BBK9 ಗಿರಿರಾಜ ಕೋಳಿ ಮೊಟ್ಟೆ ಇಟ್ಟ ತಕ್ಷಣ ಕದ್ದು ಕುಡಿಯುತ್ತಿದ್ದೆ; ಮಂಗಳ ಗೌರಿ ಬಾಲ್ಯದ ಕಿತಾಪತಿ ಸ್ಟೋರಿ

Published : Oct 13, 2022, 09:01 AM IST
BBK9 ಗಿರಿರಾಜ ಕೋಳಿ ಮೊಟ್ಟೆ ಇಟ್ಟ ತಕ್ಷಣ ಕದ್ದು ಕುಡಿಯುತ್ತಿದ್ದೆ; ಮಂಗಳ ಗೌರಿ ಬಾಲ್ಯದ ಕಿತಾಪತಿ ಸ್ಟೋರಿ

ಸಾರಾಂಶ

ದಿನಕ್ಕೊಂದು ಮೊಟ್ಟೆ ಕದ್ದು ಕುಡಿಯುತ್ತಿದ್ದ ಮಂಗಳ ಗೌರಿ. ಇದು ವಿಚಿತ್ರ ಕಥೆ ಅಲ್ಲ ಬಾಲ್ಯದ ಕಥೆ....  

ಕನ್ನಡ ಕಿರುತೆರೆಯಲ್ಲಿ ಮೂರು ಸಾವಿರ ಎಪಿಸೋಡ್‌ ಪೂರ್ಣಗೊಳ್ಳಿಸಿ ಮನೆ ಮಾತಾಗಿರುವ ಮಂಗಳ ಗೌರಿ ಮದುವೆ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಂಡಿರುವ ಕಾವ್ಯಾ ಶ್ರೀ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ. ಹಾಸ್ಯ ಮಾಡಿಕೊಂಡೇ ಗೇಮ್ ಆಡುತ್ತಿರುವ ಕಾವ್ಯಾ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಗಿರಿರಾಜ ಕೋಳಿ ಜೊತೆಗಿರುವ ಕನೆಕ್ಷನ್‌ ಹಂಚಿಕೊಂಡಿದ್ದಾರೆ.

'ನಾನು ಎರಡು ಮೂರು ವರ್ಷದ ಮಗುವಿದ್ದಾಗ ಅಜ್ಜಿ ಮನೆಯಲ್ಲಿ ನನ್ನನ್ನು ಬಿಟ್ಟರು. ಅವರ ಮನೆಯಲ್ಲಿ ಇಬ್ಬರು ಆಂಟಿ ಇದ್ದರು. ಒಬ್ಬರಿಗೆ ಮದುವೆ ಆಗಿತ್ತು ಒಬ್ಬರಿಗೆ ಆಗಿರಲಿಲ್ಲ. ನಮ್ಮ ತಾತ ಹೋಟೆಲ್‌ ನಡೆಸುತ್ತಿದ್ದರು ಹೀಗಾಗಿ ಆಂಟಿ ಹುಲ್ಲು ಕೊಯ್ಯುವುದಕ್ಕೆ ಹೋಗುತ್ತಿದ್ದರು ನಾನು ಬರ್ತೀನಿ ಅಂತ ಹಠ ಮಾಡುತ್ತಿದ್ದೆ. ಒಂದು ರೂಪಾಯಿ ಕೊಟ್ಟು ಬೋಟಿ ತಗೊಂಡು ಬಾ ಅಂತ ಕಳುಹಿಸುತ್ತಿದ್ದರು ..ಅವರ ಚಪ್ಪಲಿ ನಾನೇ ಹಾಕೊಂಡ್ರೆ ಅವರು ಹೋಗಲ್ಲ ಅಂತ ನಾನು ಹಾಕಿಕೊಳ್ಳುತ್ತಿದ್ದೆ. ದೊಡ್ಡ ಚಪ್ಪಲಿ ಅಂದ್ರೆ ನಿಧಾನಕ್ಕೆ ನಡೆಯುತ್ತಿದ್ದೆ. ನಾನು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಅವರು ಇರುತ್ತಿರಲಿಲ್ಲ' ಎಂದು ಬಾಲ್ಯದ ಕಥೆಯನ್ನು ಕಾವ್ಯಶ್ರೀ ಹೇಳುತ್ತಾರೆ.

BBK9 ಮುಖಕ್ಕೆ ಪಪ್ಪಾಯ ತಿಕ್ಕಬೇಡಿ; ಹಣ್ಣುಗಳ ಫೇಸ್‌ಪ್ಯಾಕ್‌ ಬಗ್ಗೆ ರೂಪೇಶ್ ಶೆಟ್ಟಿ

'ಬೋಟಿ ತಿನ್ನುತ್ತ ಪಡಸಾಲೆಯಲ್ಲಿ ಮಲಗುತ್ತಿದ್ದೆ. ಅಲ್ಲೊಂದು ಗಿರಿ ರಾಜ ಕೋಳಿ ಇತ್ತು ತುಂಬಾ ದಪ್ಪ ಇತ್ತು ಅದು ಮೊಟ್ಟೆ ಇಟ್ಟ ತಕ್ಷಣ ಸೌಂಡ್ ಮಾಡುತ್ತಿತ್ತು ನನಗೆ ಅದು ಅಲರಾಂ. ಮೊಟ್ಟೆ ಇಟ್ಟ ತಕ್ಷಣ ಹೋಗಿ ಓಪನ್ ಮಾಡು ಕುಡಿ. ಮೊಟ್ಟೆ ಎಷ್ಟು ಅಭ್ಯಾಸ ಮಾಡಿಕೊಂಡಿದ್ದೆ ಅಂದ್ರೆ ಪಕ್ಕದ ಮನೆ ಪಡಸಾಲೆ ಇಟ್ಟರೂನೂ ನಾನು ಹೋಗಿ ಮೊಟ್ಟೆ ಕುಡಿಯುತ್ತಿದ್ದೆ. ಆಂಟಿ ಬಂದು ಮೊಟ್ಟೆ ಎಲ್ಲಿ ಅಂತ ಕೇಳಿದರೆ ಕುಡಿದೆ ಅನ್ನುತ್ತಿದ್ದೆ ಇನ್ನೊಂದು ಸಲ ನನಗೆ ಗೊತ್ತಿಲ್ಲ ಎನ್ನುತ್ತಿದ್ದೆ' ಎಂದು ಅರುಣ್ ಸಾಗರ್, ವಿನೋದ್ ಗೊಬ್ಬರಗಾಲ, ಪ್ರಶಾಂತ್ ಸಂಬರಗಿ, ದರ್ಶ್‌ ಮತ್ತು ರಾಕೇಶ್‌ ಜೊತೆ ಮಾತನಾಡುತ್ತಾರೆ. 

ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ:

ಬಿಗ್ ಮನೆ ಎಂದ್ಮೇಲೆ ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ಜೋರಾಗೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಏನು ಹೊರತಾಗಿಲ್ಲ. ಇಂದು ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಮತ್ತು ವಿನೋದ್ ಗೊಬ್ಬರಗಾಲ ನಡುವೆ ಮಾತಿನ ವಾಗ್ವಾದ ನಡೆದಿದೆ. ವಿನೋದ್ ಮಾತಿನಿಂದ ಬೇಸರಗೊಂಡ ಕಾವ್ಯಶ್ರೀ ಸರಿಯಾಗಿ ಉಗಿಯುತ್ತಲೆ ಕಣ್ಣೀರಿಟ್ಟಿದ್ದಾರೆ. ಊಟ ಮಾಡುವಾಗ ಕಾವ್ಯಾಶ್ರೀಗೆ ವಿನೋದ್ ಗೊಬ್ಬರಗಾಲ ಬಂದು ಅಲ್ಲಿ ಹಾಕು ಎಂದು ಹೇಳಿದರು. ಇದರಿಂದ ಕೋಪಗೊಂಡ ಕಾವ್ಯಶ್ರೀ ನಾನೇನು ಅವರ ಮನೆ ಆಳಾ, ಬಂದು ಹಾಕು ಅಂತ ಆರ್ಡರ್ ಮಾಡುತ್ತಿದ್ದಾನೆ ಎಂದು ರಾಕೇಶ್ ಬಳಿ ದೂರಿದರು. ಇತ್ತ ಊಟ ಮಾಡುತ್ತಾ ಕುಳಿತಿದ್ದ ಗೊಬ್ಬರಗಾಲ ನನಗೇನು ಬೆಲೆನೇ ಇಲ್ವಾ ಎನ್ನುತ್ತಾರೆ. ಬಳಿಕ ತನ್ನ ಹಿಂದೆಯೇ ಹೋಗಿ ಕುಳಿತಿದ್ದ ವಿನೋದ್‌ಗೆ ನನಗೆ ಇಷ್ಟವಿಲ್ಲದೆ ಕಪಿ ನನ್ನ ಹಿಂದೆ ಬಿದ್ದೆದೆ ಎಂದು ವ್ಯಂಗ್ಯವಾಡಿದರು. ಬಳಿಕ ಮರ್ಯಾದೆ ವಿಚಾರಕ್ಕೆ ಇಬ್ಬರು ಕಿತ್ತಾಡಿದ್ದಾರೆ. ಅರುಣ್ ಸಾಗರ್ ಮುಂದೆ ಇಬ್ಬರ ಮಾತಿನ ಜಕಮಕಿ ಜೋರಾಗಿತ್ತು. ಬಳಿಕ ಕಾವ್ಯಾಶೀ ಜೋರಾಗಿ ಅಳುತ್ತಾ ನಾವು ಅರ್ಟಿಸ್ಟ್  ಹಾಗೆಲ್ಲ ಮಾಡಲ್ಲ ಎಂದು ದೀಪಿಕಾ ಬಳಿ ಹೇಳಿದರು. 

ಗೊಬ್ಬರಗಾಲ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಗೊಬ್ಬರಗಾಲ ನಿನ್ನದು ಅತಿಯಾಯಿತು' ಎಂದು ಅನೇಕರು ಹೇಳುತ್ತಿದ್ದಾರೆ. 'ಗೊಬ್ಬರಗಾಲ ಓವರ್ ಆಕ್ಟಿಂಗ್' ಎನ್ನುತ್ತಿದ್ದಾರೆ. ಕಾವ್ಯಶ್ರೀ ಮತ್ತು ವಿನೋದ್ ನಡುವಿನ ಕಿತ್ತಾಟ ಎಲ್ಲಿವರೆಗೂ ಬಂದಿದೆ ಎಂದು ನೋಡಲು ರಾತ್ರಿ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಲೇ ಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!