
ಕನ್ನಡ ಯುಟ್ಯೂಬರ್ ಮಧು ಗೌಡ ( Youtuber Madhu Gowda ) ಅವರ Vlog ನೋಡುವವರ ಸಂಖ್ಯೆ ಜಾಸ್ತಿ ಇದೆ. ಆಗಾಗ ಗೋಲ್ಡ್ ತಗೊಳೋದು, ಗಿಫ್ಟ್ ಕೊಡೋದು, ಸೈಟ್ ತಗೊಳ್ಳುವ ಮಧು ಗೌಡ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.
9 To 5 ಜಾಬ್ ಇಷ್ಟವಿಲ್ಲವೆಂದು ಅನೇಕರು ಇಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಹೆಸರು ಮಾಡುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಜನರು ಸಿಕ್ಕಾಪಟ್ಟೆ ದುಡಿಯುತ್ತಿದ್ದಾರೆ. ಈ ಹಣದಿಂದ ಮನೆ ಕಟ್ಟಿದವರು, ಕಾರ್ ತಗೊಂಡವರು, ಸಾಲ ತೀರಿಸಿದವರು ಒಬ್ಬರಾ? ಇಬ್ಬರಾ?
ಮಧು ಗೌಡ ಅವರು ಯುಟ್ಯೂಬರ್ ನಿಖಿಲ್ ರವೀಂದ್ರ ಅವರನ್ನು ಮದುವೆ ಆಗಿದ್ದಾರೆ. ಲವ್, ಮದುವೆ ಎಂದು ನಿತ್ಯವೂ ಒಂದಲ್ಲ ಒಂದು ಕಂಟೆಂಟ್ ಇಟ್ಟುಕೊಂಡು ಅವರು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇವರ ವಿಡಿಯೋಗಳು ಏನಿಲ್ಲ ಅಂದ್ರೂ 3 ಲಕ್ಷ ವೀಕ್ಷಣೆ ಆಗುತ್ತದೆ.
ಇನ್‌ಸ್ಟಾಗ್ರಾಮ್, ಯುಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರುವ ಮಧು ಗೌಡ ಮೊದಲಿನಿಂದಲೂ ಶ್ರೀಮಂತರೇ. ಇವರ ತವರು ಮನೆಯಲ್ಲಿ ಹದಿನಾಲ್ಕು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಮದುವೆ ಆದ್ಮೇಲೆ ತವರು ಮನೆಯಿಂದ ಇವರಿಗೆ ಬಂಗಾರ, ಮನೆ ಕೂಡ ಉಡುಗೊರೆಯಾಗಿ ಸಿಕ್ಕಿದೆ.
ಅಂದಹಾಗೆ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರೋ ಮಧು ಗೌಡ ಅವರು ಒಂದಾದ್ಮೇಲೆ ಒಂದರಂತೆ, ಗೋಲ್ಡ್, ವಾಹನಗಳು ಹೀಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ದೊಡ್ಡ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿಯೂ ಕಾಣಿಸುತ್ತಿರುತ್ತಾರೆ. ಈ ಮೂಲಕ ಅವರ ಸಂಪಾದನೆಯ ಮೊತ್ತ ಜಾಸ್ತಿ ಇದೆ.
ಈಗ ಇವರು ಇನ್ನೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಮಧು ಗೌಡ, ನಿಖಿಲ್ ತಂಗಿ ನಿಶಾ ರವೀಂದ್ರ ಧರಿಸೋ ಉಡುಗೆಗಳನ್ನು ಕಂಡರೆ ಅನೇಕರಿಗೆ ಇಷ್ಟ. ಈ ಸೀರೆ ಎಲ್ಲಿ ತಗೊಂಡ್ರಿ ಏನು ಕಥೆ ಅಂತ ಅನೇಕರು ಕಾಮೆಂಟ್ ಮಾಡುತ್ತಿರುತ್ತಾರಂತೆ. ಹೀಗಾಗಿ ಅವರು ನಿಧುವಸ್ತ್ರ ಎಂದು ಬಟ್ಟೆ ಉದ್ಯಮದ ವೆಬ್‌ಸೈಟ್ ಆರಂಭಿಸಿದ್ದು, ಅಲ್ಲಿ ಮಧು ಗೌಡ, ನಿಶಾ ಹಾಕುವ ಸೀರೆಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆಯಂತೆ.
ಆರ್ಥಿಕವಾಗಿ ಈ ಕುಟುಂಬ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದಿರೋದು ನೋಡಿ ವೀಕ್ಷಕರು ಕೂಡ ಆಶ್ಚರ್ಯಪಟ್ಟಿದ್ದಾರೆ. ಕೆಲವರು ಇವರಿಗೆ ಎಲ್ಲಿಂದ ಹಣ ಸಿಗುತ್ತದೆ ಎಂದು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಬೆಳೆದರೆ ಈ ಥರ ಬೆಳೆಯಬೇಕು ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಒಂದು ವಾರಗಳ ಕಾಳ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದಂಪತಿಯು ಗ್ರ್ಯಾಂಡ್ ಆಗಿ ಮದುವೆ ಆಗಿತ್ತು. ಅದರಂತೆ ಮಧು ಹಾಗೂ ನಿಖಿಲ್ ಕೂಡ ಒಂದು ವಾರಗಳ ಕಾಲ ಗ್ರ್ಯಾಂಡ್ ಆಗಿ ಮದುವೆ ಆಗಿದ್ದರು. ವಿಶೇಷವಾದ ಡಿಸೈನರ್ ಬಟ್ಟೆಗಳು, ಕಂಪ್ಲೀಟ್ ಬಂಗಾರದ ಆಭರಣಗಳನ್ನು ಧರಿಸಿ ಮಧು ಗೌಡ ಮದುವೆಯಾಗಿದ್ದರು. ಇವರ ಅದ್ದೂರಿಯಾದ ಮದುವೆ ನೋಡಿ ಅನೇಕರು ಅಚ್ಚರಿಪಟ್ಟಿದ್ದರು. ಉಳಿದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಹೋಲಿಸಿದರೆ ಮಧು ಗೌಡ ಕುಟುಂಬವು ನೀಟ್ ಆಗಿ ವಿಡಿಯೋ ಮಾಡುತ್ತದೆ. ಇನ್ನು ಕಾಂಟ್ರವರ್ಸಿ ಮಾಡಿಕೊಳ್ಳೋದು ಕೂಡ ತೀರ ಅಪರೂಪ ಎನ್ನಬಹುದು. ಇನ್ನು ಇವರನ್ನು ಇಷ್ಟಪಡುವ ದೊಡ್ಡ ಮಟ್ಟದ ಬಳಗವೇ ಇದೆ. ಅಂದಹಾಗೆ ಮಧು ಗೌಡಗೆ ಈಗ 24 ವರ್ಷ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.