ಕಣ್ಣು ಮುಚ್ಚಿ 'ಬಾರಮ್ಮ' ಎಂದು ಕರೆದ ವೈಷ್ಣವ್ 'ಲಕ್ಷ್ಮೀ'ಗೆ ತೋರಿಸಿದ್ದೇನು ನೋಡಿ!

By Shriram Bhat  |  First Published Oct 5, 2023, 1:49 PM IST

ಲಕ್ಷ್ಮಿ ಅಲ್ಲಿಗೇ ಹೋಗಿ ಮತ್ತೆ ಅವನನ್ನೇ, ಅವನ ಮುಖವನ್ನೇ ನೋಡುತ್ತಾಳೆ. ಅವನ ಲವ್ ಅರ್ಥ ಮಾಡಿಕೊಂಡವಳಂತೆ ಅವನನ್ನು ತಬ್ಬಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸತೊಡಗುತ್ತಾಳೆ. 'ಇದೆಲ್ಲಾ ಓಕೆ, ನೀನು ಈಗ ಎದುರುಗಡೆ ನೋಡು, ನಿನಗಾಗಿ ಏನೋ ಹೊಸದು ಅಲ್ಲಿ ಕಾದಿದೆ' ಎಂದು ವೈಷ್ಣವ್ ಹೇಳುತ್ತಾನೆ.


ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ಸಖತ್ ಮೋಡಿ ಮಾಡುತ್ತಿದೆ. ವೈಷ್ಣವ್ ಹಾಗೂ ಲಕ್ಷ್ಮೀ ಜೋಡಿ ಕಿರುತೆರೆ ವೀಕ್ಷಕರನ್ನು ಹೆಚ್ಚು ಸೆಳೆಯುತ್ತಿದ್ದು, ಇದೀಗ ಕಲರ್ಸ್ ಕನ್ನಡದ ಟಾಪ್ ಟಿಆರ್‌ಪಿ ಸೀರಿಯಲ್ ಲಿಸ್ಟ್‌ನಲ್ಲಿ ಸೇರಿದೆ. ವೈಷ್ಣವ್ ಹಾಗೂ ಲಕ್ಷ್ಮೀ ಜೋಡಿ ಸೀರಿಯಲ್ ಪ್ರಿಯರಿಗೆ ಮೋಡಿ ಮಾಡಿದಷ್ಟೇ ಅಕ್ಕಮ್ಮನ ಪಾತ್ರ ಕೂಡ ಮೆಚ್ಚುಗೆ ಪಡೆಯುತ್ತಿದೆ. ಅಕ್ಕಮ್ಮನ ಪಾತ್ರದಲ್ಲಿ ಸುಷ್ಮಾ ರಾವ್ ನಟಿಸಿದ್ದಾರೆ. 

ಲಕ್ಷ್ಮೀ ಬಾರಮ್ಮ ಕಥೆ ಕುತೂಹಲದ ಘಟ್ಟದಲ್ಲಿ ಸಾಗುತ್ತಿದ್ದು, ಸದ್ಯ ವೈಷ್ಣವ್ ಹಾಗೂ ಲಕ್ಷ್ಮೀ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಹೊತ್ತು ಕುಳಿತಿದ್ದರು. ತನ್ನ ಜತೆ ವೈಷ್ಣವ್ ಕೂಡ ಕುಳಿತಿದ್ದು ನೋಡಿ ಲಕ್ಷ್ಮೀ ಗೆ ತುಂಬಾ ಖುಷಿಯಾಗಿದೆ. ಕಾರಣ ವೈಷ್ಣವ್ ಈಗ ತನ್ನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದಾನೆ ಎಂಬ ಭಾವ ಬಂದು ಇದು ಲಕ್ಷ್ಮೀ ಗೆ ಇಷ್ಟವಾಗಿದೆ. ಅದನ್ನು ಅವಳು ವೈಷ್ಣವ್‌ಗೆ ಹೇಳಲು ಆತ, 'ಇಷ್ಟೇ ಅಲ್ಲ, ಇನ್ನೂ ಏನೋ ಒಂದು ಸರ್‌ಪ್ರೈಸ್ ಇದೆ, ಬಾ ಎಂದು ಅವಳನ್ನು ಕಣ್ಣುಮಚ್ಚಿಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗುತ್ತಾನೆ. 

Tap to resize

Latest Videos

ಬಿಗ್ ಬಾಸ್ ಕನ್ನಡ -10 ಮನೆಗೆ 'ಸಿಂಗರ್' ಆಶಾ ಭಟ್ ಬಲಗಾಲಿಟ್ಟು ಬರಲಿದ್ದಾರಾ?

ಆದರೆ ಲಕ್ಷ್ಮಿ ಅಲ್ಲಿಗೇ ಹೋಗಿ ಮತ್ತೆ ಅವನನ್ನೇ, ಅವನ ಮುಖವನ್ನೇ ನೋಡುತ್ತಾಳೆ. ಅವನ ಲವ್ ಅರ್ಥ ಮಾಡಿಕೊಂಡವಳಂತೆ ಅವನನ್ನು ತಬ್ಬಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸತೊಡಗುತ್ತಾಳೆ. 'ಇದೆಲ್ಲಾ ಓಕೆ, ನೀನು ಈಗ ಎದುರುಗಡೆ ನೋಡು, ನಿನಗಾಗಿ ಏನೋ ಹೊಸದು ಅಲ್ಲಿ ಕಾದಿದೆ' ಎಂದು ವೈಷ್ಣವ್ ಹೇಳುತ್ತಾನೆ. ಬಳಿಕ ಲಕ್ಷ್ಮೀ ಅಲ್ಲಿ ನೋಡಲು ಅಲ್ಲಿ ಅವಳ 'ಅಕ್ಕಮ್ಮ' ಇದ್ದಾಳೆ. ಅಕ್ಕಮ್ಮನನ್ನು ನೋಡಿ ಖುಷಿಯಾಗುವ ಲಕ್ಷ್ಮೀ, ಅವಳನ್ನು ನೋಡುತ್ತಲೇ ಅದೆಷ್ಟು ಖುಷಿ ಪಡುತ್ತಾಳೆ, ಏನೇನು ಮಾತನಾಡುತ್ತಾಳೆ ಎಂಬುದನ್ನು ಇಂದಿನ ಸಂಚಿಕೆ ನೋಡಿ ತಿಳಿಯಬೇಕು. 

ಬಿಗ್ ಬಾಸ್ ಕನ್ನಡ ಶೋ ವೀಕ್ಷಿಸಲು ಹಲವು ದಾರಿಗಳಿವೆ; ಚಿಂತೆ ಬಿಟ್ಟು ಬಿಡಿ..!

ಒಟ್ಟಿನಲ್ಲಿ, ಇಂದಿನ ಪ್ರೊಮೋ ನೋಡಿ ಸಾಕಷಚ್ಟು ಕುತೂಹಲ ಪಡೆದುಕೊಂಡಿರುವ ಲಕ್ಷ್ಮೀ ಬಾರಮ್ಮ ಅಭಿಮಾನಿಗಳು, ಈ ಸಂಚಿಕೆಯಲ್ಲಿ ಕಥೆಯ ಮುಂದಿನ ಭಾಗದಲ್ಲಿ ಏನೆಲ್ಲಾ ಆಗಲಿವೆ ಎಂಬದನ್ನು ಸಂಚಿಕೆ ನೋಡಿ ತಿಳಿಯಬಹುದು. ಲಕ್ಷ್ಮೀ ಯನ್ನು ಕಂಡರೆ ದೂರ ಓಡುತ್ತಿದ್ದ ವೈಷ್ಣವ್ ಇದೀಗ 'ಬಾರಮ್ಮ' ಎಂದು ಕರೆಯುತ್ತ ಹತ್ತಿರ ಬರುತ್ತಿರುವುದು ತುಂಬಾ ವೀಕ್ಷಕರಿಗೆ ಇಷ್ಟವಾಗಿದೆ ಎನ್ನಬಹುದು. 

click me!