ಕಪೂರ್ ಖಾಂದಾನ್ ಹುಡುಗಿಯನ್ನು ವರಿಸಲಿದ್ದಾರೆ 'ಮಹಾಭಾರತ'ದ ಅರ್ಜುನ ಪಾತ್ರಧಾರಿ ಶಾಹೀರ್!

Suvarna News   | Asianet News
Published : Oct 28, 2020, 03:29 PM ISTUpdated : Oct 28, 2020, 03:32 PM IST
ಕಪೂರ್ ಖಾಂದಾನ್ ಹುಡುಗಿಯನ್ನು ವರಿಸಲಿದ್ದಾರೆ 'ಮಹಾಭಾರತ'ದ ಅರ್ಜುನ ಪಾತ್ರಧಾರಿ ಶಾಹೀರ್!

ಸಾರಾಂಶ

'ಮಹಾಭಾರತ' ಅರ್ಜುನ್ ಪಾತ್ರಧಾರಿ ವೈಯಕ್ತಿಕ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅದರಲ್ಲೂ ಅವರ ಅರ್ಧಾಂಗಿ ಯಾರು? ಅವರು ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರ ಕಾಮನ್ ಪ್ರಶ್ನೆ. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ......  

ಲಾಕ್‌ಡೌನ್‌ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದುಕೊಂಡ ಧಾರಾವಾಹಿಯೇ ಹಿಂದಿಯ 'ಮಹಾಭಾರತ'. ಪ್ರತಿಯೊಬ್ಬ ಪಾತ್ರಧಾರಿಯೂ ತನ್ನದೇಯಾದ ಅಭಿನಯದಿಂದ ಛಾರು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಅರ್ಜುನ ಪಾತ್ರಧಾರಿ ಶಾಹೀರ್‌ ಶೇಖ್‌ ಅತಿ ಹೆಚ್ಚು ಗಮನ ಸೆಳೆದವರು. ಇದಕ್ಕೆ ಕಾರಣವೇ ಬೇರೆ ಇದೆ....

ದ್ರೌಪದಿ ಕರ್ಣನನ್ನು ಗಂಡನಾಗಿ ಬಯಸಿದ್ದಳಾ? ಇಲ್ಲಿದೆ ಆ ಕತೆ

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುವುದು ಕಾಮನ್. ಅವರ ಗರ್ಲ್‌ಫ್ರೆಂಡ್ ಯಾರು? ಯಾರ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಊಹಾ ಪೋಹ ಉತ್ತರಗಳು ಸಿಗುತ್ತದೆ. ಆದಕ್ಕೆಲ್ಲಾ ದಾರಿ ಮಾಡಿಕೊಡುವುದು ಬೇಡ ಎಂದು ಶಾಹೀರ್‌ ತಮ್ಮ ಪ್ರೇಯಸಿ ಜೊತೆಗಿನ ಫೋಟೋ ರಿವೀಲ್ ಮಾಡಿದ್ದಾರೆ.

ಯಾರಾಕೆ?
ಶಾಹೀರ್‌ ಪ್ರೀತಿಸುತ್ತಿರುವುದು ನಿರ್ಮಾಪಕಿ ಏಕ್ತಾ ಕಪೂರ್ ಆಪ್ತ ಗೆಳತಿ ರುಚಿತಾ ಕಪೂರ್‌ ಅವರನ್ನು. ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆಯಲ್ಲಿ ರುಚಿತಾ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 

 

ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ರುಚಿತಾ ಹಾಗೂ ಶಾಹೀರ್ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಅಗಿದ್ದವು.

ಮಹಾಭಾರತಕ್ಕೆ ಸಂಬಂಧಿಸಿದ ಊರುಗಳು ಈಗೆಲ್ಲೆಲ್ಲಿವೆ ಗೊತ್ತಾ?

ಈ ಹಿಂದೆ ಶಾಹೀರ್‌ 'ನಿನ್ನಿಂದಲೇ' ನಟಿ ಏರಿಕಾ ಫರ್ನಾಂಡಿ ಅವರೊಂದಿಗೆ ಡೇಟ್ ಮಾಡುತ್ತಿದ್ದರು ಎಂಬ ಗುಸು ಗುಸು ಕೇಳಿ ಬಂದಿತ್ತು. 'ನಾವಿಬ್ಬರು ಒಳ್ಳೆಯ ಫ್ರೆಂಡ್ಸ್‌. ಜನರು ತಪ್ಪು ತಿಳಿದುಕೊಳ್ಳುತ್ತಿದ್ದಾರೆ,' ಎಂದು ಹೇಳಿ ಸ್ಪಷ್ಟನೆ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​
ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ: ಶ್ರದ್ಧಾಂಜಲಿ ಬ್ಯಾನರ್​ನಲ್ಲಿ ನಟಿಯ ಕಣ್ಣು-ಬಾಯಿ!