5 ದಿನ ಆಕ್ಸಿಜನ್ ಪಡೆದು 'ಮಜಾ ಟಾಕೀಸ್‌' ರೆಮೋ ಕೊರೋನಾ ಗೆದ್ದ ಕತೆ!

By Suvarna NewsFirst Published Apr 29, 2021, 1:42 PM IST
Highlights

ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಜಾ ಟಾಕೀಸ್‌ ಖ್ಯಾತಿಯ ರೆಮೋ ಕೊರೋನಾ ಗೆದ್ದು ಬಂದ ಘಟನೆಯ ಬಗ್ಗೆ ವಿವರಿಸಿದ್ದಾರೆ. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಜಾ ಟಾಕೀಸ್‌' ಕಾರ್ಯಕ್ರಮದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ರೆಮೋ ಉರ್ಫ್‌ ರೇಖಾ ಮೋಹನ್‌ಗೆ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಮನೆಯಲ್ಲಿಯೇ ಮೊದ ಮೊದಲು ಕ್ವಾರಂಟೈನ್ ಆಗಿದ್ದ ಗಾಯಕಿ, ಆಮೇಲೆ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗೆ ದಾಖಲಾದರು. ಯಾವ ಭಯವಿಲ್ಲದೇ ನಗು ನಗುತ್ತಾ ಕೊರೋನಾ ಗೆದ್ದು ಬಂದ ಘಟನೆಯನ್ನು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

'ನಗುತ್ತಾ, ನಗಿಸುತ್ತಾ ಕೊರೋನಾ ಗೆದ್ದೆ ಎಂದು ಧೈರ್ಯವಾಗಿ ಹೇಳುತ್ತೇನೆ. ಆ ಸಮಯದಲ್ಲಿ ನಾನು ಪಾಸಿಟಿವ್ ಹಾಗೂ ಖುಷಿಯಾಗಿದ್ದೆ. ಕೊರೋನಾ ಎಂದು ತಿಳಿಯುತ್ತಿದ್ದಂತೆ, ನಾನು ಮೊದಲು ನನ್ನ ತಾಯಿ ಹಾಗೂ ಮಗಳು ಐಸೋಲೇಟ್‌ ಆಗುವ ವ್ಯವಸ್ಥೆ ಮಾಡಿದೆ. ಆ ನಂತರ ಮುಂಜಾಗೃತ ಕ್ರಮಗಳನ್ನು ಕೈಗೊಂಡೆ,' ಎಂದು ರೆಮೋ ಮಾತನಾಡಿದ್ದಾರೆ.

ಕೊರೋನಾ ಲಸಿಕೆ ಪಡೆದ ಮಹೇಶ್ ಬಾಬು ಅಭಿಮಾನಿಗಳಿಗೆ ಕೊಟ್ಟ ಸಂದೇಶವಿದು! 

ಮನೆಯಲ್ಲಿಯೇ ರೆಮೋ ಕ್ವಾರಂಟೈನ್ ಆಗಿದ್ದರು. ಆದರೆ ಆಕ್ಸಿಜನ್ ಪ್ರಮಾಣ ಕಡಿಮೆ ಆದ ಕಾರಣ ಆಸ್ಪತ್ರೆಗೆ ದಾಖಲಾದರು. 'ಮೊದಲು 5 ದಿನ ನನ್ನ ಆಕ್ಸಿಜನ್ ಪ್ರಮಾಣ ತುಂಬಾನೇ ಕಡಿಮೆ ಆಗಿತ್ತು. ಈ ಸಂದರ್ಭದಲ್ಲಿ ನಾವು ಗಾಬರಿ ಆಗಬಾರದು.  ಗಾಬರಿ ಆದರೆ ನಮ್ಮ ಶಕ್ತಿ ಕಳೆದುಕೊಳ್ಳುತ್ತೇವೆ, ಈ ಪರಿಸ್ಥಿತಿಗೆ ಅದು ನಮಗೆ ಬರೋದು ಬೇಡ. ನಾನು ಬೋಲ್ಡ್‌ ಹಾಗೂ ಸ್ಟ್ರೈಟ್ ಫಾರ್ವರ್ಡ್‌ ವ್ಯಕ್ತಿ. ನಾನು ಜೀವನದ ಬಗ್ಗೆ ಸದಾ ಪಾಸಿಟಿವ್ ಅಪ್ರೋಚ್ ಇಟ್ಟು ಕೊಂಡವಳು. ನಾನು ಆಸ್ಪತ್ರೆಯಲ್ಲಿ ಇದ್ದಾಗಲೂ ಅದೇ ಮಾಡಿದ್ದು. ನಾನು ಹಾಸಿಗೆ ಮೇಲೆ ಇದ್ದಾಗಲೂ ನನ್ನ ಹಾರೈಕೆ ಮಾಡಿದ ನರ್ಸ್‌ಗೂ ತಮಾಷೆ ಮಾಡಿ ನಗಿಸುತ್ತಿದ್ದೆ. ಕಾಮಿಡಿ ಮಾಡಿಕೊಂಡು ಆರಾಮಾಗಿ ಆಗಿದ್ದೆ,' ಎಂದಿದ್ದಾರೆ ರೇಖಾ. 

ಮಜಾ ಟಾಕೀಸ್ ರೆಮೋ ವಿತ್ ಕಾಮಿಡಿ ಕಿಲಾಡಿ ನಯನಾ ಟಿಕ್‌ಟಾಕ್‌ ವೈರಲ್! 

'ನಮ್ಮ ಜೀವನ ಹೀಗೆ ಇರಬೇಕು ಅಲ್ವಾ? ಏನೇ ತೊಂದರೆ ಆದರೂ ಪಾಸಿಟಿವ್ ಮೈಂಡ್‌ನಿಂದ ಎದುರಿಸಬೇಕು. ಮನಸ್ಸಿಗೂ ಬಾರ ಕಡಿಮೆ ಆಗುತ್ತದೆ. ಮಾನಸಿಕವಾಗಿಯೂ ಯಾವ ತೊಂದರೆಯೂ ಆಗುವುದಿಲ್ಲ,' ಎಂದು ಹೇಳಿದ ರೇಖಾ ಮೋಹನ್‌ ತಮ್ಮ ಮುಂದಿನ ಶೋ ಕುಕ್ಕು ವಿತ್ ಕಿರಿಕ್ಕು ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಚೆನ್ನೈನಲ್ಲಿ ಚಿತ್ರೀಕರಣ ನಡೆದ ಈ ಕಾರ್ಯಕ್ರಮದಲ್ಲಿ ಕಿರುತೆರೆ ಸೆಲೆಬ್ರಿಟಿಗಳು ತಮ್ಮ ಸ್ಪೆಷಲ್ ಅಡುಗೆ ಪ್ರಯೋಗ ಮಾಡುತ್ತಾರೆ. ತೀರ್ಪುಗಾರ ಸಿಹಿ ಕಹಿ ಚಂದ್ರು ಸವಿದು ವಿಜೇತರನ್ನು ಆಯ್ಕೆ ಮಾಡುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!