
ಸಾಮಾನ್ಯವಾಗಿ ಚುನಾವಣೆ ಪ್ರಚಾರದಲ್ಲಿ ನಟ-ನಟಿಯರು ಭಾಗಿಯಾಗುವುದು ತುಂಬಾನೇ ಕಾಮನ್ ಆದರೆ ಗ್ರಾಮಪಂಚಾಯಿತಿ ಚುನಾವಣೆ ಪ್ರಚಾರ ಮಾಡುವುದು ತುಂಬಾನೇ ಅಪರೂಪ. ಈ ಅಪರೂಪದ ಪ್ರಚಾರಕ್ಕೆ ಕಿರುತೆರೆ ನಟಿ ರಂಜನಿ ಚಾಲನೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
"
ಗ್ರಾಪಂ ಚುನಾವಣೆ ಪ್ರಚಾರಕ್ಕಿಳಿದ 'ಕನ್ನಡತಿ'; ನೆಚ್ಚಿನ ನಟಿಯನ್ನು ನೋಡಲು ಜನವೋ ಜನ..!
ಇಂದು (ಶನಿವಾರ 19) ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ಮೂರು ಅಭ್ಯರ್ಥಿಗಳ ಪರ ರಂಜನಿ ಪ್ರಚಾರ ಮಾಡಲಿದ್ದಾರೆ. ಜನರು ತಪ್ಪದೆ ವೋಟ್ ಹಾಕಬೇಕು, ಅದರ ಮಹತ್ವ ತಿಳಿಸಬೇಕು ಎಂಬುದು ರಂಜನಿ ಆಸೆ. ಗ್ರಾಮದ ಅಭಿವೃದ್ಧಿ ಪರವಾಗಿ ದುಡಿಯುವ ಅಭ್ಯರ್ಥಿಗಳಾದ ವಿಜಯ್‌ಲಕ್ಷ್ಮಿ, ಯೆಂಕಪ್ಪ ನುಚ್ಚಿನ, ಬಿಎಸ್ ಮೇತ್ರಿ ಪರವಾಗಿ ರಂಜನಿ ಪ್ರಚಾರ ಶುರುವಾಗಿದೆ.
ಇನ್ನು ಧಾರಾವಾಹಿ ಚಿತ್ರೀಕರಣದಲ್ಲಿ ರಂಜನಿ ಬ್ಯುಸಿಯಾಗಿದ್ದು ಇದೇ ಮೊದಲ ಬಾರಿ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಕನ್ನಡತಿಯಲ್ಲಿ ಭುವಿ ಪಾತ್ರ ಅನೇಕರಿಗೆ ರೋಲ್ ಮಾಡೆಲ್ ಆಗಿದೆ. ಆದರೆ ಭುವಿಗೆ ಇದ್ದಕ್ಕಿದ್ದಂತೆ ಕನ್ನಡಕ ಕೊಟ್ಟು ಲುಕ್ ಬದಲಾವಣೆ ಮಾಡಿರುವುದಕ್ಕೆ ವೀಕ್ಷಕರು ಕೊಂಚ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.