Bigg Boss Kannada: ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಾದ ಕಾಂಟ್ರವರ್ಸಿಗಳು ಒಂದೇ ಎರಡೇ! ಇಲ್ಲಿಯವರೆಗೆ ಏನೇನಾಯ್ತು?

Published : Aug 17, 2025, 10:34 AM IST
bigg boss kannada 12 kiccha sudeep

ಸಾರಾಂಶ

Bigg Boss Kannada Controversies: ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಇಲ್ಲಿಯವರೆಗೆ ಸದ್ದು ಮಾಡಿರುವ ಕಾಂಟ್ರವರ್ಸಿಗಳಿವು! 

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ( Bigg Boss Kannada Controversies ) ಈಗಾಗಲೇ ಯಶಸ್ವಿಯಾಗಿ 11 ಸೀಸನ್‌ಗಳು, ಒಂದು ಒಟಿಟಿ ಶೋ ಸಂಪೂರ್ಣವಾಗಿದೆ. ಇಷ್ಟು ಸೀಸನ್‌ಗಳಲ್ಲಿ ಸಾಕಷ್ಟು ಕಾಂಟ್ರವರ್ಸಿಗಳು ಆಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್ 3: ಹುಚ್ಚ ವೆಂಕಟ್‌ ಗಲಾಟೆ

ಹುಚ್ಚ ವೆಂಕಟ್ ಅವರು ರವಿ ಮೂರೂರು ಜೊತೆ ವಾದ-ವಿವಾದದಕ್ಕೆ ಇಳಿದರು. ಅಷ್ಟೇ ಅಲ್ಲದೆ ಕಪಾಳ ಮೋಕ್ಷ ಮಾಡಿದರು. ಹೀಗಾಗಿ ಅವರನ್ನು ಶೋನಿಂದ ಹೊರಹಾಕಲಾಯ್ತು. ಆ ಬಳಿಕ ಕಿಚ್ಚ ಸುದೀಪ್ ವಿರುದ್ಧವೂ ಆರೋಪಗಳನ್ನು ಮಾಡಿದ್ದರು, ಇದು ಮತ್ತಷ್ಟು ವಿವಾದ ಹೆಚ್ಚಾಗಲು ಕಾರಣವಾಯಿತು

ಹುಚ್ಚ ವೆಂಕಟ್ ಮತ್ತು ಪ್ರಥಮ್

ಬಿಗ್‌ ಬಾಸ್‌ ಕನ್ನಡ ಸೀಸನ್ 4 ರಲ್ಲಿ ಹುಚ್ಚ ವೆಂಕಟ್ ಅವರು ಅತಿಥಿಯಾಗಿ ಆಗಮಿಸಿದ್ದರು. ಆಗ ಪ್ರಥಮ್ ಅವರನ್ನು ಮಾತನಾಡಿಸೋದು ಟಾಸ್ಕ್‌ ಆಗಿತ್ತು. ಪ್ರಥಮ್‌ ಮಾತು ಕೇಳಿ, ವೆಂಕಟ್ ಅವರು ಪ್ರಥಮ್ ಮೇಲೆ ಕೈ ಮಾಡಿದರು. ಆಗಲೂ ಬೌನ್ಸರ್‌ಗಳಿಂದ ಹೊರಗಡೆ ಹಾಕಲಾಯ್ತು.

ಬಿಗ್‌ ಬಾಸ್‌ ಸೀಸನ್ 6: ಆಂಡಿ ಮತ್ತು ಕವಿತಾ

ಬಿಗ್‌ ಬಾಸ್‌ ಸೀಸನ್‌ 6 ಶೋನಲ್ಲಿ ಆಂಡ್ರ್ಯೂ ಹಾಗೂ ಕವಿತಾ ಮಧ್ಯೆ ಸಿಕ್ಕಾಪಟ್ಟೆ ಜಗಳ ಆಗಿವೆ. ದೊಡ್ಮನೆಯಿಂದಾಚೆ ಕೂಡ ಇವರಿಬ್ಬರೂ ಕಿತ್ತಾಡಿಕೊಂಡಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

ಸಂಯುಕ್ತಾ ಹೆಗಡೆ - ಸಮೀರ್ ಆಚಾರ್ಯ

ಸಂಯುಕ್ತಾ ಹೆಗಡೆ ಬಿಗ್‌ ಬಾಸ್‌ ಮನೆಗೆ ಅತಿಥಿಯಾಗಿ ಬಂದಿದ್ದರು. ಟಾಸ್ಕ್‌ವೊಂದರಲ್ಲಿ ಸಮೀರ್ ಆಚಾರ್ಯ ಅವರು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ಸಮೀರ್ ಮೇಲೆ ಕೈ ಮಾಡಿದರು. ನಂತರ ಕ್ಷಮೆ ಕೇಳಿದರೂ, ಕೂಡ ಬಿಗ್‌ ಬಾಸ್‌ ನಿಯಮಗಳನ್ನು ಮೀರಿದ ಕಾರಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಯಿತು

ಬಿಗ್‌ ಬಾಸ್‌ ಸೀಸನ್ 9: ಪ್ರಶಾಂತ್ ಸಂಬರಗಿ

ಪ್ರಶಾಂತ್ ಸಂಬರಗಿ ಅವರು ಮಾತನಾಡುವಾಗ ಕನ್ನಡಪರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಗ್ ಬಾಸ್ ಮನೆಯ ಮುಂದೆ ದೊಡ್ಡ ಪ್ರತಿಭಟನೆಗೆ ಕಾರಣವಾಯಿತು. ಬಳಿಕ ಅವರು ಕ್ಷಮೆ ಕೇಳಿದರು.

ವಿನಯ್‌ ಗೌಡ ಬಳೆ ವಿವಾದ

ಬಿಗ್‌ ಬಾಸ್‌ ಕನ್ನಡ ವಿನಯ್‌ ಗೌಡ ಅವರು ಮಾತಿನ ಮಧ್ಯೆ ಕೈಗೆ ನಾನು ಬಳೆ ತೊಟ್ಟುಕೊಂಡಿಲ್ಲ ಎಂದರು. ಹೆಣ್ಣು ಮಕ್ಕಳ ಸಾಮರ್ಥ್ಯದ ಬಗ್ಗೆ ಅವಮಾನ ಮಾಡಿದ್ದಾರೆ ಎಂದು ಸಾಕಷ್ಟು ಹೋರಾಟಗಳು, ಚರ್ಚೆ ಆಯಿತು.

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ಅವರು ಮಾತನಾಡುವಾಗ ಒಂದು ಸಮುದಾಯದ ಹೆಸರು ಬಳಸಿದ್ದರು. ನಿಂದಿಸುವಾಗ ಬಳಸಿದ್ದಕ್ಕೆ ಇವರ ವಿರುದ್ಧ ಕೂಡ ದೂರು ದಾಖಲಾಗಿತ್ತು.

ಹುಲಿ ಉಗುರು

ವರ್ತೂರ್ ಸಂತೋಷ್ ಅವರು ಹುಲಿಯ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದು ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಹುಲಿ ಉಗುರು ಧರಿಸಿದ್ದ ಸೆಲೆಬ್ರಿಟಿಗಳ ಮನೆ ಮೇಲೂ ದಾಳಿ ಆಯ್ತು.

ಸ್ವರ್ಗ-ನರಕ ವಿವಾದ

ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ‘ಸ್ವರ್ಗ ಮತ್ತು ನರಕ’ ಕಾನ್ಸೆಪ್ಟ್ ಮಹಿಳಾ ಸ್ಪರ್ಧಿಗಳ ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಯಿತು ಎಂದು ಕರ್ನಾಟಕ ಮಹಿಳಾ ಆಯೋಗ ಆರೋಪಿಸಿತು. ಈ ಟಾಸ್ಕ್‌ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಸರಿಯಾದ ಸೌಲಭ್ಯಗಳಿಲ್ಲದೆ (ಸರಿಯಾದ ಊಟ ಇಲ್ಲ, ರೂಮ್‌ ಇಲ್ಲ ), ಬಹು-ಕ್ಯಾಮೆರಾ ವಾತಾವರಣದಲ್ಲಿ ಗೌಪ್ಯತೆ ಉಲ್ಲಂಘನೆಯಾಯಿತು ಎಂದು ದೂರಲಾಯಿತು. ಕುಂಬಳಗೋಡು ಪೊಲೀಸರು ಶೋನ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದರು, ಈ ಕಾನ್ಸೆಪ್ಟ್ ರದ್ದಾಯಿತು.

ಬಿಗ್‌ ಬಾಸ್‌ ಕನ್ನಡ 11 ಜಗದೀಶ್ ಮತ್ತು ರಂಜಿತ್

ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್ ಅವರು ಸಿಕ್ಕಾಪಟ್ಟೆ ನಿಂದಿಸಿದ್ದರು. ಸದಾ ಜಗಳ ಮಾಡುತ್ತಿದ್ದ ಜಗದೀಶ್‌ ಅವರ ಜೊತೆ ವಾದ ವಿವಾದ ಆಗುವಾಗ ರಂಜಿತ್‌ ತಳ್ಳಿದರು ಎನ್ನೋ ಕಾರಣಕ್ಕೆ ಇಬ್ಬರನ್ನೂ ಹೊರಗಡೆ ಕಳಿಸಲಾಯ್ತು.

ಉದಯ್‌

ಬಿಗ್‌ ಬಾಸ್‌ ಕನ್ನಡ ಒಟಿಟಿ ಶೋನಲ್ಲಿ ಸಾನ್ಯಾ ಅಯ್ಯರ್‌ ವಿರುದ್ಧ ಅಶ್ಲೀಲ ಆರೋಪ ಮಾಡಿದ್ದಕ್ಕೆ ಉದಯ್‌ ಅವರು ಕೂಡ ಹೊರಗಡೆ ಬರುವ ಹಾಗೆ ಆಯ್ತು.

ಚಕ್ರವರ್ತಿ ಚಂದ್ರಚೂಡ್‌

ಚಕ್ರವರ್ತಿ ಚಂದ್ರಚೂಡ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಪ್ರಿಯಾಂಕಾ ತಿಮ್ಮೇಶ್‌ ತನ್ನನ್ನು ನಾಮಿನೇಟ್‌ ಮಾಡಿದರು ಅಂತ ಮಧ್ಯದ ಬೆರಳು ( ಅಶ್ಲೀಲತೆಯ ಸಂಕೇತ ) ತೋರಿಸಿದರು. ಇದು ಸಾಕಷ್ಟು ಜನರ ಕೋಪಕ್ಕೆ ಗುರಿಯಾಯ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!