
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ರಾಧಾಕೃಷ್ಣ ಧಾರವಾಹಿ ಎಲ್ಲರ ನೆಚ್ಚಿನ ಸೀರಿಯಲ್. ಎಲ್ಲಾ ವಯೋಮಾನದವರೂ ನೋಡುವ ಚಂದದ ಧಾರವಾಹಿಯಲ್ಲಿ ಮೂಲ ಕಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಪ್ರಸಾರ ಮಾಡಲಾಗುತ್ತಿದೆ.
ಇಂದಿನ ವೀಕ್ಷಕರು ಮೆಚ್ಚುವಂತೆ ಚಿಕ್ಕಪುಟ್ಟ ಬದಲಾವಣೆ ಮಾಡಿದರೂ ಇದೀಗ ಸೀರಿಯಲ್‌ನಲ್ಲಿ ಮಾಡಿರೋ ಬದಲಾವಣೆಯೊಂದು ಸುದ್ದಿಯಾಗಿದೆ. ರಾಧಾ ಕೃಷ್ಣರ ಪ್ರೇಮ ಕಥೆಯನ್ನು ಸುಂದರವಾಗಿ ತೋರಿಸುತ್ತಿರುವ ರಾಧಾಕೃಷ್ಣ ಸೀರಿಯಲ್‌ನಲ್ಲಿ ಸದ್ಯ ಕೃಷ್ಣ ಮತ್ತು ಬಾಲ್ಯದ ಗೆಳೆಯ ಸುಧಾಮನ ಸಂಬಂಧವನ್ನು ತೋರಿಸಲಾಗುತ್ತಿದೆ.
ಕೃಷ್ಣನ ಪ್ರೇಯಸಿ 'ರಾಧೆ' ಪಾತ್ರಕ್ಕೆ ಜೀವ ತುಂಬಿದ ನಟಿ ಯಾರು ಗೊತ್ತಾ?
ದ್ವಾರಕಕ್ಕೆ ಬಂದ ಸುಧಾಮನ ಎಪಿಸೋಡ್ ಈಗ ಪ್ರಸಾರವಾಗುತ್ತಿದೆ. ದ್ವಾರಕಕ್ಕೆ ಬಂದ ಸುಧಾಮ ಕೃಷ್ಣನಿಗೆ ಉಡುಗೊರೆಯಾಗಿ ತಂದಿದ್ದು ಅಕ್ಕಿಯನ್ನು. ಅದೇ ಅಕ್ಕಿಯಿಂದ ಅನ್ನ ಬೇಯಿಸಿ ಕೃಷ್ಣ ಸ್ವೀಕರಸಿದ್ದಾನೆ ಎಂದು ಸೀರಿಯಲ್‌ನಲ್ಲಿ ತೋರಿಸಲಾಗಿದೆ.
ಆದರೆ ಕೃಷ್ಣನಿಗೆ ಸುಧಾಮ ನೀಡುವ ಉಡುಗೊರೆ ಅವಲಕ್ಕಿ ಎಂಬುದು ಎಲ್ಲರೂ ಕೇಳಿ ಬೆಳೆದಿರುವ ಕಥೆ. ಅವಲಕ್ಕಿ ಇರುವಲ್ಲಿ ಅಕ್ಕಿ ತಂದಿದ್ದೇಕೆ..? ಸುಧಾಮ ತಂದ ಅವಲಕ್ಕಿಯನ್ನು ಕೃಷ್ಣ ಸ್ವೀಕರಿಸುತ್ತಾನೆ. ಆದರೆ ಸೀರಿಯಲ್‌ನಲ್ಲಿ ಅವಲಕ್ಕಿಯ ಬದಲಾಗಿ ಅಕ್ಕಿಯನ್ನು ತೋರಿಸಲಾಗಿದೆ. ಇಂತಹ ಬದಲಾವಣೆ ಏಕೆ ಎನ್ನುವುದು ವೀಕ್ಷಕರ ಪ್ರಶ್ನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.