ತಂದೆ ಕಳೆದುಕೊಂಡೆ, ನನ್ನೊಟ್ಟಿಗಿದ್ದ ದೊಡ್ಡ ಆಶೀರ್ವಾದವನ್ನೂ ಕಳೆದುಕೊಂಡೆ: ನಟಿ ಯಮುನಾ ಶ್ರೀನಿಧಿ

Suvarna News   | Asianet News
Published : Oct 23, 2021, 04:59 PM IST
ತಂದೆ ಕಳೆದುಕೊಂಡೆ, ನನ್ನೊಟ್ಟಿಗಿದ್ದ ದೊಡ್ಡ ಆಶೀರ್ವಾದವನ್ನೂ ಕಳೆದುಕೊಂಡೆ: ನಟಿ ಯಮುನಾ ಶ್ರೀನಿಧಿ

ಸಾರಾಂಶ

ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಭಾವುಕ ಸಂದೇಶ ಹಂಚಿಕೊಂಡ ನಟಿ ಯಮುನಾ ಶ್ರೀನಿಧಿ...

ಕನ್ನಡ ಕಿರುತೆರೆ ಲೋಕದಲ್ಲಿ ತಾಯಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ಯಂಗ್ ಮಮ್ಮಿ ಯಮುನಾ ಶ್ರೀನಿಧಿ (Yamuna Srinidhi) ಅವರು ಅಕ್ಟೋಬರ್ 4ರಂದು ತಂದೆ ಪ್ರೊ. ಕೃಷ್ಣೇಗೌಡರನ್ನು (Krishne Gowdaru) ಕಳೆದುಕೊಂಡರು. ನೋವಿನಲ್ಲಿರುವ ಯಮುನಾ ಅವರು ಸೋಷಿಯಲ್ ಮೀಡಿಯಾದಲ್ಲಿ ತಂದೆ ಜೊತೆಗಿನ ಬಾಲ್ಯದ ಫೋಟೋ (Childhood Photos) ಹಂಚಿಕೊಂಡು ಭಾವುಕ ಪತ್ರ ಬರೆದಿದ್ದಾರೆ. 

'ತಂದೆಯನ್ನು ಕಳೆದುಕೊಂಡರು. ನನ್ನ ಗ್ರೇಟೆಸ್ಟ್‌ ಆಶೀರ್ವಾದ (Blessing) ಕೂಡ ಕಳೆದುಕೊಂಡೆ. ತಂದೆ ಇನ್ನಿಲ್ಲ ಎಂಬ ವಿಚಾರವನ್ನು ಹಂಚಿಕೊಳ್ಳಲು ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಪ್ರೊ. ಕೃಷ್ಣೇಗೌಡರು ಕಳೆದ 8 ವರ್ಷಗಳಿಂದ  Alzheimer's disease ನಿಂದ ಬಳಲುತ್ತಿದ್ದರು. ಹೃದಯಾಘಾತದಿಂದ (Heartattack) ಕೊನೆ ಉಸಿರೆಳೆದರು,' ಎಂದು ತಮ್ಮ ತಂದೆಯ ನಿಧನದ ಸುದ್ದಿ ಹಂಚಿಕೊಂಡಿದ್ದರು. 

ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಕಿರುತೆರೆ ನಟಿ ಯಮುನಾ ಶ್ರೀನಿಧಿ!

'ಸಮಯ ಕಳೆಯಬಹುದು. ಆದರೆ ನೆನಪುಗಳು ಸದಾ ಶಾಶ್ವತವಾಗಿ ಉಳಿಯುತ್ತದೆ. ಮೊಮ್ಮಕ್ಕಳೊಟ್ಟಿಗೆ (Grandchildren) ಸಮಯ ಕಳೆಯುವುದಕ್ಕೆ ತಂದೆ ಇಷ್ಟ ಪಡುತ್ತಿದ್ದರು, ಎಂಜಾಯ್ ಮಾಡುತ್ತಿದ್ದರು.  ನಿವೃತ್ತಿ ಪಡೆದ ನಂತರ USAನಲ್ಲಿ ನಮ್ಮ ಜೊತೆ ಹೆಚ್ಚಿನ ಸಮಯ ಕಳೆದರು. 2012 ನಾವೆಲ್ಲರೂ ಸಂಪೂರ್ಣವಾಗಿ ಭಾರತಕ್ಕೆ ಬಂದೆವು.  ಅವರಿಗೆ ಆಲ್ಜೀಮರ್‌ ಶುರುವಾಗುವ ಮುನ್ನ ನಾವು ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೀವಿ. ಪ್ರಯಾಣ ಮಾಡಿ ಸಮಯ ಕಳೆದಿದ್ದೀವಿ,' ಎಂದು ಯಮುನಾ  ಬರೆದುಕೊಂಡಿದ್ದಾರೆ. 

'ಕೆಲವೊಮ್ಮೆ ನಾವು ಕಳೆದ ಕ್ಷಣ ಎಷ್ಟು ಅದ್ಭುತವಾಗಿತ್ತು ಅಂತ ಸಮಯ ಕಳೆದೋದ ಮೇಲೆ ಗೊತ್ತಾಗುತ್ತದೆ. Houstonನಲ್ಲಿರುವ ಇಂಡಿಯನ್ ಕಮ್ಯೂನಿಟಿ (Indian Community). ನನ್ನ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ನನ್ನ ಪೋಷಕರಿಗೆ ಕೊಟ್ಟ ಪ್ರೀತಿ ಅಪಾರ. ಇದೊಂದು ಲೈಫ್ ಗಾಂಗ್ ನೆನಪು,' ಎಂದು ಹೇಳಿಕೊಂಡಿದ್ದಾರೆ.

ಅಮೆರಿಕನ್ನರಿಗೆ ಕನ್ನಡ ಕಲಿಸಿದ ನಾಟ್ಯ, ನಟನೆಯ ನಿಧಿ ಯಮುನಾ ಶ್ರೀನಿಧಿ

ಈ ಹಿಂದೆ ಯಮುನಾ ಅವರು ತಂದೆಯ ಮರೆವಿನ ರೋಗದ ಬಗ್ಗೆ ಬರೆದುಕೊಂಡಿದ್ದರು. 'ನಾವು ಜೀವನದಲ್ಲಿ ಎದುರಿಸುವ ಕಷ್ಟಕರವಾದ ಬ್ಯಾಟಲ್ ಅಂದ್ರೆ ಪೋಷಕರು ಅನಾರೋಗ್ಯದಿಂದ ಬಳಲುವುದು. ಶ್ರೀನಿ ಮತ್ತು ನಾನು ಮಾಡಿಸುತ್ತಿರುವ ಈ ಚಟುವಟಿಕೆಯಿಂದ ಮೆದುಳು ಮತ್ತು ದೇಹದ ನಡುವೆ ಬ್ಯಾಲೆನ್ಸ್ ಸೃಷ್ಟಿಯಾಗುತ್ತದೆ. ಮರೆವು ಕಾಯಿಲೆಯಿಂದ ಅವರು ಕಂಟ್ರೋಲ್ ಕಳೆದುಕೊಂಡಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಈ ವಿಡಿಯೋ ಸೆರೆ ಹಿಡಿಯಲಾಗಿತ್ತು, ಈಗ ಅವರ ಪರಿಸ್ಥಿತಿ ಮತ್ತಷ್ಟೂ ಹದಗೆಟ್ಟಿದೆ. ಅನೇಕರು ನನ್ನ ತಂದೆಯನ್ನು ನೋಡಬೇಕು ಎಂದು ಹೇಳಿದ್ದರು. ಅದಕ್ಕೆ ಈ ವಿಡಿಯೋ ಹಂಚಿಕೊಂಡೆ. ಅಪ್ಪ ನಮಗೆ ನಡೆಯುವುದನ್ನು ಕಲಿಸುತ್ತಾರೆ, ಓಡುವುದನ್ನು ಕಲಿಸುತ್ತಾರೆ, ಆಡುವುದನ್ನು ಕಲಿಸುತ್ತಾರೆ, ಕಾಲಚಕ್ರ. ಜನರ ಗುರುತು ಹಿಡಿಯುವುದರಿಂದ ಹಿಡಿದು, ಹೊಸ ವಿಚಾರಗಳನ್ನು ನೆನಪಿಟ್ಟಿಕೊಳ್ಳುವುದೂ ತಂದೆಗೆ ಈಗ ಕಷ್ಟ. ಒಂದು ವರ್ಷದ ಅವಧಿಯಲ್ಲಿ ಸಂಪೂರ್ಣ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದಾರೆ. ಯಾರನ್ನೂ ಗುರುತಿಸುವುದಿಲ್ಲ. ಅವರನ್ನು ಈ ಸ್ಥಿತಿಯಲ್ಲಿ ನೋಡಲು ದುಃಖವಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದವರು. ಮೈಸೂರು ಓಪನ್ ವಿಶ್ವವಿದ್ಯಾಲಯದ ಪರೀಕ್ಷೆ ಕಂಟ್ರೋಲರ್ ಆಗಿದ್ದವರು,' ಎಂದು ಯಮುನಾ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ