
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ಯಾಕುಮಾರಿ' (Kanyakumari) ಧಾರಾವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ವಿಭಿನ್ನ ಕಥೆ, ಹೊಸ ಮುಖಗಳ ಪರಿಚಯ, ಸರಳ ಸಂಭಾಷಣೆ ಅಲ್ಲೊಂದು ಇಲ್ಲೊಂದು ಇಂಗ್ಲಿಷ್ (English) ಪದಗಳು, ಸಿರಿವಂತ ಹುಡುಗಿ (Rich Women) ಜೊತೆ ಬಡವನ (Poor Man) ಸ್ನೇಹ. ಸ್ನೇಹ ಉಳಿಸಿಕೊಳ್ಳಲು ಹೋಗಿ ತಮ್ಮ ಹಿಂದಿನ ಜನ್ಮದ ರಹಸ್ಯ ತಿಳಿದುಕೊಳ್ಳುವುದು, ಹೀಗೆ ಸಾಗುತ್ತದೆ.
ಸದ್ಯ ಧಾರಾವಾಹಿ ಇಲ್ಲಿದೆ ಬಂದು ನಿಂತಿದೆ. ಆಗಲೇ 50 ಸಂಚಿಕೆ ಪ್ರಸಾರ ಪೂರೈಸಿರುವ ಸಂಭ್ರಮದಲ್ಲಿದೆ ಇಡೀ ತಂಡ. ನಾಯಕಿಯಾಗಿ Asiya Firdose, ನಾಯಕನಾಗಿ ರಘು ಚರಣ್ (Raghu Charan) ಕಾಣಿಸಿಕೊಂಡಿದ್ದಾರೆ. ಚರಣ್ ಕಾರ್ ಡ್ರೈವರ್ (Car Driver) ಆಗಿದ್ದು ಇಡೀ ಊರಿನ ಜನರಿಗೆ ಕ್ಯಾಬ್ ಸರ್ವಿಸ್ (Cab Service) ನೀಡುತ್ತಾನೆ. ಯಾವುದೋ ಸತ್ತ ಪ್ರೇತಾತ್ಮ ಕಾರಿನಲ್ಲಿ ಸೇರಿಕೊಂಡು ಬೋಣಿ ಮಾಡಲು ಒದ್ದಾಡುತ್ತಿದ್ದಾನೆ. ಆಸಿಯಾ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ, ಆಗಾಗ ಅವರ ಮೇಲೆ ದೇವಿ ಕಾಣಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಿಸುತ್ತಾಳೆ.
ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಕುಲ್ ಶರ್ಮಾ (Nakul Sharma), ಅನು (Anu), ಸ್ವಾತಿ (Swathi), ಸಹನಾ (Sahana), ಸಾನ್ವಿ (Sanvi) ಮತ್ತು ರಶ್ಮಿತಾ (Rashmitha) ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಮಮ್ಮಿ ಎಂದೇ ಹೆಸರು ಮಾಡಿರುವ ಯಮುನಾ ಶ್ರೀನಿಧಿ (Yamuna Srinidhi), ಚರಣ ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮಿಡಲ್ ಕ್ಲಾಸ್ ಮಹಿಳೆ ಒಂದು ತುಂಬಿದ ಕುಟುಂಬ ನಡೆಸಲು ಎಷ್ಟು ಕಷ್ಟ ಪಡುತ್ತಾಳೆ, ಜೀವನ ನಡೆಸಲು ಮಾಡಿಕೊಂಡಿರುವ ಸಾಲಗಳನ್ನು ಹೇಗೆ ತೀರಿಸುತ್ತಾಳೆ ಎನ್ನುವ ಪ್ರಮುಖ ಪಾತ್ರ ಯಮುನಾ ಅವರದ್ದು.
ಕನ್ನಿಕಾ ತಂದೆ ಪಾತ್ರದಲ್ಲಿ ಪ್ರೀತಮ್ (Preetham) ಕಾಣಿಸಿಕೊಂಡಿದ್ದಾರೆ. ಅಭಿನಯವನ್ನು ಪ್ಯಾಶನ್ ಆಗಿ ಆಯ್ಕೆ ಮಾಡಿಕೊಂಡಿರುವ ಪ್ರೀತಮ್ ಅವರು ಟ್ರ್ಯಾವಲರ್, ಪ್ರೊಡ್ಯೂಸರ್ (Producer), ಈವೆಂಟ್ ಪ್ಲಾನರ್ (Event Planner) ಹಾಗೂ ಮಾಡಲ್. ಸಾಲ್ಟ್ ಆಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ವಿಜಯ್ ಸೇತುಪತಿ (Vijay Sethupathi) ಫೀಲ್ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರೀತಮ್ ತಮ್ಮ ಫೋಟೋಶೂಟ್ ಹಾಗೂ ಇನ್ನಿತರ ನಾಯಕರ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.