದಿತಾ ಕೊಟ್ಟ ಉತ್ತರ ಕೇಳಿದ್ರಾ ? ಪಿ ಚಂದನ್ ಶೆಟ್ಟಿ ಕೂಡಾ ಹುಬ್ಬೇರಿಸಿದ್ದಾರೆ. ಬೈಗುಳ ಹೇಳಿ ಎಂದ ತಕ್ಷಣ ಲೂಸು, ಕೋತಿ, ನಾಯಿ ಎಂದು ಬೆಲ್ ಹೊಡೆದಿದ್ದಾರೆ ನಿವೇದಿತಾ. ನಿವೇದಿತಾ ಉತ್ತರ ಕೇಳಿ ಫನ್ನಿ ರಿಯಾಕ್ಷನ್ಸ್ ಕೊಟ್ಟಿದ್ದಾರೆ ಚಂದನ್ ಶೆಟ್ಟಿ.
ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!
ಇನ್ನೂ ಬಹಳಷ್ಟು ತರದ ಪ್ರಶ್ನೆಗಳಿಗೆ ನಿವೇದಿತಾ ಉತ್ತರಿಸಿದ್ದು ಮೂರು ಕುಡಿಯುವ ಪಾನೀಯಗಳು, ಬಟ್ಟೆ ಒಗಿಯೋಕೆ ಬೇಕಾಗಿರುವ ಮೂರು ವಸ್ತುಗಳು ಹಾಗೂ ತಡವಾದಾಗ ಗಂಡನಿಗೆ ನಿವೇದಿತಾ ಕೊಡೋ ಮೂರು ಕಾರಣಗಳನ್ನೂ ಕೇಳಿದ್ದಾರೆ. ಎಲ್ಲದಕ್ಕೂ ತಟ್ಟಂತ ಉತ್ತರ ಕೊಟ್ಟಿರೋ ನಿವೇದಿತಾ ಗೇಮ್ ಗೆದ್ದಿದ್ದಾರೆ.
ಗೇಮ್ ಗೆದ್ದಿದ್ದು ಮಾತ್ರವಲ್ಲದೆ ನಿವೇದಿತಾ ಚಾಕಲೇಟ್ ಗಿಫ್ಟ್ ಕೂಡಾ ಪಡೆದಿದ್ದು ಫುಲ್ ಹ್ಯಾಪಿಯಾಗಿದ್ದರು. ಮಣಭಾರದ ಲೆಹಂಗಾದಲ್ಲಿ ಎಂದಿನಂತೆ ಸಖತ್ ಕ್ಯೂಟ್ ಕಾಣುತ್ತಿದ್ದರು ನಿವೇದಿತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.